ರಾಮ ಮಂದಿರ ಸ್ಫೋಟ ಸಂಚು ವಿಚಾರ ಇದು ಹಿಂದೂ ಸಮಾಜಕ್ಕೆ ದೊಡ್ಡ ಆಘಾತವಾಗಿದೆ:ಮಾಜಿ ಡಿಸಿಎಂ ಈಶ್ವರಪ್ಪ

ರಾಮ ಮಂದಿರ ಸ್ಫೋಟ ಸಂಚು ವಿಚಾರ ಇದು ಹಿಂದೂ ಸಮಾಜಕ್ಕೆ ದೊಡ್ಡ ಆಘಾತವಾಗಿದೆ:ಮಾಜಿ ಡಿಸಿಎಂ ಈಶ್ವರಪ್ಪ

ಶಿವಮೊಗ್ಗ: ರಾಮ ಮಂದಿರ ಸ್ಫೋಟ ಸಂಚು ವಿಚಾರ ಇದು ಹಿಂದೂ ಸಮಾಜಕ್ಕೆ ದೊಡ್ಡ ಆಘಾತವಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯ ಬಹುದಿನದ ಹಿಂದು ಸಮಾಜದ ಕನಸು ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ.

ಪಿಎಫ್ ಐ ಅಲ್ಲ, ರಾವಣನ ವಂಶಸ್ಥರು, ಜಿನ್ನಾ ವಂಶಸ್ಥರು ಬಂದರೂ ಅದು ಆಗಲ್ಲ. ಇದು ಯಾವುದನ್ನು ಕನಸಿನಲ್ಲೂ ನೆನಸಿಕೊಳ್ಳುವುದು ಬೇಡ. ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ನಂಬಿಕೆ ಇರುವ ಪ್ರತಿಯೊಬ್ಬರೂ ಪಿಎಫ್ಐ ಹೇಳಿಕೆ ಖಂಡನೆ ಮಾಡಬೇಕು. ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್ ಎಲ್ಲರೂ ಖಂಡಿಸಬೇಕು. ಇದನ್ನು ಖಂಡಿಸದಿದ್ದರೆ ಅವರು ಅಯೋಗ್ಯರು ಎಂದರು.

ರಾಮ ಮಂದಿರ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ರಾಷ್ಟ್ರದ್ರೋಹಿ ಸಂಘಟನೆ ಪಿಎಫ್ಐ ಅವರ ಪ್ರಯತ್ನ ಬೆಳಕಿಗೆ ಬಂದಿದೆ. ಇದು ಹಿಂದೂ ಸಮಾಜಕ್ಕೆ ದೊಡ್ಡ ಆಘಾತವಾಗಿದೆ ಎಂದರು.

ಬಾಬ್ರಿ ಮಸೀದಿ ಗುಲಾಮಗಿರಿ ಸಂಕೇತದಂತಿತ್ತು. ಅಯೋಧ್ಯೆ ರಾಮ ಹುಟ್ಟಿದ ಜಾಗ ಹೀಗಾಗಿಯೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ರಾಮ ಮಂದಿರ ಉದ್ಘಾಟನೆಯನ್ನು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಂತಹ ದೇಶದ್ರೋಹಿಗಳನ್ನು ಕೇವಲ ಜೈಲಿಗೆ ಕಳುಹಿಸುವುದಲ್ಲ. ಸಂವಿಧಾನ ತಿದ್ದುಪಡಿ ಮಾಡಿ ಸರಿಯಾದ ಶಿಕ್ಷೆ ಆಗಬೇಕು. ಅಂತಹ ಕಾನೂನು ತರಬೇಕು. ಈ ಬಗ್ಗೆ ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ ಎಂದರು.


