ಚಾರ್ಮಾಡಿ ಘಾಟ್ ನಲ್ಲಿ ಇನೋವಾ ಕಾರು ಪಲ್ಟಿ : ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ 5 ಮಂದಿ ಗಾಯಗೊಂಡ ಘಟನೆ ಮೂಡಿಗೆರೆ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದ್ದು
ಕೋಲಾರದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಕಾರು 20 ಅಡಿ ಪ್ರಪಾತಕ್ಕೆ ಪಲ್ಟಿ ಹೊಡೆದಿದೆ. ಅದೃಷ್ಡವಶಾತ್ ಎಲ್ಲರೂ ಪ್ರಾಣ ಅಪಾಯದ ಇಂದ ಪಾರಾಗಿದ್ದಾರೆ.
News by Raghu shikari-7411515737