ಶಿಕಾರಿಪುರ,ಸೊರಬ ಎರಡು ಕಣ್ಣುಗಳಿದ್ದಂತೆ: ಸಚಿವ ಮಧು ಬಂಗಾರಪ್ಪ..!

ಶಿಕಾರಿಪುರ ಪಟ್ಟಣದ ಬಯಲು ರಂಗಮಂದಿರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.

ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವನಾದ ನನಗೆ ನನ್ನ ಕ್ಷೇತ್ರ ಸೊರಬ ಎಷ್ಟು ಮುಖ್ಯವೋ ಅದೇ ರೀತಿ ಶಿಕಾರಿಪುರವು ಅಷ್ಟೇ ಮುಖ್ಯ ಎರಡು ಕಣ್ಣುಗಳು ಇದ್ದಂತೆ ಎಂದರು.

ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋತಿರಬಹುದು ಅದ್ರೇ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಗೆದ್ದವರು ಬುದ್ದಿವಂತರಲ್ಲ ಸೋತವರು ದಡ್ಡರಲ್ಲ ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು.

ಹಿಂದಿನಿಂದಲೂ ತಂದೆ ಜೊತೆ ರಾಜಕೀಯ ಮಾಡಿಕೊಂಡು ಬಂದಿದ್ದೆ ನಾನು ಸ್ವಂತ ನಿರ್ಧಾರ ಮಾಡಿ, ಮೊದಲು ಹೆಜ್ಜೆ ಇಟ್ಟಿರೋದು ಕಾಂಗ್ರೆಸ್‌ಗೆ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟು, ಮಂತ್ರಿ ಮಾಡಿದೆ ಇದೇ ಕಾಂಗ್ರೆಸ್ ಪಕ್ಷದಿಂದಲೇ ತಂದೆ ಸಿಎಂ ಆಗಿ, ಜನರ ಪರ ಕೆಲಸ ಮಾಡಿದ್ರು ಜಿಲ್ಲೆಯಲ್ಲಿ ಬಡವರಿಗೆ ಭೂಮಿ ಹಕ್ಕು ಕೊಡುವ ಕೆಲಸ ಬಾಕಿಯಿದ್ದು, ಸರ್ಕಾರ ಅದನ್ನು ಮಾಡುತ್ತೇ ಗ್ಯಾರಂಟಿ ಯೋಜನೆ ಮೂಲಕ ಅಕ್ಕಿ, 2 ಸಾವಿರ ರೂ., ವಿದ್ಯುತ್ ಅನ್ನು ಕೊಡ್ತಿದ್ದೇವೆ.

ಈ ರೀತಿಯ ಜನಪರ ಸರ್ಕಾರ ದೇಶದಲ್ಲೂ ಬರಬೇಕು ಲೋಕಸಭೆ ಚುನಾವಣೆ ಕೂಡ ಬರುತ್ತಿದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕೆಲಸ ಮಾಡಬೇಕು. ಬಿಜೆಪಿಯ ಭಾವನಾತ್ಮಕ ರಾಜಕೀಯಕ್ಕೂ ನೀವು ಬ್ರೇಕ್ ಹಾಕಬೇಕು ಎಂದರು.

ನೀರಿಗಾಗಿ ಪಾದಯಾತ್ರೆ ಹೋರಾಟಾಗ ಇದೇ ನಾಗರಾಜ್ ಗೌಡರು ದಿಕ್ಕಾರ ಕೂಗಿದ್ದರು. ಆಗ ನಾನು ಜೆಡಿಎಸ್ ನಲ್ಲಿದ್ದೆ ಗೌಡರು ಕಾಂಗ್ರೆಸ್ ಸೇರಿದ ಮೇಲೆ ಒಮ್ಮೆ ಮನೆಗೆ ಬಂದ ಗೌಡರು ಕಣ್ಣೀರು ಹಾಕಿದ್ದರು. ರಾಜಕೀಯದಲ್ಲಿ ಟೀಕೆ ಟಿಪ್ಪಣಿ ಸಹಜ ಅದು ನಾನು ಪದಯಾತ್ರೆ ಮಾಡಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀರಾವರಿ ಯೋಜನೆಗೆ 1200 ಕೋಟಿ ಹಣ ಮೀಸಲು ಇಟ್ಟರು ಅದರ ಪರಿಣಾಮ ನೀರಾವರಿ ಯೋಜನೆ ಆಗಿದೆ ಬಿಜೆಪಿ ಕಮಿಷನ್ ಪಡೆದು ನಾವು ಮಾಡಿದ್ದು ಎಂದು ಹೇಳಿಕೊಂಡು ಒಡಾಡುತ್ತಾರೆ ಜನರಿಗೆ ಗೊತ್ತಿದೆ ಎಂದರು.

ತಾಲೂಕಿನ ಜನರು ಸಣ್ಣಪುಟ್ಟ ಯಾವುದೇ ಸಮಸ್ಯೆ ಇದ್ದರೂ ಎಸ್ ಪಿ ನಾಗರಾಜ ಗೌಡ,ಗೋಣಿ ಮಾಲತೇಶ್ ಇರುತ್ತಾರೆ ತಾಲೂಕಿನಲ್ಲಿ ಓಡಾಡಿ ಪಕ್ಷ ಸಂಘಟಿಸುತ್ತಾರೆ ಮುಂದಿನ ಚುನಾವಣೆಗಳಲ್ಲಿ ಜನರು ಪಕ್ಷವನ್ನು ಗೆಲ್ಲಿಸಬೇಕು ಎಂದರು.

ಶಿವಮೊಗ್ಗ ಉಸ್ತುವಾರಿ ಚಂದ್ರಪ್ಪ ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಎಂಎಲ್ಸಿ ಪ್ರಸನ್ನಕುಮಾರ್,ಆರ್ ಎಂ ಮಂಜುನಾಥ್ ಗೌಡ,ಮರಿಯಪ್ಪ,ಎಸ್ ಪಿ ನಾಗರಾಜ್ ಗೌಡ,ಗೋಣಿ ಮಾಲತೇಶ್,ಮಹೇಶ್ ಹುಲ್ಮಾರ್, ಮುಖಂಡರು- ಸಾವಿರಾರು ಕಾರ್ಯಕರ್ತರು ಇದ್ದರು.
News by: Raghu Shikari-7411515737