ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಹೆಸರನ್ನು ಚುನಾವಣೆಗೆ ಮಾತ್ರ ಬಳಸಿಕೊಂಡಿದೆ: ಬಿ ವೈ ವಿಜಯೇಂದ್ರ 

ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಹೆಸರನ್ನು ಚುನಾವಣೆಗೆ ಮಾತ್ರ ಬಳಸಿಕೊಂಡಿದೆ: ಬಿ ವೈ ವಿಜಯೇಂದ್ರ 

ಶಿಕಾರಿಪುರ ಪಟ್ಟಣದ ಸಂತೆ ಮೈದಾನದಲ್ಲಿ ಭಾರತೀಯ ಜನತಾ ಪಕ್ಷ ತಾಲ್ಲೂಕು ಎಸ್.ಸಿ/ಎಸ್.ಟಿ ಮೋರ್ಚಾ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷ ಶತಮಾನಗಳಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡು ಚುನಾವಣೆಯಲ್ಲಿ ಮತಗಳಿಕೆ‌‌ ಮಾತ್ರ ಮಾಡಿದೆ ಅದರೆ‌‌ ಅಂಬೇಡ್ಕರ್ ಅವರಿಗೆ ಸಿಗಬೇಕಾದ ಗೌರವ ವನ್ನು ಎಂದಿಗೂ ನೀಡಿಲ್ಲ ಅಂಬೇಡ್ಕರ್ ಅವರು ಮೃತರಾದಾಗ ದೆಹಲಿಯಲ್ಲಿ ಒಂದು ಅಡಿ ಜಾಗವನ್ನು ನೀಡಲಿಲ್ಲ ಚುನಾವಣೆಯಲ್ಲಿ ಅವರ ವಿರುದ್ದ ಅಭ್ಯರ್ಥಿಯನ್ನು ಹಾಕಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷದವರು ಈ ರೀತಿ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ನವರು ಇಂದು ಅವರ ಹೆಸರನ್ನು ಹೇಳಿಕೊಂಡು ದಲಿತ ಮತಗಳಿಕೆಗೆ ಮುಂದಾಗಿದೆ ಎಂದರು.

ಡಾ.ಬಿ.ಆರ್‌ ಅಂಬೇಡ್ಕರ್ ಅವರ ಜನ್ಮ ಸ್ಥಳಕ್ಕೆ ಮೊದಲು ಭೇಟಿ ನೀಡಿ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಇದುವರೆಗೂ ಯಾವ ಪ್ರಧಾನಿಯೂ ಅಲ್ಲಿಗೆ ಬೇಟಿ ನೀಡಿಲ್ಲ ಪ್ರಧಾನಿ ನರೇಂದ್ರ ‌ಮೋದಿ ಅವರು ಅಂಬೇಡ್ಕರ್ ರವರ ಜೀವನ ಸಾಧನೆಯನ್ನು ಜಗತ್ತಿಗೆ ಪರಿಚಯಿಸಲು ಅಂಬೇಡ್ಕರ್ ಅವರ 5 ಸ್ಥಳಗಳನ್ನು ಪಂಚಾಧಾಮ ಹೆಸರಿನಲ್ಲಿ  ಅಭಿವೃದ್ಧಿ ಪಡಿಸಲಾಗಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಅಧಿಕಾರ ಅವಧಿಯಲ್ಲಿ ವಾಲ್ಮಿಕಿ ಜಯಂತಿ, ದಲಿತ ಕಾಲೋನಿ ಅಭಿವೃದ್ಧಿ , ತಾಂಡ ಅಭಿವೃದ್ಧಿ ನಿಗಮ‌ ಸ್ಥಾಪನೆ ಭೋವಿ ಹಾಗೂ ದಲಿತ ಮಠಗಳಿಗೆ ಅನುದಾನ ನೀಡುವ ಮೂಲಕ ದೀನ ದಲಿತ ಪರಿಶಿಷ್ಟ ಜನಾಂಗದ ಏಳಿಗೆಗೆ ಶ್ರಮಿಸಿದ್ದಾರೆ ಲೋಕಸಭಾ ಚುನಾವಣೆಯಲ್ಲಿ ಸಂಸದ ಬಿವೈ ರಾಘವೇಂದ್ರ ‌ಅವರನ್ನು ಮತ್ತೊಮ್ಮೆ ಅತೀ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದರು.

ಈ‌ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಸುನಿಲ್ ವಲ್ಲ್ಯಾಪುರೆ,ಸಂಸದ‌ ಬಿವೈ ರಾಘವೇಂದ್ರ, ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ, ಮಾಜಿ ಶಾಸಕ ಅಶೋಕ್ ನಾಯ್ಕ್, ಕುಡುಚಿ ರಾಜೀವ್,  ರಾಜು ಗೌಡ, ಎಸ್. ಸಿ. ಮೋರ್ಚಾ ಜಿಲ್ಲಾಧ್ಯಕ್ಷ ರಾಮು ನಾಯ್ಕ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಸೇರಿದಂತೆ  ಎಸ್‌ ಸಿ ಎಸ್ಟಿ ಸಮುದಾಯದ ಅನೇಕ  ಮುಖಂಡರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!