ಸಾಗರದಲ್ಲಿ ಬಾವಿಗೆ ಬಿದ್ದು ಮಗು ಸಾವು..!

ಸಾಗರದಲ್ಲಿ ಬಾವಿಗೆ ಬಿದ್ದು ಮಗು ಸಾವು..!

ಸಾಗರ: ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವನ್ನಪ್ಪಿದ ಘಟನೆ ನಗರದ ಎಸ್‌ಎನ್ ನಗರದಲ್ಲಿ ಬುಧವಾರ ನಡೆದಿದೆ.

ಮನೆ ಹಿಂಭಾಗದ ಬಳಿ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಮನ್ನತ್ (3 ) ಮೃತಪಟ್ಟಿದ್ದಾಳೆ. ಬಾಲಕಿ ಆಟವಾಡುತ್ತಾ ಬಾವಿ ಬಳಿ ತೆರಳಿದ್ದಾಳೆ. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ. ಮಗುವಿನ ತಾಯಿ ತಕ್ಷಣ ನೋಡಿ ಕೂಗಿಕೊಂಡಿದ್ದಾರೆ.

ಸ್ಥಳೀಯರು ಮಗುವನ್ನು ಮೇಲಕ್ಕೆತ್ತಿದ್ದು, ಮಗುವಿನ ತಲೆ ಹಾಗೂ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮನ್ನತ್ ಅಷ್ಟಾರಲ್ಲಾಗಲೇ ಮೃತಪಟ್ಟಿದೆ‌.

Admin

Leave a Reply

Your email address will not be published. Required fields are marked *

error: Content is protected !!