ಲಂಚ ಸ್ವೀಕರಿಸುವ ವೇಳೆ ಬಗನಕಟ್ಟೆ ಗ್ರಾ.ಪಂ. ಪಿಡಿಓ ಮಂಜುನಾಥ ಲೋಕಾಯುಕ್ತ ಬಲೆಗೆ

ಶಿಕಾರಿಪುರ ತಾಲೂಕು ಸಂಕ್ಲಾಪುರ ವಾಸಿ ಸಾಕಮ್ಮ ಕೋಂ ವೆಂಕಟೇಶಪ್ಪ ಎಂಬುವವರ ಮನೆಯು 2021ರ ಮಹಾ ಮಳೆಯಿಂದ ಮೇಲ್ಚಾವಣಿ ಮತ್ತು ಗೋಡೆ ಕುಸಿದು ಬಿದ್ದ ಕಾರಣ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪುನರ್ ನಿರ್ಮಾಣಕ್ಕಾಗಿ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಜಿಪಿಎಸ್‍ನಲ್ಲಿ ಮಾಹಿತಿ ಸಂಗ್ರಹಿಸಿ ವರದಿ ಮಾಡಲು ಬಗನಕಟ್ಟೆ ಗ್ರಾಮ ಪಂಚಾಯತಿ ಪಿಡಿಓ ಮಂಜುನಾಥನವರು ಸಾಕಮ್ಮರವರಿಂದ ಇಪ್ಪತ್ತು ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆಯಿಟ್ಟು, ಅದರಲ್ಲಿ ರೂ. 13,000/- ಪಡೆದು ಬಾಕಿ ಹಣವನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸ್‍ರು ಬಂಧಿಸಿದ್ದಾರೆ.

ಸಾಕಮ್ಮರವರಿಗೆ ಮನೆಯ ಪುನರ್ ನಿರ್ಮಾಣ ಕಾರ್ಯಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ರೂ. 5.00ಲಕ್ಷಗಳ ಪರಿಹಾರ ಧನ ಮಂಜೂರಾಗಿದ್ದು, ಮನೆಯ ಪುನರ್ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ.
ನೆರೆ ಸಂತ್ರಸ್ಥರ ಪುನರ್ ವಸತಿ ಯೋಜನೆಯಂತೆ ಕಂತಿನ ಹಣ ರೂ. 1.00 ಲಕ್ಷಗಳಣ್ನು ಬಿಡುಗಡೆ ಮಾಡಲು ಸಂಬಂಧ ಪಿ.ಡಿ.ಓ ಮಂಜುನಾಥ ಮತ್ತೊಮ್ಮೆ ರೂ. 6000/- ಗಳ ಲಂಚಕ್ಕೆ ಬೇಡಿಕೆಯಿಟ್ಟಿರುತ್ತಾರೆ. ಸಾಕಮ್ಮನವರು ಶಿವಮೊಗ್ಗ ಲೋಕಾಯುಕ್ತ ಕಚೇರಿಗೆ ದೂರ ಕೊಟ್ಟ ಮೇರೆಗೆ ನ. 15 ರಂದು ಪ್ರಕರಣ ದಾಖಲಾಗಿರುತ್ತದೆ.

ನ. 16 ರಂದು ಬಗನಕಟ್ಟೆ ಗ್ರಾ.ಪಂ. ಪಿಡಿಓ ಮಂಜುನಾಥ ಇವರು ಸಾಕಮ್ಮರವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ, ಲಂಚದ ಹಣ ರೂ. 6000/- ವಶಪಡಿಸಿಕೊಂಡು, ಪೊಲೀಸ್ ನಿರೀಕ್ಷಕ ಪ್ರಕಾಶ್‍ರವರು ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ.

ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ, ಪೊಲೀಸ್ ನಿರೀಕ್ಷಕ ಹೆಸ್.ಎಸ್. ಸುರೇಶ್ ಮತ್ತು ಪೋಲೀಸ್ ಸಿಬ್ಬಂದಿಗಳಾದ ಎಸ್.ಕೆ. ಪ್ರಸನ್ನ ಸಿ.ಹೆಚ್.ಸಿ, ಮಹಂತೇಶ ಸಿ.ಹೆಚ್.ಸಿ., ಬಿ.ಟಿ ಚನ್ನೇಶ ಸಿ.ಪಿ.ಸಿ., ಪ್ರಶಾಂತ್ ಕುಮಾರ್ ಸಿ.ಪಿ.ಸಿ., ರಘುನಾಯ್ಕ ಸಿ.ಪಿ.ಸಿ., ಸುರೇಂದ್ರ ಸಿ.ಪಿ.ಸಿ., ಅರುಣ್ ಕುಮಾರ್ ಸಿ.ಪಿ.ಸಿ., ದೇವರಾಜ್, ಸಿ.ಪಿ.ಸಿ., ಪುಟ್ಟಮ್ಮ ಮ.ಪಿ.ಸಿ., ಪ್ರದೀಪ್‍ಕುಮಾರ್, ಎ.ಪಿ.ಸಿ., ತರುಣ್ ಕುಮಾರ್ ಎಪಿಸಿ., ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
News By: Raghu Shikari-7411515737