ಜಾತಿಯನ್ನು ಮೀರಿ ನೀತಿಯನ್ನು ನೀಡುವ ಯೋಜನೆಯೇ ಗ್ಯಾರಂಟಿ ಯೋಜನೆ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಜಾತಿಯನ್ನು ಮೀರಿ ನೀತಿಯನ್ನು ನೀಡುವ ಯೋಜನೆಯೇ ಗ್ಯಾರಂಟಿ ಯೋಜನೆ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಶಿವಮೊಗ್ಗ ‌: ಜಾತಿಯನ್ನು ಮೀರಿ ನೀತಿಯನ್ನು ನೀಡುವ ಯೋಜನೆಯೇ ಗ್ಯಾರಂಟಿ ಯೋಜನೆ‌ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಸರ್ವ ಜನಾಂಗದ ಅಭಿವೃದ್ಧಿಗಾಗಿ ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ‌ ಶಿವಕುಮಾರ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ ವತಿಯಿಂದ ಶ್ರೀ ಅಲ್ಲಮಪ್ರಭು ಉದ್ಯಾನವನ ಆವರಣದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಗ್ಯಾರಂಟಿ ‌ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆ ಶಿವಪ್ಪ ನಾಯಕ ಆಡಳಿದ ನಾಡು ಹೋರಾಟಗಾರರು, ಸಮಾಜವಾದಿ ನಾಯಕರ ನೀಡಿದ್ದು 4 ಜನ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಗಳನ್ನು ಬೆಳಗುತ್ತಿದೆ ನಮ್ಮ 5 ಯೋಜನೆಗಳಿಂದ ಬಡ ಕೂಲಿ ಕಾರ್ಮಿಕ ವರ್ಗದವರ ಬದಕು ಸುಧಾರಣೆ ‌ಆಗಿದೆ.

ಅನ್ನಭಾಗ್ಯ ಯೋಜನೆಯಿಂದ ಹಸಿವು ಮುಕ್ತ ರಾಜ್ಯವಾಗಿದೆ, ಶಕ್ತಿಯೋಜನೆ‌ ಯುವ ಮಹಿಳೆಯರ ಸ್ವಾವಲಂಬಿ ಬದುಕಿದೆ ಸಹಕಾರಿಯಾಗಿದೆ.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು‌ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಜಾತಿ ಗಿಂತ ನೀತಿ ಮಿಗಿಲು ಎನ್ನುವಂತೆ ನೀತಿಯ ಮೇಲೆ ನಮ್ಮ ಯೋಜನೆಗಳನ್ನು ನೀಡಲಾಗಿದೆ ಹಿಂದುಳಿದ,‌ಬಡ ಕೂಲಿ ಕಾರ್ಮಿಕರ ಬದುಕನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಸರ್ಕಾರ ತೆಗೆದುಕೊಂಡಿದೆ.

1 ಕೋಟಿಗೂ ಅಧಿಕ ಮಹಿಳೆಯರು ಗೃಹ ಲಕ್ಷ್ಮಿ ಹಣವನ್ನು ಪಡೆಯುತ್ತಿದ್ದಾರೆ, ಯುವ ನಿಧಿ, ಗೃಹಜ್ಯೋತಿ, ಶಕ್ತಿ ಯೋಜನೆಗಳ ಪಡೆಯುತ್ತಿರುವ ಫಲಾನುಭವಿಗಳು ಯಾವುದೇ ಆತಂಕ ಪಡುವ ಅಗತ್ಯ ಈ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲ ಇನ್ನೂ 9 ವರ್ಷಗಳ ಕಾಲ‌ ಮುಂದುವರಿಯಲಿದೆ ಎಂದರು.

ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಗ್ರಾಮೀಣ ಮಟ್ಟದಲ್ಲಿ ಸಮಿತಿ ಯನ್ನು ರಚಿಸಲಾಗುವುದು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ .

ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನಡೆಸುತ್ತಿದ್ದಾರೆ ಈ ಯೋಜನೆಗೆ ಶಕ್ತಿ ತುಂಬಲು ನೂತನವಾಗಿ ‌1 ಸಾವಿರ ಬಸ್ ಗಳನ್ನು ಆರಂಭಿಸಲಾಗಿದೆ‌

ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ನೀಡಲಾಗಿದ್ದು ಈ ಯೋಜನೆಯ ಮೂಲಕ 1.5 ಕೋಟಿ ಮನೆಗಳಿಗೆ ಬೆಳಕು ನೀಡಲಾಗಿದೆ.

ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಮತ್ತು 5 ಕೆಜಿ ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳಿಗೆ ಖಾತೆ ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ರೂ 2 ಸಾವಿರ ಹಣವನ್ನು ರಾಜ್ಯದ 1.10 ಕೋಟಿ ಮಹಿಳೆಯರಿಗೆ ನೀಡಲಾಗಿದೆ. ಯುವನಿಧಿ ಯೋಜನೆಯಡಿ ಉದ್ಯೋಗ ಹುಡುಕವ ಪದವಿಧರ ಯುವ ಜನತೆಗೆ 3 ಸಾವಿರರೂ ನೀಡುವ ಯೋಜನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಈ ಯೋಜನೆಯನ್ನು ಪಡೆಯುತ್ತಿದ್ದಾರೆ ಎಂದರು‌.

ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲ ಕೃಷ್ಣ, ಶಾಸಕಿ ಶಾರದ ಪೂರ್ಯನಾಯ್ಕ್, ಸೇರಿ ಜಿಲ್ಲಾ ಕಾಂಗ್ರೆಸ್ ‌ಮುಖಂಡು ಕಾರ್ಯಕರ್ತ ಇದ್ದರು.

Admin

Leave a Reply

Your email address will not be published. Required fields are marked *

error: Content is protected !!