ಶಿವಮೊಗ್ಗದಲ್ಲಿ ನಾಳೆ(ಡಿ.28) ಉದ್ಯೋಗ ಮೇಳ…..!!!

ಶಿವಮೊಗ್ಗದಲ್ಲಿ ನಾಳೆ(ಡಿ.28) ಉದ್ಯೋಗ ಮೇಳ…..!!!

ಶಿವಮೊಗ್ಗ: ಕರ್ನಾಟಕ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನಾಳೆ ಬೆಳಗ್ಗೆ 10ಕ್ಕೆ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ‌‌.

ಎಸ್.ಎಸ್‌.ಎಲ್.ಸಿ,ಪಿಯುಸಿ,ಐಟಿಐ, ಡಿಪ್ಲೋಮೋ ಯಾವುದೇ ಪದವಿ ತೇರ್ಗಡೆ ಹೊಂದಿದ 18ರಿಂದ 35 ವರ್ಷದ ಅಭ್ಯರ್ಥಿಗಳು ಭಾಗವಹಿಸಬಹುದು.

ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿ ತೆಗೆದುಕೊಂಡು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶವಿರುತ್ತದೆ.

ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಗುತ್ಯಪ್ಪ ಕಾಲೋನಿ, ಪಂಪ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ. ವಿಳಾಸಕ್ಕೆ ಆಗಮಿಸಲು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂ. ಸಂ.: 08182-255293/ 9380663606/ 9482023412/ 9535312531

News by Raghu shikari-7411515737


Admin

Leave a Reply

Your email address will not be published. Required fields are marked *

error: Content is protected !!