ಶಿಕಾರಿಪುರ : ಕಪ್ಪನಹಳ್ಳಿ ಗ್ರಾಮದಲ್ಲಿ ಋಗ್ವೇದ ಗೋಶಾಲೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ..!.

ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಋಗ್ವೇದ ಗೋಶಾಲಾ ಟ್ರಸ್ಟ್ ವತಿಯಿಂದ ಶುಕ್ರವಾರ ನೂತನ ಗೋಶಾಲೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನಡೆಸಲಾಯಿತು.
ಈ ಸಂದರ್ಭ ಟ್ರಸ್ಟ್ ಸದಸ್ಯರ ಕುಟುಂಬದ ಸದಸ್ಯರು ಕುಟುಂಬ ಸಮೇತರಾಗಿ ಆಗಮಿಸಿ ಭೂಮಿ ಪೂಜೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ರಾಕೇಶ್ ಮಾತನಾಡಿ
ಉದ್ದೇಶಿತ ಗೋಶಾಲೆ ನಿರ್ಮಾಣಕ್ಕೆ ಅಡಿಪಾಯ ಕಾರ್ಯ ಆರಂಭವಾಗಿದೆ ನೂರಾರು ಗೋವುಗಳ ಸಂರಕ್ಷಣಾ ಮಾಡುವ ಉದ್ದೇಶವನ್ನು ನಾವು ಹೊಂದಿದ್ದು ಈಗಾಗಲೇ ಅಳಿವಿನ ಅಂಚಿನಲ್ಲಿ ಇರುವ ದೇಶಿಯ ಗೋ ತಳಿಗಳನ್ನು ಉಳಿಸುವುದು ನಮ್ಮ ಧ್ಯೇಯವಾಗಿದೆ.

ಗೋಶಾಲೆ ನಿರ್ಮಾಣಕ್ಕೆ ಸಮಾಜದ ಎಲ್ಲಾ ವರ್ಗದ ಜನತೆಯ ಸಹಕಾರ ಅಗತ್ಯವಿದೆ ಮುಂದಿನ ದಿನಗಳಲ್ಲಿ ನೂರಾರು ಗೋವುಗಳ ಸಾಕಲು ಮೇವು, ನಿರ್ವಹಣೆ ವೆಚ್ಚ ಬರಲಿದ್ದು ಗೋ ಪ್ರೇಮಿಗಳು ಸಹಕಾರ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಪವನ್ ಕಲಾಲ್, ಖಜಾಂಚಿ ನಾಗೇಂದ್ರ, ವಸಂತ್ ಸೊಲಂಕಿ, ಕಪ್ಪನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚರಣಕುಮಾರ್, ನಂದೀಶ್ , ಸಂದೇಶ್,ಪ್ರವೀಣ್ ಹದಡಿ,ಸಿದ್ದೇಶ್ ಇದ್ದರು.

News By: Raghu Shikari-7411515737