ಚಿಕ್ಕಮಗಳೂರು: ನಾನು RSS ಸ್ವಯಂ ಸೇವಕ’ ಎಂದ ಕಾಂಗ್ರೆಸ್ ಶಾಸಕ ಎಚ್.ಡಿ ತಮ್ಮಯ್ಯ

ಚಿಕ್ಕಮಗಳೂರು: ನಾನು RSS ಸ್ವಯಂ ಸೇವಕ’ ಎಂದ ಕಾಂಗ್ರೆಸ್ ಶಾಸಕ ಎಚ್.ಡಿ ತಮ್ಮಯ್ಯ

ಚಿಕ್ಕಮಗಳೂರು: ನಾನು ರಾಷ್ಟ್ರೀಯ ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂದು ಚಿಕ್ಕಮಗಳೂರು ಕ್ಷೇತ್ರದ ನೂತನ ಕಾಂಗ್ರೆಸ್ ಶಾಸಕ ಎಚ್.ಡಿ ತಮ್ಮಯ್ಯ ಹೇಳಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್ ಪಕ್ಷ ಸೇರಿ ಗೆದ್ದು ಶಾಸಕರಾದ ಸಂತಸದಲ್ಲಿ ಮಾತನಾಡಿದ ಹೆಚ್.ಡಿ ತಮ್ಮಯ್ಯ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನಗೆ ಶಿಸ್ತು ಕಲಿಸಿದೆ, ನಾನು ಸಂಘದ ಸ್ವಯಂ ಸೇವಕ, ನಾನು ಜಾತ್ಯಾತೀತ ವ್ಯಕ್ತಿ ಈ ನಿಟ್ಟಿನಲ್ಲೇ ಪ್ರಮಾಣವಚನವನ್ನು ಸ್ವೀಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಬಿಜೆಪಿಯಲ್ಲಿ 16 ವರ್ಷ ಇದ್ದು ಸಂಘದ ಸ್ವಯಂ ಸೇವಕನಾಗಿ ಕೆಲಸ ಮಾಡಿದ್ದೆ, ಈಗಲೂ ಸಂಘದ ಸ್ವಯಂ ಸೇವಕನಾಗಿದ್ದೇನೆ.ಆದರೆ, ನಾನು ಜಾತ್ಯತೀತ ವ್ಯಕ್ತಿ. ಅಂದರೆ ಎಲ್ಲರನ್ನೂ ಒಟ್ಟಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಿಟ್ಟನಲ್ಲಿ ಕೆಲಸ ಮಾಡುವೆ ಎಂದು ಹೇಳಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!