ನಾವು ಚುನಾವಣೆಯಲ್ಲಿ ಸೊತ್ತಿಲ್ಲ ಜನರ ಮನಸ್ಸಿನಲ್ಲಿ ಗೆದಿದ್ದೇವೆ ಬಿಜೆಪಿಯ ಹಣದ ದುರಂಕಾರ ಇಳಿದಿದೆ: ಎಸ್ ಪಿ ನಾಗರಾಜ್ ಗೌಡ

ನಾವು ಚುನಾವಣೆಯಲ್ಲಿ ಸೊತ್ತಿಲ್ಲ ಜನರ ಮನಸ್ಸಿನಲ್ಲಿ ಗೆದಿದ್ದೇವೆ ಬಿಜೆಪಿಯ ಹಣದ ದುರಂಕಾರ ಇಳಿದಿದೆ: ಎಸ್ ಪಿ ನಾಗರಾಜ್ ಗೌಡ

ಶಿಕಾರಿಪುರ ಪಟ್ಟಣದ ತರಳಬಾಳು ಸಮುದಾಯದ ಭವನದಲ್ಲಿ ಸ್ವತಂತ್ರ ಅಭ್ಯರ್ಥಿ ಎಸ್ ಪಿ ನಾಗರಾಜ್ ಗೌಡ ಅವರು ಮತದಾರರಿಗೆ ಕೃತಜ್ಞತಾ ಸಮಾರಂಭ ನಡೆಸಿದರು.

ಈ ವೇಳೆ ಮಾತನಾಡಿದ ಅವರು ತಾಲೂಕಿನಲ್ಲಿ ಜನರ ಸ್ವಾಭಿಮಾನಿ ಉಳಿದಿದೆ ಅದಕ್ಕಾಗಿ 71 ಸಾವಿರ ಮತಗಳನ್ನು ನನಗೆ ನೀಡಿದ್ದಾರೆ ನಾವು ಸೊತ್ತಿಲ್ಲ ಜನರ ಸ್ವಾಭಿಮಾನಿ ಉಳಿದಿದೆ ಬಿಜೆಪಿಯ ಹಣದ ದುರಂಕಾರ ಇಳಿದಿದೆ ಎಂದರು.

ಬಿಜೆಪಿ‌ ಅವರು ಭ್ರಷ್ಟಾಚಾರದ ಹಣದಲ್ಲಿ ರಾಜ್ಯಾಭಾರ ಮಾಡಲು ಹೋಗಬೇಡಿ ಮುಂದೆ ಸಂಸತ್ ಚುನಾವಣೆ ಇದೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಅಪಪ್ರಚಾರ ಮಾಡುತ್ತಿದ್ದಾರೆ ಅದಕ್ಕಾಗಿ ನಾವು ಕಡಿಮೆ ಅಂತರದಲ್ಲಿ ಜಯಗಳಿಸಿದೀವಿ ಎಂದು ಸಂಸದರು ಹೇಳಿದ್ದಾರೆ ಅದರೆ ಜನರಿಗೆ ನೀವು ಯಾವ ಅಭಿವೃದ್ಧಿ ಮಾಡಿದ್ದೀರಿ ಎಲ್ಲಾ ಚುನಾವಣೆಯ ಗಿಮಿಕ್ ಆಗಿದೆ. ನೀರಾವರಿ ಯೋಜನೆಗಳನ್ನು ಮಾಡುತ್ತೇವೆ ಎಂದು ಚುನಾವಣೆ ವೇಳೆ ಕೆರೆ ನೀರನ್ನು ಬಿಟ್ಟು ಮತದಾನ ಮೂಗಿದ ದಿನವೇ ನೀರನ್ನು ಬಂದ್ ಮಾಡಿದ್ದಾರೆ.

