ಶಿಕಾರಿಪುರ: ತಾಲೂಕಿಗೆ‌ ಬೇಕಾದ ಅಗತ್ಯ ಸೌಲಭ್ಯ ನೀಡಿ ರೋಗಿಗಳಿಗೆ ಆತ್ಮವಿಶ್ವಾಸ ನೀಡಿ: ಸಚಿವ ಕೆ.ಎಸ್ ಈಶ್ವರಪ್ಪ..!

ಶಿಕಾರಿಪುರ: ತಾಲೂಕಿಗೆ‌ ಬೇಕಾದ ಅಗತ್ಯ ಸೌಲಭ್ಯ ನೀಡಿ ರೋಗಿಗಳಿಗೆ ಆತ್ಮವಿಶ್ವಾಸ ನೀಡಿ: ಸಚಿವ ಕೆ.ಎಸ್ ಈಶ್ವರಪ್ಪ..!

ಶಿಕಾರಿಪುರ ಪಟ್ಟಣದ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ -19 ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು
ಶಿಕಾರಿಪುರ ತಾಲೂಕಿಗೆ ಅಗತ್ಯಬಿರುವ ಯಾವುದೇ ತುರ್ತಗಾಗಿ ಸೌಲಭ್ಯವನ್ನು ಪೂರೈಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕೋರೋನ ಸೋಂಕಿತ ರೋಗಿಗಳಿಗೆ ಆತ್ಮವಿಶ್ವಾಸ ತುಂಬಿ ನನಗೆ ಯಾರು ಇಲ್ಲ ಎಂದು ಅನಿಸಬಾದ್ದು ರೋಗಿಗೆ ಏನು ಬೇಕು ಅದನ್ನು ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಿ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖವಾಗಿ ನಿಗ ಇಡಬೇಕು ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಿ ಎಂದರು.

ಜಿಲ್ಲಾಧಿಕಾರಿ ಶಿವಕುಮಾರ್ ಮಾತನಾಡಿ ಶಿಕಾರಿಪುರ ತಾಲೂಕಿನ ವೈದ್ಯರು ರೋಗಿಗಳ ಚಿಕಿತ್ಸೆ ಪದ್ದತಿಯನ್ನು ಸಿಮ್ಸ್ ನಲ್ಲಿ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂಬುದುನ್ನು ವಿಕ್ಷಿಸಿ ಅದೇ ರೀತಿ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬಹುದು ಗ್ರೂಪ್ ಡಿ ಗಳಿಗೆ ಟ್ರೈನಿಂಗ್ ನೀಡಬೇಕು ಕೋರೋನ ಕೇರ್ ಸೆಂಟರ್ ನಲ್ಲಿ ಸಿಸಿಟಿ ಕ್ಯಾಮರ ಅಳವಡಿಸಬೇಕು ವೈದ್ಯರು ಯಾವುದೇ ಸಂದರ್ಭದಲ್ಲೂ ಸೇವೆಗೆ ವೈದ್ಯರು ಸಿದ್ದ ಇರಬೇಕು.

ಮದುವೆ ಯಾವುದೇ ರೀತಿ ಜಾತ್ರೆ ಸಭೆ ಸಮಾರಂಭಗಳಲ್ಲಿ ಜನಗಳು ಸೇರುವಂತಿಲ್ಲ ಈ ಕುರಿತು ಗಮನ ನೀಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಲ್ಲಾ ರೀತಿಯ ಕ್ರಮ ಕೈಗೋಳ್ಳಬೇಕು ಎಂದರು.

ಅನಾವಶ್ಯಕ ಓಡಾಡುವವರಿಗೆ ತಡೆಗಟ್ಟಿಬೇಕು ಕೋರೋನ ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗಳಿಗೆ ಎಲ್ಲಾ ಸೌಲಭ್ಯ ನೀಡಿ‌ ಯಾವುದೇ ಕೊರತೆ ಆಗದಂತೆ ಕ್ರಮವಹಿಸಿ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರಬೇಕು ಯಾವುದೇ ದೂರು ಬಂದರು ಕ್ರಮ ತೆಗದುಕೋಳಲಾಗುವುದು‌ ಎಂದು ಎಚ್ಚರಿಕೆ ನೀಡಿದರು.

ಕೋರೋನ ನಿರ್ವಹಣೆಗೆ ಶಿಕಾರಿಪುರ ತಾಲೂಕಿಗ 50 ಲಕ್ಷ ಬಿಡುಗಡೆ ಮಾಡುತ್ತೇನೆ ಸಮರ್ಥಕವಾಗಿ ಇನ್ನೂ ಎರಡು ತಿಂಗಳು ಕಾಲ ಕೋರೋನ ಕಡಿಮೆಯಾಗುವ ಭರವಸೆ ಇದ್ದು ಎಚ್ಚರವಹಿಸಿ ಎಂದರು.

ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ ರೋಗಿಗಳನ್ನು ರೋಗಿಗಳ‌ ರೀತಿಯಲ್ಲಿ ನೋಡದೇ ಅವರನ್ನು ಪ್ರೀತಿಯಿಂದ ಚಿಕಿತ್ಸೆ ನೀಡಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ದೂರವಾಣಿ ಮೂಲಕ ಪ್ರತಿನಿತ್ಯ ಅವರ ಆರೋಗ್ಯ ವಿಚಾರಿಸಬೇಕು ಉಸಿರಾಟದ ಸಮಸ್ಯೆ ಕಂಡುಬಂದರೆ ತಕ್ಷಣ ಆಸ್ಪತ್ರೆ ದಾಖಲಿಸಬೇಕು ಎಂದರು.

ಈಗಿರುವ ಕರೋನ ರೋಗಿಗಳ ಹಾಸಿಗೆಯನ್ನು ಇನ್ನೂ ಹೆಚ್ಚಿಗೆಗೊಳ್ಳಿಸಿ ರೋಗಿಗಳಿಗೆ ಯಾವುದೇ ಸಮಸ್ಯೆ ತೊಂದರೆ ಉಂಟಗದಂತೆ ಎಚ್ವರಿಕೆ ವಹಿಸಿ ಎಂದರು.

ಈ‌ ಸಂದರ್ಬದಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೆಗೌಡ, ಜಿಲ್ಲಾ ಪಂಚಾಯತ್ ಸಿಇಓ ವೈಶಾಲಿ, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಕಾಂತ್ , ತಾಲೂಕ್ ಪಂಚಾಯತಿ ಅಧ್ಯಕ್ಷ ಸುರೇಶ್ ನಾಯ್ಕ್ , ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ, ವಿವಿಧ ಅಧಿಕಾರಿಗಳು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!