ಶಿಕಾರಿಪುರ: ದಿ.ಪಕ್ಕೀರಪ್ಪನವರ ಕುರಿತು ಅಭಿನಂದನಾ ಗ್ರಂಥ ಬಿಡುಗಡೆ ಲೇಖನಗಳ ಆಹ್ವಾನ …!
ಶಿಕಾರಿಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ಒಕ್ಕೂಟ ದಲಿತ ಸಂಘರ್ಷ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದರು.
ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ ಪಕ್ಕೀರಪ್ಪನವರು ಇತ್ತೀಚಿಗೆ ಆಕಾಲಿಕ ಮರಣಹೊಂದಿದ್ದು ಅವರ ಸ್ಮರಣಾರ್ಥ ಹಳೆ ವಿದ್ಯಾರ್ಥಿಗಳು ಅಭಿಮಾನಿಗಳಿಂದ ಗುರುನಮನ ಕಾರ್ಯಕ್ರಮವನ್ನು ಆಯೋಜಿಲಾಗಿದೆ ಎಂದು ಶಿಕ್ಷಕ ಶಿವಮೂರ್ತಿ ಹೇಳಿದರು.
ಹಳೆ ವಿದ್ಯಾರ್ಥಿ ಪ್ರಶಾಂತ್ ಮಾತನಾಡಿ ಪಕ್ಕೀರಪ್ಪನವರು ರಾಜಕೀಯ, ಕೃಷಿ,ಶಿಕ್ಷಣ ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ಸಾಮಾಜಿಕ ಶೈಕ್ಷಣಿಕ ಸೇವೆ ಸಲ್ಲಿಸಿದ್ದು ಅವರ ನೆನಪಿಗಾಗಿ ಗುರು ನಮನ ಕಾರ್ಯಕ್ರಮವನ್ನು ನಡೆಸಲಾಗುವುದು.
ಬದುಕು ಹೋರಾಟ ಸಮಾಜಸೇವೆ ಸಾಧನೆ ಕುರಿತು ಕಿರು ಅಭಿನಂದನಾ ಗ್ರಂಥ ಬಿಡುಗಡೆ ಮಾಡಲು ತೀರ್ಮಾನಿಸಿದ್ದು ಅವರ ಅಭಿಮಾನಿಗಳು ನಿಕಡವರ್ತಿಗಳು ಅವರ ಕುರಿತು ಲೇಖನಗಳನ್ನು ಬರೆದು Halappaak1979@gmail.com ಗೆ ಕಳುಹಿಸಬುದು ಎಂದರು.
ಈ ಸಂದರ್ಭದಲ್ಲಿ ಮಲ್ಲೇಶಪ್ಪ ,ಹಾಲಪ್ಪ ಬೆಳಗುತ್ತಿ, ಜಗದೀಶ್ ಡಿಎಸ್ ಎಸ್ , ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸನೀಲ್‌ಕುಮಾರ್, ಶಿವಮೂರ್ತಿ ,ಷಣ್ಮುಖಪ್ಪ ಪ್ರಶಾಂತ್‌ಕುಮಾರ್ , ರಾಮಪ್ಪ, ಇದ್ದರು.
News By: Raghu Shikari-7411515737