ಶಿವಮೊಗ್ಗ ಜಿಲ್ಲೆಯ ಮೂರೂ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ..!

ಕರ್ನಾಟಕ ವಿಧಾನಸಭಾ ಚುನಾವಣೆ ಈಗಾಗಲೇ ರಂಗಿರುತ್ತಿದ್ದು ಎಐಸಿಸಿ ಕರ್ನಾಟಕ ವಿಧಾನಸಭಾ ಚುನಾವಣೆಯ ಕ್ಷೇತ್ರವಾರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಎಐಸಿಸಿ ಬಿಡುಗಡೆಗೊಳಿಸಿರುವ ಕಾಂಗ್ರೆಸ್ ಪಕ್ಷದ ಶಿವಮೊಗ್ಗ ಜಿಲ್ಲೆಯ ಮೂರೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಘೋಷಣೆಯನ್ನು ಮಾಡಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಹಾಲಿ ಶಾಸಕ ಬಿಕೆ ಸಂಗಮೇಶ್ ಅವರಿಗೆ ಟಿಕೆಟ್ ನೀಡಿದೆ.

ಇನ್ನು ಸರ್ವ ಕ್ಷೇತ್ರಕ್ಕೆ ಎಐಸಿಸಿ ಸದಸ್ಯ ಮಧು ಬಂಗಾರಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು ಸಾಗರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬೇಲೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಿದೆ.

ಇನ್ನೂ ಜಿಲ್ಲೆಯ ಶಿವಮೊಗ್ಗ ನಗರ ಗ್ರಾಮಾಂತರ ತೀರ್ಥಹಳ್ಳಿ ಶಿಕಾರಿಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯನ್ನು ಮೊದಲ ಪಟ್ಟಿಯಲ್ಲಿ ಮಾಡಿರುವುದಿಲ್ಲ.
ಅತ್ಯಂತ ಕುತೂಹಲ ಮೂಡಿಸಿರುವ ಜಿಲ್ಲೆಯ 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇನ್ನೂ ಘೋಷಣೆಯಾಗದೇ ಇರುವುದು ಸಾರ್ವಜನಿಕರಿಗೆ ಕುತೂಹಲ ಮೂಡಿಸಿದೆ.
News By: Raghu Shikari-7411515737