ಶಿಕಾರಿಪುರ ತಾಲೂಕಿನಲ್ಲಿ ನಾನು ಶಾಸಕನಾಗಿ ಗೆಲ್ಲದೇ ಇದ್ದರು ನಾನು ಸ್ವಾಭಿಮಾನಿ ಜನರ ಶಾಸಕನೇ ಆಗಿರುತ್ತೇನೆ ನಿಮ್ಮ ಎಲ್ಲಾ ಸೇವೆ ಮಾಡುತ್ತೇನೆ ಸರ್ಕಾರಿ ಕಛೇರಿ ಆಸ್ಪತ್ರೆ, ಸಾರ್ವಜನಿಕ ಸೇವೆಗೆ ನಾನು ಹಗಲು ರಾತ್ರಿ ಸೇವೆ ಸಲ್ಲಿಸುತ್ತೇನೆ ನಮ್ಮ ಕಛೇರಿ ಮನೆ ಎಂದಿಗೂ ಜನರ ಸೇವೆಗೆ ತೆರೆದಿರುತ್ತೇನೆ‌ ಎಂದರು.

ಅತೀ ಕಡಿಮೆ‌‌ ಸಮಯದಲ್ಲಿ ಚುನಾವಣೆ ಮಾಡಿದ ನಮಗೆ ತಾಲೂಕಿನ ಜನರು ದೇಣಿಗೆಯನ್ನು ನೀಡಿ ನಮಗೆ ಚುನಾವಣೆ ಎದುರಿಸಲು ಬೆಂಬಲ ನೀಡಿದರು ಪಕ್ಷಾತೀತವಾಗಿ ಜನರು ಸಹಕಾರ ನೀಡಿದ್ದಾರೆ ಎಲ್ಲಾ‌ರ ಋಣ ನನ್ನ ಮೇಲಿದೆ ನಾನು ಅದನ್ನು ತೀರಿಸಲು ಸಾಧ್ಯವಿಲ್ಲ ನಿಮ್ಮೇಲ್ಲರ ಸೇವೆಗೆ ಬದ್ದನಾಗಿದ್ದೇನೆ ಎಂದರು.

ಶಾಸರು ಸಂಸದರು ದ್ವೇಷದ‌ ರಾಜಕಾರಣವನ್ನು ಬಿಡಬೇಕು ಬಿಜೆಪಿ ಪಕ್ಷದ ಮತದಾರರಿಗೆ ಮಾತ್ರ ನೀವು ಶಾಸಕರಲ್ಲ ತಾಲೂಕಿಗೆ ಶಾಸಕರು ಎನ್ನುವುದನ್ನು ಮರೆಯಬೇಡಿ ಎಲ್ಲಾ ಜನರ ಸೇವೆ ಮಾಡಬೇಕು.

ಜಿಪಂ ತಾಂ ಚುನಾವಣೆ ಸಹಕಾರಿ ಸಂಘದ ಚುನಾವಣೆ ಬರಲಿದೆ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಆಗಬೇಕಾಗಿದೆ. ಚುನಾವಣೆ ಎಂದರೇ ಎಂಎಲ್ ಎ ಚುನಾವಣೆ ಮಾತ್ರವಲ್ಲ ಎಲ್ಲಾ ಕ್ಷೇತ್ರದಲ್ಲೂ ನಾವು ಭಾಗವಹಿಸಬೇಕು ಸಹಕಾರಿ ಕ್ಷೇತ್ರದಲ್ಲಿ ಸದಸ್ಯತ್ವ ಮಾಡಿಸುವುದು ಈ ಮೂಲಕ‌ ಪಕ್ಷ‌ಸಂಘಟಿಸಿ ಎಂದರು.

ದೊಡ್ಡ ಮಟ್ಟದ ನಮಗೆ ಮತ‌ ನೀಡಿದ ಮತದಾರರಿಗೂ ಕಾರ್ಯಕರ್ತರಿಗೂ ಹಾಗೂ ಸಮಸ್ತ ತಾಲೂಕಿನ ಮತದಾರರಿಗೂ ಕೃತಜ್ಞತೆ ತಿಳಿಸಿದರು.

ಈ ವೇಳೆ ಸ್ವಾಭಿಮಾನಿ ನಾಗರಾಜ್ ಗೌಡರ ಅಭಿಮಾನಿ ಬಳಗದ ಪ್ರಮುಖ ಮುಖಂಡರು ಕಾರ್ಯಕರ್ತರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!