ಶಿಕಾರಿಪುರ : ಅಕ್ಕಮಹಾದೇವಿ ಜನ್ಮಸ್ಥಳದಿಂದ ವಿಧಾನಸೌಧ ವರೆಗೆ ಪಂಚಮಸಾಲಿ ಮೀಸಲಾತಿ ಒತ್ತಾಯಿಸಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಪಾದಯಾತ್ರೆ…!

ಶಿಕಾರಿಪುರ : ಅಕ್ಕಮಹಾದೇವಿ ಜನ್ಮಸ್ಥಳದಿಂದ ವಿಧಾನಸೌಧ ವರೆಗೆ ಪಂಚಮಸಾಲಿ ಮೀಸಲಾತಿ ಒತ್ತಾಯಿಸಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಪಾದಯಾತ್ರೆ…!

ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದಲ್ಲಿ ಬುಧವಾರ ಬಸವ ಜಯಮೃತ್ಯುಂಜಯ ಸ್ವಾಮಿಜೀ ಅವರ ನೇತೃತ್ವದಲ್ಲಿ ಪಂಚಮಸಾಲಿ‌ 2 ಎ‌ ಮೀಸಲಾತಿ ಒತ್ತಾಯಿಸಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಆರಂಭಿಸಲಾಗುವುದು ಎಂದು ಪಂಚಮಸಾಲಿ ಸಮಾಜದ ಮುಖಂಡರಾದ ಡಾ.ಮಾಲತೇಶ್ ಹೇಳಿದರು.

ಶಿಕಾರಿಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು ಲಿಂಗಾಯಿತ ಸಮಾಜದ ಲಿಂಗಾಯತ ಪಂಚಮಸಾಲಿ ಲಿಂಗಾಯತ ಗೌಡ ಮಲ್ಲೇಗೌಡ ದೀಕ್ಷ ಲಿಂಗಾಯಿತರಿಗೆ ರಾಜ್ಯ ಸರ್ಕಾರದ 2 ಎ‌ ಮತ್ತು ಎಲ್ಲಾ ಲಿಂಗಾಯಿತರಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಯನ್ನು ಒತ್ತಾಯಿಸಿ ನಾಲ್ಕನೆ ಹಂತದ ಮುಂದುವರಿದ ಚಳುವಳಿಯನ್ನು ನಡೆಸಲಾಗುತ್ತಿದೆ ಎಂದರು.

ಅಕ್ಟೋಬರ್ 13 ಬುಧವಾರದಂದು ಶಿಕಾರಿಪುರ ತಾಲೂಕಿನ ಅಕ್ಕಮಹಾದೇವಿಯ ಜನ್ಮಭೂಮಿ‌ ಉಡುತಡಿ ಯಿಂದ ಬೆಳಗ್ಗೆ 11ಕ್ಕೆ ಪಾದಯಾತ್ರೆ ಆರಂಭಿಸವಾಗಲಿದ್ದಯ ಬೆಂಗಳೂರಿನ ವಿಧಾನಸೌಧದ ವರೆಗೂ ಗ್ರಾಮ ಪಂಚಾಯಿತಿಯಿಂದ ವಿಧಾನಸಭೆಯ ವರೆಗೆ ರಾಜ್ಯದ್ಯಂತ ಗ್ರಾಮ ತಾಲೂಕು ಜಿಲ್ಲಾ ಪಂಚಾಯಿತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ಭಾಗ-2ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಹೋರಾಟಕ್ಕೆ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾದಯಾತ್ರೆಯನ್ನು ಯಶಸ್ವಿ ಮನವಿ ಮಾಡಿದರು.

ಈ ವೇಳೆ ನಮ್ಮ ಸಮಾಜದ ಮದಗದ ಕೆಂಚಮ್ಮ ಕೇರೆ ಅಭಿವೃದ್ಧಿ ಪಡಿಸಬೇಕು ಮತ್ತು ಕೋಟಿಪುರ ರಾಣಿ ಚೆನ್ನಮ್ಮ ಜನಿಸಿದ ಗ್ರಾಮದ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷರು ರುದ್ರೆಗೌಡ ಮುಖಂಡರಾದ ಡಾ.ಮಾಲತೇಶ್ , ವಿಜಯಕುಮಾರ್, ಗಂಗಧರ್, ಜಗದೀಶ್ ಗೌಡ್ರು, ವೀರೇಶ್, ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!