ದಂತಹರ್ಷ- ಭಾಗ-2 ವಸಡಿನ ಊತದಿಂದ ಬರುವ ದಂತಹರ್ಷ..!

ದಂತಹರ್ಷ- ಭಾಗ-2 ವಸಡಿನ ಊತದಿಂದ ಬರುವ ದಂತಹರ್ಷ..!

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
       ಸ್ವಾಸ್ಥ್ಯ ಸರ್ವರದ್ದೂ ಆಗಲಿ
               
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ದಂತಹರ್ಷ ಭಾಗ-೨
(ವಸಡಿನ ಊತದಿಂದ ಬರುವ ದಂತಹರ್ಷ)

🦷 ಹಲ್ಲು “ಜುಂ” ಎಂದು ವಿದ್ಯುತ್ ಶಾಕ್ ಹೊಡೆದಂತೆ ಸಂವೇದನೆಯಾಗುವುದನ್ನು ದಂತಹರ್ಷ Dental Sensitivity ಎಂದು ಕರೆಯುತ್ತಾರೆ.

🦷 ದಂತಹರ್ಷಕ್ಕೆ ಇರುವ ಎರಡನೇ ಕಾರಣ:
👉🏼 ವಸಡು ಸವೆದು, ಊತಗೊಂಡು ಹಲ್ಲಿನಿಂದ ತುಸುದೂರ ಸರಿದರೆ ಹಲ್ಲಿನ ಮಧ್ಯದ ಪದರಕ್ಕೆ ಹೊರವಾತಾವರಣ ಸ್ಪರ್ಶವಾಗಿ, ಅದು ಒಳಗಿರುವ ನರಗಳಿಗೆ ತಲುಪಿ ದಂತಹರ್ಷ ಉಂಟಾಗುತ್ತದೆ.

🦷 ಹಲ್ಲಿನ ರಕ್ಷಣೆಯಲ್ಲಿ ವಸಡಿನ ಕೆಲಸ:
👉🏼 ಹಲ್ಲಿನ ಪಾರ್ಶ್ವಭಾಗದಲ್ಲಿ ಎನಾಮಲ್ ಇರುವುದಿಲ್ಲ, ಅಲ್ಲಿ ನೇರ ಡೆಂಟೈನ್ ಪದರ ಇರುತ್ತದೆ, ಈ ಪದರ ಹೊರವಾತಾವರಣದ ಸಂಪರ್ಕಕ್ಕೆ ಬಾರದಂತೆ ಮುಚ್ಚಿಡುವುದೇ ನಮ್ಮ‌ವಸಡು.
ಹಾಗೆಯೇ ಕಚ್ಚುವಾಗ ಹಲ್ಲುಗಳು ಸುಲಭವಾಗಿ ಅಲುಗಾಡದಂತೆ ಬಿಗಿಯಾಗಿ ಹಿಡಿದಿಡುವುದೂ ಸಹ ಇದೇ ವಸಡು.

🦷 ವಸಡಿಗೆ ಏಕೆ ಊತ ಬರುತ್ತದೆ?
👉🏼 ಶರೀರದ ಜೀವಕೋಶಗಳಿಗೆ ಬೇಡವಾದ ಪದಾರ್ಥಗಳನ್ನು ನಿರಂತರವಾಗಿ ಸೇವಿಸುತ್ತಿದ್ದರೆ, ಅವುಗಳನ್ನು ಹೀರಿಕೊಳ್ಳಲು ಸಾಧ್ಯವಾಗದಿದ್ದಾಗ ಊತ ಬರುತ್ತದೆ. ಇದು ವಸಡಿಗೂ ಅನ್ವಯಿಸುತ್ತದೆ.

🦷 ವಸಡು ಏಕೆ ಸವೆಯುತ್ತದೆ?
👉🏼 ಇದು ವಿರಳವಾಗಿ ಕಂಡುಬರುತ್ತದೆ. ತೀವ್ರತರನಾದ ಉಪವಾಸ ಅಥವಾ ವಸಡಿಗೆ ಬೇಕಾದ ಪೋಷಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಸೇವನೆ ಮಾಡದಿರುವುದರಿಂದ ಸವೆತ ಉಂಟಾಗುತ್ತದೆ.

