ಮೂತ್ರ ತಡೆಯುವುದರಿಂದ ಮೂತ್ರದ ಕಲ್ಲುಗಳಾಗುತ್ತವೆ!!

ಮೂತ್ರ ತಡೆಯುವುದರಿಂದ ಮೂತ್ರದ ಕಲ್ಲುಗಳಾಗುತ್ತವೆ!!

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
    🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
••••••••••••••
✍️: ಇಂದಿನ ವಿಷಯ:

ರೋಗಾನ್ ಅನುತ್ಪಾದನೀಯ ಅಧ್ಯಾಯದಲ್ಲಿ ಬರುವ- ಅಧಾರಣೀಯ ವೇಗಗಳು
◆ ಇಂದಿನ ವಿಷಯ-
ಮೂತ್ರ ತಡೆಯುವುದರಿಂದ ಮೂತ್ರದ ಕಲ್ಲುಗಳಾಗುತ್ತವೆ!!

ಬಂದಿರುವ ಮೂತ್ರವನ್ನು ತಡೆಯುವ ಅಭ್ಯಾಸ ಅಪಾಯಕರ.

❄️ ಅಂಗಭಂಗ ಅಶ್ಮರಿ ಬಸ್ತಿ ಮೇಢ್ರ ವಂಕ್ಷಣ ವೇದನಾಃ ||05||
ಮೂತ್ರಸ್ಯ ರೋಧಾತ್………………………………………..|
-ಅಷ್ಟಾಂಗ ಹೃದಯ, ರೋಗಾನ್ ಅನುತ್ಪಾದನೀಯ ಅಧ್ಯಾಯ-4

ಬಂದಿರುವ ಮೂತ್ರವನ್ನು ತಡೆಯುವ ಅಭ್ಯಾಸ ಇಟ್ಟುಕೊಂಡರೆ ಅಧೋವಾಯ ತಡೆದಾಗ ಬರುವ ರೋಗಗಳ ಜೊತೆಗೆ ಈ ಕೆಳಗಿನ ಹೆಚ್ಚಿನ 5 ರೋಗಗಳೂ ಸಹ ಬರುತ್ತವೆ.

1.ಅಂಗಭಂಗ
2.ಅಶ್ಮರಿ
3.ಬಸ್ತಿ ವೇದನ
4.ಮೇಢ್ರ ವೇದನ
5.ವಂಕ್ಷಣ ವೇದನ

💠 ಅಂಗಭಂಗ:
ದೇಹದ ದ್ರವರೂಪೀ ಕಶ್ಮಲವಾದ ಮೂತ್ರವನ್ನು ಅಪಾನವಾತದ ಸಂಜ್ಞೆಯನ್ನು ಸ್ವೀಕರಿಸಿದ ವ್ಯಾನ ವಾಯುವು ಸ್ನಾಯುಗಳನ್ನು ಒತ್ತಿ ಮೂತ್ರವನ್ನು ಹೊರಹಾಕುತ್ತದೆ. ಇದನ್ನು ತಡೆದರೆ, ಶರೀರದ ಎಲ್ಲಾ ಸ್ನಾಯುಗಳ ಸಂಕೋಚ ವಿಕಸನಕ್ಕೆ ಬಲವನ್ನು ಕೊಡುವ ವ್ಯಾನವು, ಮೈಕತ್ತರಿಸಿದಂತೆ ನೋವನ್ನು ಕೊಡುತ್ತದೆ.

💠 ಅಶ್ಮರಿ:
ಮೂತ್ರಪಿಂಡ, ಮೂತ್ರಮಾರ್ಗ, ಮೂತ್ರಕೋಶಗಳಲ್ಲಿ ಆಗುವ ಕಲ್ಲುಗಳನ್ನು ಅಶ್ಮರಿ ಎನ್ನುತ್ತಾರೆ. ಇಂದು ಬಹಳಷ್ಟು ಜನರನ್ನು ಪದೇ ಪದೇ ಆಸ್ಪತ್ರಗೆ ