ಶಿಕಾರಿಪುರ :ಉಳ್ಳಿ ಫೌಂಡೇಶನ್‌ ಮಾತಂಗೆಮ್ಮ ಸಮಾಜದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ..!

ಶಿಕಾರಿಪುರ :ಉಳ್ಳಿ ಫೌಂಡೇಶನ್‌ ಮಾತಂಗೆಮ್ಮ ಸಮಾಜದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ..!

ಶಿಕಾರಿಪುರ ಪಟ್ಟಣದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ 131ನೇ ಜಯಂತಿ ಪ್ರಯುಕ್ತ ಪ್ರತಿಭಾವಂತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಉಳ್ಳಿ‌ ಫೌಂಡೇಶನ್ ವತಿಯಿಂದ ನಡೆಸಲಾಯಿತು.

ಈ ವೇಳೆ ಮಾತನಾಡಿದ ಉಳ್ಳಿ ಫೌಂಡೇಶನ್ ನ ಅದ್ಯಕ್ಷರು ಹಾಗು ಪುರಸಭಾ ಸದಸ್ಯರಾದ ಉಳ್ಳಿ ದರ್ಶನ್ ಇಡೀ ಪ್ರಪಂಚಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ನೀಡಿ, ಸಮಾಜದ ಕಟ್ಟ ಕಡೇಯ ವ್ಯಕ್ತಿಗೂ ನ್ಯಾಯ ಹಾಗು ಶಿಕ್ಷಣ ನೀಡುವಲ್ಲಿ ದಾರಿದೀಪವಾದ ಶ್ರೇಷ್ಠ ವ್ಯಕ್ತಿ ಅಂಬೇಡ್ಕರ್

ಮೈಮೇಲೆ ಹರಿದ ಬಟ್ಟೆ ಇದ್ದರೂ ಚಿಂತೆ ಇಲ್ಲ ಕೈಯಲ್ಲಿ ಒಂದು ಪುಸ್ತಕ ಇರಬೇಕು ಎಂದು ಹೇಳುವ ಮೂಲಕ ಮಹಿಳೆಯರಿಗೂ ಶಿಕ್ಷಣ ನೀಡುವಂತೆ ಪರಿಪಾಧಿಸಿ, ಮನುಷ್ಯನಲ್ಲಿ ದಡ್ಡತನವಿದ್ದರೂ ಪರವಾಗಿಲ್ಲ ಆದರೆ ಸಣ್ಣತನ ವಿರಬಾರದು,ಯಾಕೆಂದರೆ ಮನುಷ್ಯ ಗೌರವ ಕಳೆದುಕೊಳ್ಳುವುದು ತನ್ನ ಸಣ್ಣ ತನದಿಂದಲೇ ಹೊರೆತು, ದಡ್ಡತನ ವಿಂದಲ್ಲ ಎಂದು ಸಾರಿದ್ದು, ಸರ್ವರು ಅದನ್ನು ಪಾಲಿಸಬೇಕು.

ಇಂದು ಸಂವಿಧಾನ ಅಪಾಯದಲ್ಲಿದ್ದು, ಅದನ್ನು ಕಾಪಾಡುವುದು ದೇಶದ ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯ ಎಂದರು.

ಈ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತಂಗೆಮ್ಮ ಸಮಾಜದ ಅದ್ಯಕ್ಷರಾದ ಪರಮೇಶಪ್ಪ, ಮುಖಂಡರಾದ ಚಂದ್ರಪ್ಪ ಮಾಸ್ಟರ್, ಬಸವರಾಜಪ್ಪ, ಶಿವಪ್ಪ, ಸೋಮಶೇಖರ್ ಶಿವಮೊಗ್ಗಿ, ದೇವೆಂದ್ರಪ್ಪ, ಬೂದ್ಯಪ್ಪ, ದಯಾನಂದ ಗಾಮ, ಸಮಾಜದರು ಇದ್ದರು..

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!