ಪ್ರಧಾನಿ ಮೋದಿಯವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ..!

ಪ್ರಧಾನಿ ಮೋದಿಯವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ..!

ನವಹೆಹಲಿ: ಭಾರತದ ಹೊಸ ಸಂಸತ್​ ಭವನದ ಲೋಕಾರ್ಪಣೆ ಆಗಿದೆ. ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಹೊಸ ಸಂಸತ್​ ಭವನವನ್ನು ಲೋಕಾರ್ಪಣೆ ಮಾಡಿದ್ದಾರೆ.

ಪ್ರಧಾನಿ ಅವರಿಗೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರ ಜೊತೆಯಾಗಿದ್ದರು. ಹೊಸ ಸಂಸತ್​ ಭವನದಲ್ಲಿ ಸ್ಪೀಕರ್​ ಪೀಠದ ಪಕ್ಕದಲ್ಲಿ ರಾಜದಂಡವನ್ನು ಪ್ರತಿಷ್ಠಾಪಿಸಿದ ಬಳಿಕ ಸಂಸತ್​​ ಭವನದ ಉದ್ಘಾಟನೆ ನಡೆಯಿತು.

ತಮಿಳುನಾಡಿನ ತಿರುವಾವದುತ್ತುರೈ ಆಧೀನಮ್​ನ ಸ್ವಾಮೀಜಿಗಳು ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರಿಗೆ ಈ ರಾಜದಂಡವನ್ನು ಹಸ್ತಾಂತರ ಮಾಡಿದ್ದರು.

ಬೆಳಗ್ಗೆ 7 ಗಂಟೆಗೆ ಹೊಸ ಸಂಸತ್​ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ಸಂಸತ್​ ಭವನದ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುತ್ಥಳಿಗೆ ನಮಸ್ಕರಿಸಿದರು. ಬಳಿಕ ಹೊಸ ಸಂಸತ್ತಿನಲ್ಲಿ ವಾದ್ಯ,ಮಂತ್ರ-ಘೋಷಗಳೊಂದಿಗೆ ಪೂಜೆ ನೆರವೇರಿತು.

ಈ ಪೂಜೆಯಲ್ಲಿ ಪ್ರಧಾನಿಯವರ ಪಕ್ಕದಲ್ಲಿ ಲೋಕಸಭಾ ಸ್ಪೀಕರ್​ ಕೂಡಾ ಆಸೀನರಾಗಿದ್ದರು.
ರಾಜದಂಡಕ್ಕೆ ಪ್ರಧಾನಿ ಮೋದಿಯವರು ಸಾಷ್ಟಾಂಗ ನಮಸ್ಕಾರ ಕೂಡಾ ಮಾಡಿದರು.

ಪೂಜೆಯ ಬಳಿಕ ಪ್ರಧಾನಿಯವರು ರಾಜದಂಡವನ್ನು ಸ್ಪೀಕರ್​ ಪೀಠದ ಪಕ್ಕದಲ್ಲಿ ಇಟ್ಟರು.
ಹೊಸ ಸಂಸತ್​ ಭವನದಲ್ಲಿ ಸರ್ವಧರ್ಮ ಕಾರ್ಯಕ್ರಮ ಕೂಡಾ ನೆರವೇರಿತು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!