ಊಟಕ್ಕಿಲ್ಲದ ಉಪ್ಪಿನಕಾಯಿ ರೂ.35 ಸಾವಿರ ದಂಡ ಕಕ್ಕಿಸಿತು : ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗದ ತೀರ್ಪು

ಊಟಕ್ಕಿಲ್ಲದ ಉಪ್ಪಿನಕಾಯಿ ರೂ.35 ಸಾವಿರ ದಂಡ ಕಕ್ಕಿಸಿತು : ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗದ ತೀರ್ಪು


ಊಟದೊಂದಿಗೆ ಉಪ್ಪಿನಕಾಯಿ ನೀಡದ ಹೊಟೇಲ್‌ ಮಾಲೀಕನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿ ಗ್ರಾಹಕರೋರ್ವರು ಪರಿಹಾರವನ್ನು ಪಡೆದುಕೊಂಡಿದ್ದಾರೆ. ಹೌದು ಗ್ರಾಹಕರೊಬ್ಬರಿಗೆ ಊಟದ ಜೊತೆ ಉಪ್ಪಿನಕಾಯಿ ನೀಡದಿದ್ದಕ್ಕೆ ಹೊಟೇಲ್‌ ಮಾಲೀಕನಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಭಾರಿ ಮೊತ್ತದ ದಂಡವನ್ನು ವಿಧಿಸಿದೆ.

ಗ್ರಾಹಕರೊಬ್ಬರು ಆರ್ಡರ್‌ ಮಾಡಿದ್ದ ಊಟದಲ್ಲಿ ಉಪ್ಪಿನಕಾಯಿ ಮಿಸ್‌ ಆಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ, ಹೊಟೇಲ್‌ ಮಾಲೀಕ ಉಡಾಫೆಯ ಉತ್ತರವನ್ನು ನೀಡಿದ್ದ. ಇದರಿಂದ ಬೇಸರಗೊಂಡ ಆ ವ್ಯಕ್ತಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಊಟದ ಜೊತೆ ಉಪ್ಪಿನಕಾಯಿ ನೀಡದಿದ್ದಕ್ಕೆ ಹೊಟೇಲ್‌ ಮಾಲೀಕನಿಗೆ 35 ಸಾವಿರ ರೂ. ದಂಡ ವಿಧಿಸಿದೆ.


ಈ ಘಟನೆ 2022 ರಲ್ಲಿ ತಮಿಳುನಾಡಿನಲ್ಲಿ ನಡೆದಿದ್ದು, ಇಲ್ಲಿನ ವಿಲ್ಲುಪುರದ ಆರೋಗ್ಯಸ್ವಾಮಿ ಎಂಬ ವ್ಯಕ್ತಿ ತನ್ನ ಮನೆಯ ಕಾರ್ಯಕ್ರಮಕ್ಕಾಗಿ ಹೊಟೇಲ್‌ನಿಂದ 25 ಪ್ಲೇಟ್‌ ಊಟವನ್ನು ಆರ್ಡರ್‌ ಮಾಡಿದ್ದರು. ಉಪ್ಪಿನಕಾಯಿ ಸೇರಿದಂತೆ ಒಟ್ಟು 11 ಬಗೆಯ ಖಾದ್ಯಗಳಿರುವ ಒಂದು ಪ್ಲೇಟ್‌ ಊಟಕ್ಕೆ 80 ರೂಪಾಯಿ ಆಗುತ್ತೆ ಎಂದು ಆ ಹೊಟೇಲ್‌ ಮಾಲೀಕ ಬಿಲ್‌ ಬರೆದು ಕೊಟ್ಟನು. ಆದರೆ ಹೊಟೇಲ್‌ ನೀಡಿದ ಊಟದಲ್ಲಿ ಉಪ್ಪಿನಕಾಯಿ ಮಿಸ್‌ ಆಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೊಟೇಲ್‌ ಮಾಲೀಕ ಉಡಾಫೆಯ ಉತ್ತರವನ್ನು ನೀಡಿದ್ದ. ಅಷ್ಟೇ ಅಲ್ಲದೆ ಉಪ್ಪಿನಕಾಯಿಗೆ ನೀಡಿದ ಹಣವನ್ನು ವಾಪಸ್‌ ಕೇಳಿದರೂ ಹೊಟೇಲ್ ಮಾಲೀಕ ಆ ಹಣವನ್ನು ನೀಡಲು ನಿರಾಕರಿಸಿದ್ದ.
ಇದರಿಂದ ಬೇಸರಗೊಂಡ ಸ್ವಾಮಿ ಆರೋಗ್ಯ ಅಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಎರಡು ವರ್ಷಗಳ ಕಾಲ ನಡೆದು ಇದೀಗ ನ್ಯಾಯಾಲಯ ಹೊಟೇಲ್‌ ಮಾಲೀಕನಿಗೆ 35 ಸಾವಿರ ರೂ. ದಂಡವನ್ನು ವಿಧಿಸಿದೆ.

ಆರೋಗ್ಯ ಸ್ವಾಮಿಯವರಿಗೆ ಪರಿಹಾರ ಮೊತ್ತ ಪಾವತಿಸಲು ಹೊಟೇಲ್‌ ಮಾಲೀಕನಿಗೆ 45 ದಿನಗಳ ಕಾಲಾವಕಾಶವನ್ನು ನೀಡಲಾಗಿದ್ದು, ಒಂದು ಪರಿಹಾರ ಮೊತ್ತವನ್ನು ಹೇಳಿದ ದಿನದೊಳಗೆ ಪಾವತಿಸದಿದ್ದರೆ, ಪ್ರತಿ ತಿಂಗಳು 9% ಬಡ್ಡಿಯೊಂದಿಗೆ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಗ್ರಾಹಕರ ಆಯೋಗ ಹೊಟೇಲ್‌ ಮಾಲೀಕನಿಗೆ ಎಚ್ಚರಿಕೆ ನೀಡಿದೆ.

Admin

Leave a Reply

Your email address will not be published. Required fields are marked *

error: Content is protected !!