ರಾಮಮಂದಿರ ಸ್ಪೋಟಕ್ಕೆ ಸ್ಕೆಚ್ ಸ್ಪೋಟಕ ವರದಿ ನೀಡಿದ ಭಯೋತ್ಪಾದಕ ನಿಗ್ರಹದಳ

ರಾಮಮಂದಿರ ಸ್ಪೋಟಕ್ಕೆ ಸ್ಕೆಚ್ ಸ್ಪೋಟಕ ವರದಿ ನೀಡಿದ ಭಯೋತ್ಪಾದಕ ನಿಗ್ರಹದಳ

ಮಹಾರಾಷ್ಟ್ರ: ಅಯೋಧ್ಯೆಯ ರಾಮ ಮಂದಿರ ಸ್ಫೋಟಕ್ಕೆ ನಿಷೇಧಿಸಲ್ಪಟ್ಟ ಪಿಎಫ್ಐ(PFI) ಸಂಘಟನೆ ಸಂಚು ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದಿಂದ ಬಹಿರಂಗವಾಗಿದೆ.

ರಾಮ ಮಂದಿರ ಸ್ಫೋಟಕ್ಕೆ ಸ್ಕೆಚ್

ಭಯೋತ್ಪಾದಕ ಸಂಘಟನೆ ಎಂದು ನಿಷೇಧಿಸಲ್ಪಟ್ಟ ಪಿಎಫ್ಐ ಸಂಘಟನೆ ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸಲು ಮತ್ತು ಅದೇ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲು ಯೋಜಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಹಾಗೂ 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಅವರು ಯೋಜಿಸಿದ್ದರು ಎನ್ನಲಾಗಿದೆ.


ವರದಿಗಳ ಪ್ರಕಾರ, ಆಂಟಿ ಟೆರರಿಸಂ ಸ್ಕ್ವಾಡ್(ATS) ಇತ್ತೀಚೆಗೆ ಮಹಾರಾಷ್ಟ್ರದ ಮಾಲೆಗಾಂವ್, ಪುಣೆ ಮತ್ತು ಇತರ ಪ್ರದೇಶಗಳಿಂದ ಐವರು ಪಿಎಫ್ಐ ಜಿಹಾದಿಗಳನ್ನು ಬಂಧಿಸಿದ್ದು, ಅವರನ್ನು ಅಕ್ಟೋಬರ್ 18 ರಂದು ನಾಸಿಕ್ ಕೋರ್ಟ್ಗೆ ಹಾಜರುಪಡಿಸಲಾಯಿತು. ಕೋಮುಗಲಭೆ ಹರಡಲು ಸಂಚು ರೂಪಿಸಿ ಭಯೋತ್ಪಾದಕರಿಗೆ ಹಣ ನೀಡಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಾಟ್ಸಾಪ್ ಗ್ರೂಪ್ ಮೂಲಕ ಪಿಎಫ್ಐ ಈ ಯೋಜನೆ ರೂಪಿಸಿತ್ತು. ಈ ಎಲ್ಲಾ ಪ್ಲ್ಯಾನ್ ಪಾಕಿಸ್ತಾನದಿಂದಲೇ ನಡೆದಿತ್ತು ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.

ಇದೀಗ ಈ ವಿಚಾರದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ ಪಿಎಫ್ಐ ಸಂಚು ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!