ಸಂಸತ್ ಭವನ ಉದ್ಘಾಟನೆಗೆ ಶೃಂಗೇರಿ, ತೀರ್ಥಹಳ್ಳಿ ವಿದ್ವಾಂಸರಿಂದ ಪೂಜೆ

ಸಂಸತ್ ಭವನ ಉದ್ಘಾಟನೆಗೆ ಶೃಂಗೇರಿ, ತೀರ್ಥಹಳ್ಳಿ ವಿದ್ವಾಂಸರಿಂದ ಪೂಜೆ

ತೀರ್ಥಹಳ್ಳಿ : ದೆಹಲಿಯಲ್ಲಿ ಭಾನುವಾರ ಲೋಕಾರ್ಪಣೆಗೊಳ್ಳುತ್ತಿರುವ ನೂತನ ಸಂಸತ್ ಭವನಕ್ಕೂ ಶೃಂಗೇರಿ ಶಾರದಾ ಮಠಕ್ಕೂ ಅವಿನಾಭವ ಸಂಬಂಧವಿದೆ. ಉದ್ಘಾಟನೆಯ ಪೂಜಾ ಕಾರ್ಯಕ್ರಮಗಳಿಗೆ ಶೃಂಗೇರಿ ಪೀಠದಿಂದ ಪುರೋಹಿತರು ತೆರಳಿದ್ದರು, 2020ರಲ್ಲಿ ಇದೆ ಮಠದಿಂದ ವಿದ್ವಾಂಸರು ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಭವನದ ಭೂಮಿಪೂಜೆಯನ್ನು ನೆರವೇರಿಸಿದ್ದರು.

ಕಾರ್ಯಕ್ರಮಗಳ ಕುರಿತು 2020ರಲ್ಲಿ
ಸಂಸತ್ ಭವನದ ಭೂಮಿಪೂಜೆ ನೆರವೇರಿಸಿದ ಶ್ರೀ
ಶಿವಕುಮಾರ ಶರ್ಮಾ ಮಾಹಿತಿ ಹಚ್ಚಿಕೊಂಡಿದ್ದು,
ಪ್ರಧಾನಿ ಮೋದಿ ಅವರ ಅಪೇಕ್ಷೆಯಂತೆ
ಭಾರತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ
ಶೃಂಗೇರಿ ಮಠದಿಂದ ಡಾ.ಶಿವಕುಮಾರ ಶರ್ಮ,
ಲಕ್ಷ್ಮೀನಾರಾಯಣ ಸೋಮಯಾಜಿ, ಶ್ರೀ ಗಣೇಶ
ಸೋಮಯಾಜಿ ಹಾಗೂ ದೆಹಲಿಯ ಶೃಂಗೇರಿ
ಶಾರದಾ ಪೀಠದ ಶಾಖಾ ಮಠದಿಂದ ನಾಗರಾಜ
ಅಡಿಗ, ಋಷ್ಯಶೃಂಗ ಭಟ್ಟ, ದೆಹಲಿಯ ಶಾರದ
ಮಠದಿಂದ ವಿದ್ವಾಂಸರು ತೆರಳಿದ್ದರು.

ಭೂಮಿ ಪೂಜೆ ಸಂದರ್ಭದಲ್ಲಿ ಪ್ರಧಾನಿಯವರೊಡನೆ ವಿಶೇಷ ಪೂಜೆ, ಹೋಮ, ಹವನ ನಡೆಸಲಾಗಿತ್ತು. ಶೃಂಗೇರಿ ಮಠದಿಂದ ಕೊಂಡೊಯ್ದ ಶಂಕು, ನವರತ್ನಗಳನ್ನು ಹಾಗೂ ಬೆಳ್ಳಿ ಇಟ್ಟಿಗೆಯನ್ನು ಅಂದು ಸ್ಥಾಪನೆ ಮಾಡಲಾಗಿತ್ತು. 2022 ರಲ್ಲಿ ಭವನದ ಮೇಲೆ ಲಾಂಛನದ ಉದ್ಘಾಟನೆಗೂ ಮಠದಿಂದ ವಿದ್ವಾಂಸರು ತೆರಳಿದ್ದರು.

ಈಗ ಲೋಕಾರ್ಪಣೆಗೆ ಕೂಡ ಶೃಂಗೇರಿ ಮಠದಿಂದ ಸೀತಾರಾಮ ಶರ್ಮ, ಶ್ರೀ ರಾಮ ಶರ್ಮ ಮತ್ತು ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದಿ೦ದ ನಾರಗಾಜ ಅಡಿಗ, ಋಷ್ಯಶೃಂಗ ಭಟ್ಟ ಇವರು ಈಗಾಗಲೇ ತೆರಳಿದ್ದಾರೆ. ಉದ್ಘಾಟನೆಯ ಮುನ್ನಾ ದಿನ ಇವರಿಂದ ವಾಸ್ತು ಹೋಮ, ವಾಸ್ತು ಪೂಜೆಗಳು ನಡೆಯಲಿವೆ. ಭಾನುವಾರ ಮಹಾಗಣಪತಿ ಹೋಮ ನಡೆಯಲಿದೆ.

ಒಟ್ಟು 6 ಜನ ಸಂಸತ್ ಭವನದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ವಿಷಯ. ಪ್ರಧಾನಿಯವರು ಶೃಂಗೇರಿ ಪೀಠದಿಂದ ವಿದ್ವಾಂಸರನ್ನು ಆಹ್ವಾನಿಸಿ ಪೂಜೆ ಮಾಡಿಸುತ್ತಿರುವುದು ಸಂತಸ ಮತ್ತು ಸರಿಯಾದ ಕ್ರಮ ಎನ್ನಿಸಿದೆ. ಈ ಭವ್ಯ ಭವನದಿಂದ ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂದರು.

Admin

Leave a Reply

Your email address will not be published. Required fields are marked *

error: Content is protected !!