ಅಪ್ರಾಪ್ತ ಬಾಲಕನ ಕೈಯಲ್ಲಿ ಬೈಕ್: ಬೈಕ್ ಮಾಲಿಕನಿಗೆ 25,000 ರೂ ದಂಡ ವಿಧಿಸಿದ ಕೋರ್ಟ್…!!

ಅಪ್ರಾಪ್ತ ಬಾಲಕನ ಕೈಯಲ್ಲಿ ಬೈಕ್: ಬೈಕ್ ಮಾಲಿಕನಿಗೆ 25,000 ರೂ ದಂಡ ವಿಧಿಸಿದ ಕೋರ್ಟ್…!!

ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ಟಾಕೀಸ್ ನ ರಸ್ತೆಯಲ್ಲಿ, 16 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬನು ದ್ವಿ ಚಕ್ರ ವಾಹನವನ್ನು ಹೆಲ್ಮೆಟ್ ಧರಿಸದೇ ಮತ್ತು ವಾಹನ ಚಾಲನಾ ಪರವಾನಿಗೆಯನ್ನು ಹೊಂದಿರದೇ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿರುವ ಘಟನೆ ಕಳೆದ ತಿಂಗಳು ನಡೆದಿದೆ.

ಈ ಕುರಿತು ಕೇಸು ದಾಖಲಾದ ಹಿನ್ನಲೆ ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಆತನ ತಂದೆ ಆಸಿಫ್ ಬಾಷಾ, 46 ವರ್ಷ, ತೀರ್ಥಹಳ್ಳಿ ಟೌನ್ ರವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ನೀಡಿರುತ್ತಾರೆ.

ಈ ಪ್ರಕರಣ ಕೈಗೆತ್ತಿಕೊಂಡ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಧೀಶರು ದ್ವಿ ಚಕ್ರ ವಾಹನದ ಮಾಲೀಕರಾದ ಬಾಲಕನ ತಂದೆ ಆಸಿಫ್ ಬಾಷಾ ರವರಿಗೆ ರೂ 25,000/- ದಂಡ ವಿಧಿಸಿರುತ್ತಾರೆ.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!