ಹೊಸ ರೂಪದ ಕಾನೂನು ತಂದು, ಭಯ ಹುಟ್ಟಿಸಬೇಕು ಅಂತಹ ಕಾನೂನು ಜಾರಿಯಾಗಬೇಕು. ಒಂದೇ ಬುಲೆಟ್ ನಲ್ಲಿ ನಾಲ್ಕು ಜನರ ಸುಟ್ಟಾಕಬೇಕು, ತಕ್ಷಣವೇ ನೇಣಿಗೇರಿಸಬೇಕು ಅಂತಹ ಕಾನೂನು ತರಬೇಕು. ಇಂತಹವರನ್ನು ಹಾಗೆ ಬಿಟ್ಟರೆ ದೇಶದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆ. ಕೇಂದ್ರ ಸರ್ಕಾರ ತುರ್ತಾಗಿ ಕಾನೂನು ತರಬೇಕು. ತುರ್ತಾಗಿ ಲೋಕಸಭೆ ಅಧಿವೇಶನ ಕರೆದು ಚರ್ಚೆ ಮಾಡಬೇಕು ಎಂದು ಹೇಳಿದರು.


ಕಾಂತಾರ ಸಿನಿಮಾ ಬಗ್ಗೆ ನಟ ಚೇತನ್ ಹೇಳಿಕೆ ವಿಚಾರ. ಅವನು ಯಾವನೋ ಅವನ ಮುಖನೇ ನೋಡಿಲ್ಲ ನಾನು. ಅವನ ಯಾವ ಸಿನಿಮಾನು ನಾನು ನೋಡಿಲ್ಲ. ಹಿಂದು ಧರ್ಮದ ಬಗ್ಗೆ ಮಾತನಾಡಲು ಅವನು ಯಾವನು ಎಂದು ವಾಗ್ದಾಳಿ ನಡೆಸಿದರು.


ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಎಲ್ಲಿಯೇ ನಿಂತರೂ ಸೋಲುತ್ತಾರೆ. ಅವರ ಕಾಲದಲ್ಲಿ ಸಾಕಷ್ಟು ಹಿಂದು ಯುವಕರ ಕಗ್ಗೊಲೆ ನಡೆದಿದೆ. ಹಿಂದು ಧರ್ಮ ವಿರೋಧಿ ನೀತಿಯೇ ಅವರನ್ಜು ಸೋಲಿಸುತ್ತದೆ. ಹಿಂದು ಧರ್ಮಕ್ಕೆ ದ್ರೋಹ ಮಾಡಿದ್ದೇನೆ ಎಂಬ ಬಗ್ಗೆ ಮೊದಲು ಕ್ಷಮೆ ಕೇಳಲಿ. ಕ್ಷಮೆ ಕೇಳಿದ ಬಳಿಕ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದರು.


ಸಿದ್ದರಾಮಯ್ಯ ವಿರುದ್ದ ತನಿಖೆ ನಡೆಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ. ನಾವು ತನಿಖೆ ಯಾವ ರೀತಿ ಮಾಡಬೇಕು ಎಂಬ ಬಗ್ಗೆ ನಮಗೆ ಕುಮಾರಸ್ವಾಮಿ ಹೇಳಿಕೊಡುವ ಅಗತ್ಯ ಇಲ್ಲ. ರಾಜ್ಯ ಸರ್ಕಾರ ಏನು ಕ್ರಮ ಕೈಗೊಳ್ಳಬೇಕೋ ಆ ರೀತಿ ಕೈಗೊಳ್ಳುತ್ತೇವೆ. ಅವರು ಹೇಳಿದ ರೀತಿ ನಾವು ಮಾಡುವ ಅವಶ್ಯಕತೆ ಇಲ್ಲ ಎಂದರು.


ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ವಿಚಾರದ ಬಗ್ಗೆ ಮಾತನಾಡಿ, ಖರ್ಗೆ ಬಹಳ ಹಿರಿಯ ರಾಜಕಾರಣಿ. ಅವರ ಆಯ್ಕೆಯನ್ನು ಸ್ವಾಗತ ಮಾಡ್ತೇನೆ. ಅವರ ನೇತೃತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿ ಬರುವ ದಿಕ್ಕಿನಲ್ಲಾದರೂ ಯಶಸ್ವಿಯಾಗಲಿ. ಅನುಭವಿ ರಾಜಕಾರಣಿ, ಹಲವು ಹುದ್ದೆ ಅಲಂಕರಿಸಿದ್ದಾರೆ.ಗಾಂಧಿ ಕುಟುಂಬಕ್ಕೆ ರಬ್ಬರ್ ಸ್ಟಾಂಪ್ ಆಗದೇ, ಸ್ವತಂತ್ರವಾಗಿ ಅಧಿಕಾರ ನಡೆಸಲಿ.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!