🦷 ಊತದಿಂದ ಹಲ್ಲು ಮತ್ತಷ್ಟು ಬಿಗಿಯಾಗಿಸುವ ಬದಲು ಸಡಿಲಗೊಳಿಸುವುದೇಕೆ?
👉🏼 ಊತಗೊಂಡ ಜೀವಕೋಶಗಳು ಶಕ್ತಿಯಿಂದ ಕೂಡಿರುವುದಿಲ್ಲ ಬದಲಾಗಿ ಅತ್ಯಂತ ದುರ್ಬಲಗೊಂಡಿರುತ್ತವೆ.
★ ಉದಾಹರಣೆಗೆ: ಶರೀರ ಸಹಜವಾಗಿ ದಪ್ಪ/ದೃಢವಾದರೆ ಶಕ್ತಿ ಹೆಚ್ಚುತ್ತದೆ. ಅದೇ ಊತ ಬಂದ ಶರೀರ ಅತ್ಯಂತ ದುರ್ಬಲವಾಗಿರುತ್ತದೆ, ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಅದರಂತೆ, ಇಲ್ಲಿಯೂ ಸಹ ಊತಗೊಂಡ ವಸಡು ಅತ್ಯಂತ ದುರ್ಬಲವಾಗಿರುತ್ತದೆ.

🦷 ವಸಡು ದುರ್ಬಲವಾದರೆ ಏನಾಗುತ್ತದೆ?
👉🏼 ಪ್ರಾರಂಭದಲ್ಲಿ ಹಲ್ಲು ಮತ್ತು ವಸಡುಗಳ ಮಧ್ಯದಲ್ಲಿ ಆಹಾರ ಕಣಗಳು ಶೇಖರಣೆಗೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಇನ್ನಷ್ಟು ದುರ್ಬಲಗೊಂಡಾಗ ಡೆಂಟೈನ್ ಹೊರ ವಾತಾವರಣಕ್ಕೆ ಮತ್ತು ಬಾಯಿಯಲ್ಲಿ ಹಾಕಿಕೊಳ್ಳುವ ಎಲ್ಲಾ ರಸಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ.
ಈ ಡೆಂಟೈನ್ ಪದರದ ಒಳ ಮುಖವು ಪಲ್ಪ್ ಎಂಬ ಮೃದು ಪದರಕ್ಕೂ ಮತ್ತು ನರತಂತುಗಳಿಗೂ ತೆರೆದುಕೊಂಡಿರುತ್ತದೆ. ಹಾಗಾಗಿ ತಕ್ಷಣ ತೀವ್ರ ಸಂವೇದನೆ ಅಂದರೆ “ಜುಂ” ಎನ್ನುವುದು.

🦷 ವಸಡಿನ ಊತವನ್ನು ಸರಿಪಡಿಸಲು ಸಾಧ್ಯವೇ?
ಖಂಡಿತಾ ಸಾಧ್ಯ.
👉🏼 ಆದರೆ, ಇಂದು ಅದನ್ನು ತಾತ್ಕಾಲಿಕ ಪರಿಹಾರವೆಂಬಂತೆ ಚಿಕಿತ್ಸೆ ಮಾಡಿ ಪದೇ ಪದೇ, ವೈದ್ಯರ ಭೇಟಿಮಾಡಿ, ಅತಿ ಹೆಚ್ಚಿನ ಖರ್ಚು ಮಾಡುತ್ತಿದ್ದೇವೆ ಮತ್ತು ಚಿಕಿತ್ಸೆಗೆ ಹೆಚ್ಚು ಸಮಯವನ್ನೂ ಸಹ ವಿನಿಯೋಗಿಸುತ್ತಿದ್ದೇವೆ.

