ಸೊರಬ : ಟಿಪ್ಪರ್ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಸೊರಬ : ಟಿಪ್ಪರ್ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಸೊರಬ: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ತಾಲೂಕಿನ ಮಣ್ಣತ್ತಿ ಗ್ರಾಮದ ಬಳಿ ನಡೆದಿದೆ.

ನ್ಯಾರ್ಸಿ ಗ್ರಾಪಂ ಸದಸ್ಯ ಪುರುದೂರು ಗ್ರಾಮದ ಈರಪ್ಪಯ್ಯ ಅವರ ಪುತ್ರ ಪ್ರತಾಪ್ ( 22) ಮೃತ ಬೈಕ್ ಸವಾರ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಣ್ಣತ್ತಿಯಿಂದ ಚಂದ್ರಗುತ್ತಿ ಮಾರ್ಗವಾಗಿ ಚಲಿಸುತ್ತಿದ್ದ ಟಿಪ್ಪರ್ ಮಣ್ಣತ್ತಿ ಕ್ರಾಸ್ ಬಳಿ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಪುರುದೂರು ಗ್ರಾಮದ ಗುರು (22) ಗಂಭೀರ ಗಾಯಗೊಂಡಿದ್ದಾನೆ.

ಗಾಯಾಳುವನ್ನು ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಪಿಎಸ್ಐ ಟಿ.ಬಿ. ಪ್ರಶಾಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಸೊರಬ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

News by: ದತ್ತ ಸೊರಬ

Admin

Leave a Reply

Your email address will not be published. Required fields are marked *

error: Content is protected !!