ಶಿಕಾರಿಪುರ :ಈ ಕಾಲದ ಶ್ರೇಷ್ಠ ಯುಗಪುರುಷ ಡಾ.ಬಿ.ಆರ್ ಅಂಬೇಡ್ಕರ್: ಮಾಜಿ ಸಿಎಂ ಬಿ.ಎಸ್ ವೈ…!

ಶಿಕಾರಿಪುರ :ಈ ಕಾಲದ ಶ್ರೇಷ್ಠ ಯುಗಪುರುಷ ಡಾ.ಬಿ.ಆರ್ ಅಂಬೇಡ್ಕರ್: ಮಾಜಿ ಸಿಎಂ ಬಿ.ಎಸ್ ವೈ…!

ಶಿಕಾರಿಪುರ : ತಾಲೂಕ್ ಆಡಳಿತ ಪಂಚಾಯತ್ , ಸಮಾಜ ಕಲ್ಯಾಣ ಇಲಾಖೆ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ,ಮತ್ತು ಬಾಬು ಜಗಜೀವನ್ ರಾಮ್ ಜನ್ಮದಿನಾಚರಣೆಯನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಉದ್ಘಾಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಅವರು ದಲಿತರ ಅಭಿವೃದ್ಧಿಗಾಗಿ‌ ಶ್ರಮಿಸಿದ ಮಹಾ ನಾಯಕ‌‌ ಎಲ್ಲಾರಿಗೂ ಸಂವಿಧಾನ ನೀಡಿದ ಮಹಾನ್ ನೇತಾರ ಡಾ.ಬಿ.ಆರ್ ಅಂಬೇಡ್ಕರ್ ಅವರ ಆದರ್ಶವನ್ನು ನಾವು ಪಾಲಿಸ ಬೇಕು ಅವರ ಜೀವ ಸಾಧನೆ ಇಂದಿಗೂ ಆದರ್ಶವಾಗಿದೆ ಎಂದರು.

ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ ಅತ್ಯಂತ ಕೆಳ ವರ್ಗದಿಂದ ಬಂದವರು ಅವರು ಪ್ರಧಾನಿ ಆಗಬೇಕಾಗಿತ್ತು ಅವರಿಗೆ ಅವಮಾನ‌ ಮಾಡಿದವರ ಬಗ್ಗೆ ನಾನು ಮಾತನಾಡುವುದಿಲ್ಲ

ಅದರೆ ಒಬ್ಬ ಉತ್ತಮ ಸಮರ್ಥ ನಾಯಕನಿಗೆ ನ್ಯಾಯ ಸಿಗಲಿಲ್ಲ ಎನ್ನುವ ಬೆಸರ ಇದೆ ಎಂದರು.

ಸಮಾಜಿಕ ಕ್ರಾಂತಿ ಸಮಾಜದಲ್ಲಿ ಅಸಮಾನತೆಯ ವಿರುದ್ದ ಹೋರಾಡಿದ ಮಹಾನ್ ನಾಯಕ ದೇಶದ ಉಪ ಪ್ರಧಾನಿ ಆಗಿ ದೇಶ ಸೇವೆ ಮಾಡಿದ್ದಾರೆ‌
25 ವರ್ಷಗಳ ಕಾಲ ವಿವಿಧ ಖಾತೆಗಳನ್ನು ನಿಭಾಯಿಸಿದ್ದಾರೆ‌ ಎಂದರು.

ಈ ಇಬ್ಬರ ಶ್ರೇಷ್ಠ ವ್ಯಕ್ಯಿಗಳ ಈ ಯುಗದ ಶ್ರೇಷ್ಠ ಯುಗ ಪುರುಷರು ಡಾ.ಬಿ.ಆರ್ ಅಂಬೇಡ್ಕರ್ ಅವರು ಅವರ ಜನ್ಮ ದಿನ ಅವರ ಜೀವನವನ್ನು ಅಧ್ಯಯನ ಮಾಡಬೇಕು ಅವರ ನಡೆದು ಬಂದ ಹಾದಿಯಲ್ಲಿ ಹತ್ತು ಹೆಜ್ಜೆ ನಾವು ಇಟ್ಟರೆ ನಮ್ಮ‌ಜೀವನ ಸಾರ್ಥಕವಾಗತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಎಂಐಡಿಬಿ ‌ಅಧ್ಯಕ್ಷ‌‌ ಕೆ.ಎಸ್ ಗುರುಮೂರ್ತಿ, ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ, ಉಪನ್ಯಾಸಕರಾದ ಮೋಹನ್, ರಾಚಪ್ಪ ದಲಿತ ಸಂಘರ್ಷ ಸಮಿತಿ ಸದಸ್ಯರು ಮತ್ತಿತರರು ಇದ್ದರು‌.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!