🦷 ವಸಡಿನ ಊತಕ್ಕೆ ಶಾಶ್ವತ ಪರಿಹಾರ ಇದೆಯೇ?
ಖಂಡಿತಾ ಇದೆ.
👉🏼 ಹೇಗೆಂದರೆ, ಅದರ ಮೂಲ ಕಾರಣವಾದ ಮಾಂಸಧಾತುವನ್ನು ನಮ್ಮ ಉದರ-ಕರುಳುಗಳ ಒಳಗಿನಿಂದ ಪೋಷಣೆ ಮಾಡಿದರೆ ಖಂಡಿತಾ ಶಾಶ್ವತವಾಗಿ ಪರಿಹರಿಸಬಹುದು.
ಈ ಜ್ಞಾನ ಸಿದ್ಧಾಂತವನ್ನು ಕೊಟ್ಟಿರುವ ಆಯುರ್ವೇದವನ್ನು ಅನುಸರಿಸಬೇಕು. ಅದರ ಹೊರತು ಬರೀ ವಸಡನ್ನೇ ತಿದ್ದುತ್ತಾ-ತೀಡುತ್ತಾ ಕುಳಿತರೆ ಎಂದಿಗೂ ಅಸಾಧ್ಯ.

🦷 ನಿರ್ದಿಷ್ಟ ಟೂತ್‌ಪೇಸ್ಟ್ ಗಳನ್ನೇ ಬಳಸಿದರೂ ವಸಡಿನ ಊತದ ಸಮಸ್ಯೆ ಹಾಗೇ ಉಳಿದಿದೆ ಏಕೆ?
👉🏼 ಯಾವ ಊತವನ್ನು ಸರಿಪಡಿಸಲು ವಿಶೇಷ ರಾಸಾಯನಿಕಗಳಿಂದ ಸಿದ್ಧಪಡಿಸಿದ ಟೂತ್‌ಪೇಸ್ಟ್ ಗಳನ್ನು ಬಳಸುತ್ತೇವೆಯೋ ಅದರಲ್ಲಿನ ಮೂಲ ರಾಸಾಯನಿಕಗಳೇ ವಸಡನ್ನು ಊತಗೊಳಿಸಲು ಅತ್ಯಂತ ಹತ್ತಿರದ ಕಾರಣವಾಗಿಬಿಡುತ್ತಿವೆ!!!!
ಏಕೆಂದರೆ, ಸೋಪಿನ ಅಂಶವಿರದ ಟೂತ್‌ಪೇಸ್ಟ್ ಗಳಿಲ್ಲ, ಸೋಪನ್ನು ವಸಡಿಗೆ ತಗುಲಿಸಿಕೊಂಡು ಊತ ಬರಬಾರದೆಂದು/ಸರಿಯಾಗಬೇಕೆಂದು ಬಯಸುವುದು ಎಷ್ಟು ಹಾಸ್ಯಾಸ್ಪದವಲ್ಲವೇ!
ಸೋಪು ತಗುಲಿದ ಚರ್ಮ ಊದಿಕೊಳ್ಳದಿರಲು ಸಾಧ್ಯವೇ?!!

ಆಶ್ಚರ್ಯ ಎಂದರೆ-
ದಂತಹರ್ಷ ಎಂಬ ಒಂದು ಸಣ್ಣ ಸಮಸ್ಯೆಗೆ ಟೂತ್‌ಪೇಸ್ಟ್ ನಲ್ಲಿ ಬಳಸುವ ಕೃತಕ ವಿಷಕಾರೀ ರಾಸಾಯನಿಕಗಳು ದೊಡ್ಡ ಕಾಯಿಲೆಯನ್ನೇ ಬಳುವಳಿಯಾಗಿ ತರುತ್ತಿವೆ!

