ಕನ್ನಡ ಯುವಕ ಸಂಘದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ..!

ಶಿಕಾರಿಪುರ ಪಟ್ಟಣದ ರಂಗಮಂದಿರದಲ್ಲಿ ಕನ್ನಡ ಯುವಕ ಸಂಘದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಸಲಾಯಿತು.

ಕನ್ನಡ ಯುವಕ ಸಂಘದ ಅಧ್ಯಕ್ಷರಾದ ರಾಜು ಅವರು ಕರ್ನಾಟಕ ದ್ವಜಾರೋಹಣವನ್ನು ನೆರವೇರಿಸಿದರು.

ಈ ಸಂದರ್ಭ ತಹಶಿಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಮೆರವಣಿಗೆಗೆ ಚಾಲನೆ ನೀಡಿದರು ಈ ವೇಳೆ ಶಾಲಾ ಮಕ್ಕಳು ಕನ್ನಡ ಕವಿಗಳು ರಾಷ್ಟ್ರೀಯ ನಾಯಕ ವೇಷಭೂಷಣ ಕಂಗೊಳಿಸಿದರು.

ವಿವಿಧ ಶಾಲೆಯ ವತಿಯಿಂದ ಪರಿಸರ ಜಾಗೃತಿ ಕನ್ನಡ ,ಜಾಗೃತಿ ಹಾಗೂ ವಿವಿಧ ಕಲಾಕೃತಿಗಳ ಮೆರವಣಿಗೆಯಲ್ಲಿ ಭಾಗವಹಿಸಿದವು

ಈ ಸಂದರ್ಭದಲ್ಲಿ ಡಿವೈಎಸ್ ಪಿ ಶಿವಾನಂದ, ಮುಖ್ಯಾಧಿಕಾರಿ ಭರತ್ , ಕನ್ನಡ ಯುವಕ ಸಂಘದ ಮಾಜಿ ಅಧ್ಯಕ್ಷರು ಅಜೀವ ಸದಸ್ಯರು ವಿದ್ಯಾರ್ಥಿಗಳು ಇದ್ದರು.
News By: Raghu Shikari-7411515737