ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಸ್ವಕ್ಷೇತ್ರದಲ್ಲಿಯೇ ಮುಖಭಂಗವಾಯ್ತಾ..?

ಶಿಕಾರಿಪುರ: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ತಾಲೂಕಿನ ಶಾಸಕ ಬಿವೈ ವಿಜಯೇಂದ್ರ ಅವರಿಗೆ ತಮ್ಮ ಸ್ವ ಕ್ಷೇತ್ರದಲ್ಲಿ ಮುಖಭಂಗವಾಗುವಂತ ಘಟನೆ ನಡೆದಿದೆ.

ತಾಲೂಕಿನ ತರಲಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಿಲಿತ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ.

ತರಲಘಟ್ಟ ಗ್ರಾಮ ಪಂಚಾಯತಿ ಯಲ್ಲಿ ಒಟ್ಟ16 ಜನ ಸದಸ್ಯರನ್ನು ಹೊಂದಿದ್ದು ಇದರಲ್ಲಿ 8 ಬಿಜೆಪಿ 8 ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದು ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಹೊಂದಿದ್ದು ಬಿಜೆಪಿ ಆಡಳಿತದಲ್ಲಿದ ಗ್ರಾಮ ಪಂಚಾಯತಿಯ ಆಡಳಿತವನ್ನು ಕಾಂಗ್ರೆಸ್ ಪಕ್ಷ ತಮ್ಮ ತೆಕ್ಕೆಗೆ ತೆಗೆದುಕೊಂಡಿದೆ.

ಕಾಂಗ್ರೆಸ್ ಬೆಂಬಲಿತ 14 ಮತಗಳೊಂದಿಗೆ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಪಡೆದುಅಧ್ಯಕ್ಷರಾಗಿ ಮಂಜಮ್ಮ ಉಪಾಧ್ಯಕ್ಷರಾಗಿ ಕುಮಾರ್ ಆಯ್ಕೆಯಾಗಿದ್ದಾರೆ ಬಿಜೆಪಿ ಕೆವಲ 2 ಮತಗಳನ್ನು ಪಡೆದುಕೊಂಡಿದೆ.

ಈ ವೇಳೆ ಕಾಂಗ್ರೇಸ್ ಮುಖಂಡರಾದ ರಾಘವೇಂದ್ರ ನಾಯ್ಕ್ ಮಾತನಾಡಿ ಶಿಕಾರಿಪುರ ತಾಲೂಕಿನ ಶಾಸಕರು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ಕ್ಷೇತ್ರದಲ್ಲಿ ಬಿಜೆಪಿಗೆ ಮುಖಭಂಗವಾಗಿದೆ.
ಬಿವೈ ವಿಜಯೇಂದ್ರ ಅಧ್ಯಕ್ಷರಾಗಿದ್ದು ತಮ್ಮ ಸ್ವಕ್ಷೇತ್ರದಿಂದಲ್ಲೇ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಅವರ ಕ್ಷೇತ್ರದಿಂದನೇ ಪ್ರಾರಂಭವಾಗಿದೆ ಎಂದರು.
News by: Raghu Shikari -7411515737