ಪಟ್ಟಣದ ಸುರಭಿ ಭವನದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅಭಿನಂದನೆ ವಿಚಾರ ಸಂಕಿರಣ..!

ಪಟ್ಟಣದ ಸುರಭಿ ಭವನದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅಭಿನಂದನೆ ವಿಚಾರ ಸಂಕಿರಣ..!

ಶಿಕಾರಿಪುರ : ಪರಿಶಿಷ್ಟ ಜಾತಿಯವರಿಗೆ ಶೇಕಡ ಎರಡು ಪರಿಶಿಷ್ಟ ಪಂಗಡದವರಿಗೆ ಶೇಕಡ 4 ಹೆಚ್ಚುವರಿ ಮೀಸಲಾತಿ ದೊರೆಯಲು ಶಿಫಾರಸ್ಸು ಮಾಡಿದ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ ದಾಸ್ ಅವರಿಗೆ ಗೌರವ ಸಲ್ಲಿಸಲಾಗುವುದು.

ಸಂವಿಧಾನದ ಆಶಯ‌ ಮೀಸಲಾತಿ ಕುರಿತು ವಿಚಾರ ಸಂಕಿರಣ ಸಂವಾದ ಕಾರ್ಯಕ್ರಮವನ್ನು ದಿನಾಂಕ 10.11.2022ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ನಗರದ ಸುರಭಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಹನುಮಂತಪ್ಪ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿಸಿದರು.

ದಲಿಸ ದಲಿತ ಸಂಘರ್ಷ ಸಮಿತಿ ಮುಖಂಡ ಜಗದೀಶ್ ಚುರ್ಚುಗುಂಡಿ ಮಾತನಾಡಿ ಈ ಮೀಸಲಾತಿಯಿಂದ ಇನ್ನಷ್ಟು ಜನ ಸಮಾಜ ದ ಯುವಕರಿಗೆ ನೌಕರಿ ಸೇರಿದಂತೆ ವಿವಿಧ ಸವಲತ್ತುಗಳು ದೊರೆಯಲು ಸಹಕಾರಿಯಾಗಿದ್ದು ಇಂತಹದೊಂದು ಐತಿಹಾಸಿಕ ವರದಿ ನೀಡಿದ ನಾಗಮೋಹನದಾಸ್ ಅವರನ್ನು ಗೌರವಿಸುವ ಕೆಲಸ ಎಲ್ಲರಿಂದಲೂ ನಡೆಯಬೇಕಾಗಿದೆ ಈ ಕಾರಣಕ್ಕೆ ನಾಗರಿಕರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ‌ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಹೆಚ್ ಡಿ ಮಾದೇವಪ್ಪ ಕಾರ್ಯದರ್ಶಿ ಸುರೇಶ್ ಹೂವಿನ ಮಂಡಿ ಪರಿಶಿಷ್ಟ ವರ್ಗಗಳ ನೌಕರರ ಸಂಘದ ಅಧ್ಯಕ್ಷ ಎಂ ಹೆಚ್ ಮಲ್ಲಿಕಾರ್ಜುನ್ ಮುಖಂಡ ಉಮೇಶ್ ಮಾರವಳ್ಳಿ,ಡಿಎಸ್ ಎಸ್ ಮುಖಂಡರಾದ ಜಗದೀಶ್, ಇದ್ದರು.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!