ಗುತ್ತಿಗೆ ಆಧಾರದಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ..!

ಗುತ್ತಿಗೆ ಆಧಾರದಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ..!

ಶಿವಮೊಗ್ಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2024-25 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಹೆಚ್.ಎಂ & ಎನ್‍ಯುಹೆಚ್‍ಎಂ) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿ, ನೇರ ಸಂದರ್ಶನ ನಡೆಸಲಾಗುವುದು.

ಖಾಲಿ ಇರುವ ಹುದ್ದೆಗಳ ವಿವರ: ಇಎನ್‍ಟಿ ಸರ್ಜನ್ -01, ಅರವಳಿಕೆ ತಜ್ಞರು -02, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು-01, ವೈದ್ಯರು-24, ನೇತ್ರ ಸಹಾಯಕರು-02, ಆಡಿಯೋಮೆಟ್ರಿಕ್ ಅಸಿಸ್ಟೆಂಟ್-01, ಶ್ರವಣದೋಷವುಳ್ಳ ಮಕ್ಕಳ ಬೋಧಕರು-01, ತಾಲೂಕು ಆಶಾ ಮೇಲ್ವಿಚಾರಕರು-01, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು (ಕಿ.ಮ.ಆ.ಸ) ಎನ್‍ಹೆಚ್‍ಎಂ-02 ಮತ್ತು ಎನ್‍ಯುಹೆಚ್‍ಎಂ- 01, ಶುಶ್ರೂಷಕಿಯರು (ಶುಶ್ರೂಷಣಾಧಿಕಾರಿಗಳು ಮಹಿಳೆಯರು)-24, ಕಿರಿಯ ಪುರಷ ಆರೋಗ್ಯ ಸಹಾಯಕರು (ಆರೋಗ್ಯ ನಿರೀಕ್ಷಣಾಧಿಕಾರಿಗಳು)-01, ಡಿಇಐಸಿ ಮ್ಯಾನೇಜರ್ -01 ಹುದ್ದೆಗಳು.

ತಜ್ಞವೈದ್ಯರು ಮತ್ತು ವೈದ್ಯರು ದೈಹಿಕವಾಗಿ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಲು ಅರ್ಹರಿರಬೇಕು ಹಾಗೂ ದೈಹಿಕ ಪ್ರಮಾಣ ಪತ್ರ ನೀಡುವುದು. ಕೆಎಂಸಿಯ ನೋಂದಣಿಯನ್ನು ಹೊಂದಿರತಕ್ಕದ್ದು. ಹಾಗೂ ಸರ್ಕಾರದ ನಿಯಮಾವಳಿಯಂತೆ ಎನ್.ಹೆಚ್.ಎಂ /ಎನ್‍ಯುಹೆಚ್‍ಎಂ ಮಾರ್ಗಸೂಚಿಯಂತೆ ಹುದ್ದೆವಾರು ವಯೋಮಿತಿ ಪರಿಗಣಿಸಲಾಗುವುದು.

ಹುದ್ದೆಗಳನ್ನು ಕಡಿತಗೊಳಿಸುವುದು ಮತ್ತು ಹೆಚ್ಚಿಸುವುದು ಹಾಗೂ ಅರ್ಜಿಯನ್ನು ತಿರಸ್ಕರಿಸುವುದು ಜಿಲ್ಲಾ ಆರೋಗ್ಯ ಸಂಘದ ನಿರ್ಧಾರವೇ ಅಂತಿಮವಾಗಿರುತ್ತದೆ.
ಎನ್.ಹೆಚ್.ಎಂ /ಎನ್‍ಯುಹೆಚ್‍ಎಂ ಮಾರ್ಗಸೂಚಿಯಂತೆ ನೇಮಕಾತಿಯ ಮೆರಿಟ್ ಕಂ ರೋಸ್ಟರ್ ಆಧಾರದ ಮೇಲಿನ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 2-5 ವರ್ಷಗಳ ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಹಾಗೂ ಕ್ರ.ಸಂ 11ಕ್ಕೆ ಸಂಬಂಧಿಸಿದಂತೆ ವಾಸಸ್ಥಳದ ಬಗ್ಗೆ ಪಾಲಿಕೆ/ಸಂಬಂಧಿಸಿದ ಪಂಚಾಯತ್‍ನಿಂದ ದೃಢೀಕರಣ ಪತ್ರ ಮತ್ತು ಸ್ವವಿವರದೊಂದಿಗೆ ಹಾಜರಾಗಬಹುದು.

ದಿನಾಂಕ : 11.07.2024 ರಂದು ಬೆಳಗ್ಗೆ 10.30 ರಿಂದ ಮಾಧ್ಯಾಹ್ನ 1.30 ರ ವರೆಗೆ ಅರ್ಜಿ ನಮೂನೆಗಳನ್ನು ಎನ್‍ಹೆಚ್‍ಎಂ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿಹೆಚ್‍ರಸ್ತೆ, ಶಿವಮೊಗ್ಗ ಇಲ್ಲಿ ವಿತರಿಸಲಾಗುವುದು ಹಾಗೂ ಅದೇ ದಿನ ಎಲ್ಲಾ ಹುದ್ದೆಯ ಮೂಲ ದಾಖಲಾತಿಗಳ ಪರಿಶೀಲನೆಯನ್ನು ನಡೆಸಿ, ಸಂಜೆ 5.30 ರವರೆಗೆ ನೇರ ಸಂದರ್ಶನ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗೆ ದೂ.ಸಂ: 08182-200337 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಸಂಘ ಹಾಗೂ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಜಾಹೀರಾತುಗಳಿಗಾಗಿ:7411515737

Admin

Leave a Reply

Your email address will not be published. Required fields are marked *

error: Content is protected !!