ಶಿಕಾರಿಪುರ : ಆರಾಧ್ಯ ದೈವ ಶ್ರೀ ಹುಚ್ಚರಾಯ ಸ್ವಾಮಿ ದೇವರ ದರ್ಶನ ಪಡೆದ ಮಾಜಿ ಸಿಎಂ ಬಿ.ಎಸ್ ವೈ…!

ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಬಳಿಕ ಮೊದಲ ಬಾರಿಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಶಿಕಾರಿಪುರಕ್ಕೆ ಆಗಮಿಸಿದ್ದು ತಮ್ಮ ನಾಯಕರನ್ನು ನೋಡಲು ನೂರಾರು ಕಾರ್ಯಕರ್ತರು ದೇವಸ್ಥಾನದ ಬಳಿ ಕಾಯುತ್ತಿದ್ದರು.

ಶಿಕಾರಿಪುರ ಪಟ್ಟಣಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಮಾಧ್ಯಹ್ನ ಆಗಮಿಸಿ ತಾಲೂಕಿನಲ್ಲಿ ಆರಾಧ್ಯ ದೈವ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದರು.

ನಂತರ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ರಾಯರ ಆರ್ಶಿವಾದವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ , ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ, ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.

News By: Raghu Shikari-7411515737