🦷 ಆಯುರ್ವೇದ ಗಿಡಮೂಲಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
👉🏼 ಆಯುರ್ವೇದ ಆಚಾರ್ಯರು ದಂತಧಾವನ(ಹಲ್ಲುಜ್ಜುವಿಕೆ) ಮಾಡಲು ತಿಳಿಸಿರುವ ಬಕುಲ, ಬೇವು, ಹೊಂಗೆ, ಕಗ್ಗಲಿ ಮುಂತಾದ ಗಿಡಮೂಲಿಕೆಗಳು ತಿಕ್ತ-ಕಷಾಯ ರಸಗಳನ್ನು ಹೊಂದಿವೆ, ಅವು ಊತವನ್ನು ತಕ್ಷಣ ಹೀರಿಬಿಡುವ ಸಾಮರ್ಥ್ಯವನ್ನು ಹೊಂದಿರುತ್ತವೆ, ಈ ಗಿಡಮೂಲಿಕೆಗಳನ್ನು ಬಳಸಿ ನಿತ್ಯವೂ ದಂತಧಾವನ ಮಾಡಿಕೊಳ್ಳುವುದು ಅತ್ಯಂತ ಶ್ರೇಯಸ್ಕರ, ಏಕೆಂದರೆ ಕೇವಲ ವಸಡು ಮಾತ್ರವಲ್ಲ ಇಡೀ ಬಾಯಿ ಗಂಟಲು ಕರುಳುಗಳಿಗೆ ಸಹಾಯವಾಗುವ ಅವು ಅಮೃತೋತ್ತಮ ಔಷಧಿ ದ್ರವ್ಯಗಳಾಗಿವೆ.

ಆದರೆ ಆಂತಹ ದ್ರವ್ಯಗಳನ್ನು ಹುಡುಕಿಕೊಂಡು ಹೋಗಲು ಇಂದಿನ ಜೀವನ ಪದ್ಧತಿಯಲ್ಲಿ ಅಸಾಧ್ಯ, ಒಂದೊಮ್ಮೆ ಹುಡುಕಿ ಹೊರಟರೂ ಆ ದ್ರವ್ಯಗಳು ಸಿಗುವುದೂ ಅಷ್ಟೇ ದುರ್ಲಭವಾಗಿದೆ.

🦷 ಇಲ್ಲಿದೆ ನೈಸರ್ಗಿಕ ದ್ರವ್ಯಗಳ ಪರಿಹಾರ:
👉🏼 ಹೌದು ನಿಮ್ಮಲ್ಲಿ ಹೆಚ್ವಿನ ಜನ ಈಗಾಗಲೇ ಬಳಸುತ್ತಿರುವ
ಅಥರ್ವ ಆಯುರ್ದಂತಮ್‌ ದಂತದ್ರವ ಶೇಕಡಾ 100ರಷ್ಟು ರಾಸಾಯನಿಕ ರಹಿತವಾಗಿ ಜಗತ್ತಿನಾದ್ಯಂತ ಜನರಿಗೆ ತಲುಪುತ್ತಿದೆ. ಆಚಾರ್ಯರು ಹೇಳಿರುವ ಗಿಡಮೂಲಿಕೆಗಳಲ್ಲದೇ ಒಂದೇ ಒಂದು ರಾಸಾಯನಿಕವನ್ನೂ ಹೊಂದಿರದ ಇದು ವಿಶ್ವದ ಪ್ರಪ್ರಥಮ ದ್ರವರೂಪೀ ದಂತಮಂಜನವಾಗಿದೆ💯

ಇದರ ನಿತ್ಯ ಬಳಕೆಯ ಲಾಭಗಳನ್ನು ತಾವುಗಳು ಅನುಭವದಿಂದ ನೋಡಿದ್ದೀರಿ. ಆದಾಗ್ಯೂ ಒಂದು ಲೇಖನದ ದೃಷ್ಟಿಯಿಂದ ಮುಂದಿನ ಸಂಚಿಕೆಗಳಲ್ಲಿ ಅದನ್ನು ವಿವರಿಸಲಾಗುವುದು.

ಅಥರ್ವ ಆಯುರ್ದಂತಮ್ ಬಗ್ಗೆ ಹೆಚ್ಚಿನ‌ಮಾಹಿತಿಗೆ ಸಂಪರ್ಕಿಸಿ
🤳 9916995513

ಆತ್ಮೀಯರೇ,
ನಮ್ಮ ಕರುಳುಗಳ ಆರೋಗ್ಯವೇ ನಮ್ಮ ಆರೋಗ್ಯ. ಹಾಗಾಗಿ ಶುದ್ಧ ಆಹಾರ ಪದ್ಧತಿಯನ್ನು ತಪ್ಪದೇ ಪಾಲಿಸಿರಿ.

8792290274
9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!