ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಲೋಕಸಭೆಯ 28 ಕ್ಷೇತ್ರಗಳಲ್ಲಿ ಗೆಲವು ನಿಶ್ಚಿತ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಲೋಕಸಭೆಯ 28 ಕ್ಷೇತ್ರಗಳಲ್ಲಿ ಗೆಲವು ನಿಶ್ಚಿತ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಶಿಕಾರಿಪುರ ಪಟ್ಟಣದ ಮಾರಿಕಾಂಬಾ ರಂಗಮಂದಿರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಉದ್ಘಾಟಿಸಿದರು.

ಈ‌‌ ಸಂದರ್ಭದಲ್ಲಿ ಮಾತನಾಡಿದ‌ ಅವರು
ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಧಾನಿ, ಅಭಿವೃದ್ಧಿ ಕಾರ್ಯಗಳನ್ನು ಕ್ರಾಂತಿಯ ಸ್ವರೂಪದಲ್ಲಿ ಕೈಗೊಂಡ ವಿಕಸಿತ ಭಾರತದ ರೂವಾರಿ ಪ್ರಧಾನಿ ನರೇಂದ್ರ ಮೋದಿಯವರು ಹಿಂದುಳಿದ ಸಮುದಾಯದಿಂದ ಬಂದವರು ಎನ್ನುವುದು ಹಿಂದುಳಿದ ಸಮುದಾಯದ ಬಂಧುಗಳ ಹೆಮ್ಮೆಯಾಗಿದೆ.

ರಾಜ್ಯದ ಯಾವುದೇ ಬೂತ್ ಮಟ್ಟದಲ್ಲೂ ಹಿಂದುಳಿದ ಸಮುದಾಯಗಳ ಮತದಾರರಿಲ್ಲದ ಬೂತ್ ಕಾಣಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ 28ಕ್ಕೆ 28 ಸ್ಥಾನಗಳನ್ನು ಮೋದಿಯವರಿಗೆ ಸಮರ್ಪಿಸುವ ನಿಟ್ಟಿನಲ್ಲಿ ಅವರನ್ನು ಮಗದೊಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪದಲ್ಲಿ ಹಿಂದುಳಿದ ಸಮುದಾಯಗಳ ಪಾತ್ರ ಸಿಂಹಪಾಲಾಗಿದ್ದು ಒಬಿಸಿ ಮೋರ್ಚಾ ಕಾರ್ಯಕರ್ತರು ಹಾಗೂ ಬಂಧುಗಳು ವಿರಮಿಸದೇ ಶ್ರಮಿಸುವ ಸಂಕಲ್ಪ ಎಂದರು.

ಈ‌ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಂಸದ ಬಿವೈ ರಾಘವೇಂದ್ರ ಅವರನ್ನು ಅತೀ‌ ಹೆಚ್ಚು ಮತಗಳಿಂದ ತಾಲೂಕಿನ ಮತದಾರರು ಆರ್ಶಿವಾದ ಮಾಡಬೇಕಾಗಿದೆ ರಾಜ್ಯದಲ್ಲಿ ಜೆಡಿಎಸ್ -ಬಿಜೆಪಿ‌ ಮೈತ್ರಿಯಲ್ಲಿ 28 ಕ್ಕೆ 28 ಕ್ಷೇತ್ರಗಳಲ್ಲಿ ಗೆಲವು ನಿಶ್ಚಿತ ಎಂದರು.

ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಸಂಸದ ರಾಘವೇಂದ್ರ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಎಂಡಿ ಲಕ್ಷ್ಮಿನಾರಾಯಣ್, ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ ಗೌಡ,ಬಿಜೆಪಿ ಮುಖಂಡರಾದ ರಾಜು ತಲ್ಲೂರು, ಗುರುಮೂರ್ತಿ, ಹೆಚ್.ಟಿ ಬಳಿಗಾರ್, ಒಬಿಸಿ ಜಿಲ್ಲಾಧ್ಯಕ್ಷರಾದ ಸುಧಾಕರ್, ತಾಲ್ಲೂಕು ಅಧ್ಯಕ್ಷರಾದ ಹನುಮಂತಪ್ಪ, ಮಿಲಿಟರಿ ಬಸವರಾಜು, ರಾಘವೇಂದ್ರ ‌ಮಾಜಿ, ಸೇರಿದಂತೆ ಮುಖಂಡರು ಕಾರ್ಯಕರ್ತರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!