ಶಿಕಾರಿಪುರಕ್ಕೂ ಕಾಲಿಟ್ಟ ಸೌಜನ್ಯ ಸಾವಿನ ಮರು ತನಿಖೆ ಹೋರಾಟ..!

ಶಿಕಾರಿಪುರ: ದಕ್ಷಿಣ ಕನ್ನಡಕ್ಕೆ ಸೀಮೀತವಾಗಿದ ಸೌಜನ್ಯ ಸಾವಿನ ಪ್ರಕರಣ ಮರು ತನಿಖೆ ಹೋರಾಟ ಮಲೆನಾಡಿಗೂ ಸೇರಿದಂತೆ ರಾಜ್ಯಾದ್ಯಂತ ವ್ಯಾಪಿಸಿದೆ.

ಶಿಕಾರಿಪುರ ಪಟ್ಟಣದ ತಾಲೂಕ್ ಕಛೇರಿ ಎದುರು ಕರ್ನಾಟಕದ ರಾಷ್ಟ ಸಮಿತಿ ಪಕ್ಷದ ವತಿಯಿಂದ ಸೌಜನ್ಯ ಸಾವಿನ ಮರು ತನಿಖೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಪಕ್ಷದ ಮುಖಂಡರ ಮಂಜುನಾಥ ಮಾತನಾಡಿ ಸೌಜನ್ಯ ಸಾವಿನಲ್ಲಿ ವರೆಗೂ ನ್ಯಾಯ ಸಿಕ್ಕಿಲ್ಲ ಸಂತೋಷ ರಾವ್ ಆರೋಪಿ ಎಂದು ಬಂಧಿಸಿದ್ದರು ಆತ ನಿರುಪರಾದಿ ಎಂದು ಕೋರ್ಟ್ ಆದೇಶ ನೀಡಿದೆ.

ನಿಜವಾದ ಆರೋಪಿಯ ಪತ್ತೆ ಆಗಿಲ್ಲ ಸರ್ಕಾರ ಕೂಡಲೇ ಸೌಜನ್ಯ ಸಾವಿನ ಮರು ತನಿಖೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪ್ರಭು, ರವಿನಾಯ್ಕ್, ತಾಲೂಕ್ ಉಸ್ತುವಾರಿ ನಿರಂಜನ್, ರವಿಕುಮಾರ್,ಸುಮಿತ್ರಾಬಾಯಿ,ಮನೋಜ್, ಪುಂಡಲಿಕ, ಶಶಿಕುಮಾರ್, ಅಭಿ ಚಂದ್ರು, ಇದ್ದರು.
News by: Raghu Shiakri-7411515737