ಇಂಡಿಯಾ “ಭಾರತ” ಎಂದು ಮರು ನಾಮಕರಣ ಆಗುತ್ತದೆಯೇ? ಏನಿದು ಕೇಂದ್ರ ಸರ್ಕಾರದ ಹೊಸ ನಿರ್ಣಯ…?

ಕೇಂದ್ರ ಸರ್ಕಾರವು ಕಳೆದ ಕೆಲವು ದಿನಗಳ ಹಿಂದೆ ಇದೇ ತಿಂಗಳ ಸೆಪ್ಟೆಂಬರ್ 18 ರಂದು ವಿಶೇಷ ಅಧಿವೇಶನ ಕರೆದಿತ್ತು. ಇದಕ್ಕೆ ವಿರೋಧ ಪಕ್ಷಗಳ ಒಕ್ಕೂಟ ಕೇಂದ್ರ ಸರ್ಕಾರ “ಯಾವ ವಿಷಯದ ಮೇಲೆ ವಿಶೇಷ ಅಧಿವೇಶನ” ಎಂದು ಹೇಳಿಲ್ಲ ಎಂದು ವಿರೋಧ ವ್ಯಕ್ತಪಡಿಸಿತ್ತು,

ಒಂದು ದೇಶ ಒಂದು ಚುನಾವಣೆಯ ಕುರಿತು ಮಾಜಿ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು, ಬಹುಶಃ ಒಂದು ದೇಶ ಒಂದು ಚುನಾವಣೆ ಕುರಿತು ಚರ್ಚೆ ಇರಬಹುದು ಎಂದು ಭಾವಿಸಲಾಗಿತ್ತು.

ಆದರೆ ಇಂದು ಭಾರತದಲ್ಲಿ ನಡೆಯುತ್ತಿರುವ ಜಿ-20 ಸಮ್ಮೇಳದಲ್ಲಿ ಜಿ-20 ಸಮ್ಮೇಳನದ ಸಭೆ ನಡವಳಿ ಕುರಿತಾದ ಭಾರತದ ರಾಷ್ಟ್ರಪತಿ ಪತ್ರದಲ್ಲಿ “The President of India” ಬದಲು “The president of Bharat” ಎಂದು ಸೂಚಿಸಿರುತ್ತದೆ.

ಈ ಪತ್ರವು ಇದೀಗ ಸಮಾಜಿಕ ಜಾಲದಲ್ಲಿ ವೈರಲ್ ಆಗಿದ್ದು, ಕೇಂದ್ರ ಸರ್ಕಾರ ಕರೆದಿರುವ ವಿಶೇಷ ಅಧಿವೇಶನ ವಿಷಯ ಇಂಡಿಯಾ ಬದಲು ಭಾರತ ಎಂದು ನಾಮಕರಣ ಮಾಡಲಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗುತ್ತಿದೆ.
news by: Naveen Yuva-9611127707