ಪ್ರಧಾನಿ ಮೋದಿಯಿಂದ ಪ್ರಭು ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದೇಶದಲ್ಲಿ ಮುಗಿಲುಮಟ್ಟಿದ ಜೈ ಶ್ರೀರಾಮ್ ಘೋಷಣೆ..!

ಪ್ರಧಾನಿ ಮೋದಿಯಿಂದ ಪ್ರಭು ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದೇಶದಲ್ಲಿ ಮುಗಿಲುಮಟ್ಟಿದ ಜೈ ಶ್ರೀರಾಮ್ ಘೋಷಣೆ..!

ಅಯೋಧ್ಯೆ: ಹಿಂದೂಗಳ 500 ವರ್ಷಗಳ ಕನಸು ಇಂದು ನನಸಾಗಿದ್ದು ‌ಭವ್ಯ ರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾನೆಗೊಂಡಿದ್ದು ಜೊತೆಯಲ್ಲಿ ದೇಶದಾದ್ಯಂತ ಜೈಶ್ರೀರಾಮ್ ಘೋಷಣೆ ಮುಗಿಲುಮುಟ್ಟಿದೆ.

ಯುಗಗಳ ಹಿಂದೆ ಅಯೋಧ್ಯೆಯಲ್ಲಿ ದಶರಥನ ಪುಣ್ಯಧಾಮದಲ್ಲಿ ಅವತಾರವೆತ್ತಿದ ಸೂರ್ಯ ವಶಂಜ, ರಘುಕುಲ ತಿಲಕ, ಮರ್ಯಾದಾ ಪುರುಷೋತ್ತಮ ಇಂದು ಕಲಿಯುಗದಲ್ಲಿ ಮತ್ತೆ ಅವತರಿಸಿದ್ದಾನೆ. ಶತ ಶತಮಾನಗಳ ಕನಸು, ಕೋಟ್ಯಂತರ ರಾಮ ಭಕ್ತರ ಅವಿರತ ಹಾರೈಕೆ, ಅದೆಷ್ಟೋ ಕರಸೇವಕರ ಪರಿಶ್ರಮದ ಫಲವಿಂದು ಭರತ ಖಂಡದ ಪುಣ್ಯ ಪುರ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮ ಮೂರ್ತಿಗೆ ಅಭಿಜಿನ್ ಸುಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆದಿದೆ.

12 ಗಂಟೆ ವೇಳೆಗೆ ರೇಷ್ಮೆ ವಸ್ತ್ರ ಧರಿಸಿ, ತಮ್ಮ ಕೈಯಲ್ಲಿ ರಾಮಲಲ್ಲಾಗಾಗಿ ನೂತನ ವಸ್ತ್ರ ಹಾಗೂ ಬೆಳ್ಳಿಯ ಛಾತ್ರಾ ಹಿಡಿದು ಭಕ್ತಿಭಾವದಿಂದ ಮಂದಿರದೊಳಗೆ ನಡೆದು ಬಂದರು.

ಪ್ರಧಾನಿಯವರ ಆಗಮನದ ನಂತರ ಪ್ರಾಣಪ್ರತಿಷ್ಠಾಪನಾ ವಿಧಿವಿಧಾನಗಳು ಆರಂಭವಾದವು.  ರಾಮ ಮಂದಿರ ಗರ್ಭಗುಡಿಗೆ ತೆರಳಿದ ಮೋದಿ, ಬೆಳ್ಳಿ ಛಾತ್ರ ಹಾಗೂ ವಸ್ತ್ರ ರಾಮಲಲ್ಲಾಗೆ ಅರ್ಪಿಸಿದ್ದಾರೆ. 

ಬಳಿಕ ಪ್ರಾಣಪ್ರತಿಷ್ಠೆ ಪೂಜಾ ವಿಧಿವಿಧಾನಗಳು ಆರಂಭಗೊಂಡಿತು. ಯಜಮಾನನ ಸ್ಥಾನದಲ್ಲಿ ನಿಂತು ಪ್ರಧಾನಿ ಮೋದಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಪೂಜಾ ಕೈಂಕರ್ಯಗಳು ನಡಸಿದರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಲರಾಮನ ಪ್ರಾಣಪ್ರತಿಷ್ಠೆಯಲ್ಲಿ ಭಾಗವಹಿಸಿದ್ದಾರೆ. ಸುಮಾರು ಏಳು ಸಾವಿರ ಮಂದಿ ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ, ಕೋಟ್ಯಂತರ ಜನರು ನೇರಪ್ರಸಾರದಲ್ಲಿ ನೋಡುತ್ತಿದ್ದಂತೆ ಕೋಟಿ ಕೋಟಿ ಜನರ ಹೃದಯ ಕಮಲದಲ್ಲಿ ನೆಲೆನಿಂತಿರುವ ಪ್ರಭು ರಾಮ ಕಣ್ಣರಳಿಸಿ ದರ್ಶನ ನೀಡಿದ್ದಾನೆ.

ಈ ವೇಳೆ ಗರ್ಭಗುಡಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್’ಎಸ್’ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್,ಪೇಜಾವರ ಶ್ರೀ ಆಯೋಧ್ಯೆ ಅರ್ಚರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!