ಗೌರವ ಸೂಚಕವಾಗಿ ನಾನು ಬಿಎಸ್ ವೈ ಪಾದಕ್ಕೆ ಬಾಣ ಬಿಟ್ಟಿದೇನೆ : ಆಯನೂರು ಮಂಜುನಾಥ

ಪಟ್ಟಣದ ರಂಗಮಂದಿರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ನಗು ಚಾಟಕಿ ಸಿಡಿಸಿ ಮೂಲಕ ಬಾಷಣ ಮಾಡಿದರು.

ಈ ವೇಳೆ ಕುರುಕ್ಷೇತ್ರದಲ್ಲಿ ಅರ್ಜನ ಮತ್ತು ಗುರು ದ್ರೋಣಾಚಾರ್ಯ ಯುದ್ಧದಲ್ಲಿ ಎದುರಾದಾಗ ಗುರುವಿನ ವಿರುದ್ಧ ಅರ್ಜನ ಬಾಣ ಬಿಡಬೇಕಾಯಿತು.

ಈ ಸಂದರ್ಭದಲ್ಲಿ ಗೌರವ ಸೂಚಕವಾಗಿ ಅರ್ಜುನ ಗುರು ದ್ರೋಣಾಚಾರ್ಯ ಪಾದಕ್ಕೆ ಬಾಣಕ್ಕೆ ಬಿಡುತ್ತಾನೆ
ಹಾಗೆ ನಾನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ನನ್ನನು ಬೆಳಸಿದವರು ಅವರ ವಿರುದ್ಧ ನಾನು ಈ ವೇದಿಕೆಯಲ್ಲಿ ಮೊದಲು ಬಾಣ ಪಾದಕ್ಕೆ ಬಿಟ್ಟಿದೇನೆ ಮುಂದಿನ ದಿನಗಳಲ್ಲಿ ಬಾಣ ಎಲ್ಲಿಗೆ ಬಿಳುತ್ತೆ ಗೊತ್ತಿಲ್ಲ ಎಂದರು.

ಇಷ್ಟು ದಿನ ನಾನು ಕಾಂಗ್ರೆಸ್ ನ ವಿರುದ್ಧ ಮಾತನಾಡಿದ್ದೇನೆ ಇನ್ನೂ ಮುಂದೆ ಬಿಜೆಪಿ ವಿರುದ್ಧ ಮಾತನಾಡುತ್ತೇನೆ ಎಂದರು.
ಬಿಜೆಪಿ ಜೆಡಿಎಸ್ ಮೈತ್ರಿ ಹೇಗೆ ಆಗಿದೆ ಅಂದರೆ ಕುರುಡನ ಮೇಲೆ ಕುಂಟ ಕುತ್ತಿರುವಂತೆ ಆಗಿದೆ ಎಂದು ವ್ಯಂಗ್ಯಮಾಡಿದರು.
News by: Raghu Shikari-7411515737