ಈವರೆಗೆ ದೇಶಾದ್ಯಂತ 4,650 ಕೋಟಿ ರೂಪಾಯಿ ಮೌಲ್ಯದ ವಸ್ತು ವಶ: ಚು.ಆಯೋಗ

ಈವರೆಗೆ ದೇಶಾದ್ಯಂತ 4,650 ಕೋಟಿ ರೂಪಾಯಿ ಮೌಲ್ಯದ ವಸ್ತು ವಶ: ಚು.ಆಯೋಗ


ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಈವರೆಗೆ ದೇಶಾದ್ಯಂತ ನಗದು, ಮದ್ಯ, ಡ್ರಗ್ಸ್​ ಹಾಗೂ ಉಚಿತ ಉಡುಗೊರೆ ಸೇರಿದಂತೆ 4,650 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ತಿಳಿಸಿದೆ.


ಇದು 75 ವರ್ಷಗಳ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತವೆಂದು ಆಯೋಗ ಹೇಳಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 3475 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು.

ನಗದು, ಮದ್ಯ, ಡ್ರಗ್ಸ್​, ಬೆಲೆಬಾಳುವ ಲೋಹಗಳು ಮತ್ತು ಹಲವಾರು ಇತರ ಉಚಿತಗಳನ್ನು ಒಳಗೊಂಡಂತೆ ಮತದಾರರನ್ನು ಸೆಳೆಯುವ ವಿವಿಧ ವಸ್ತುಗಳು ಆಯೋಗವು ವಶಪಡಿಸಿಕೊಂಡ ಪಟ್ಟಿಯಲ್ಲಿದೆ. ಈ ಪಟ್ಟಿಯಲ್ಲಿ ಡ್ರಗ್ಸ್​ ಮತ್ತು ಮಾದಕವಸ್ತುಗಳು ಶೇ. 45 ರಷ್ಟಿದೆ.
ಸಮಗ್ರ ಯೋಜನೆ, ಸ್ಕೇಲ್ ಅಪ್ ಸಹಯೋಗ ಮತ್ತು ಏಜೆನ್ಸಿಗಳಿಂದ ಏಕೀಕೃತ ತಡೆ ಕ್ರಮ, ನಾಗರಿಕರ ಭಾಗವಹಿಸುವಿಕೆ ಮತ್ತು ತಂತ್ರಜ್ಞಾನದ ಸೂಕ್ತ ತೊಡಗಿಸಿಕೊಳ್ಳುವಿಕೆಯಿಂದ ಇಷ್ಟೊಂದು ಹಣವನ್ನು ಸೀಜ್​ ಮಾಡಲು ಸಾಧ್ಯವಾಯಿತು ಎಂದು ಆಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Admin

Leave a Reply

Your email address will not be published. Required fields are marked *

error: Content is protected !!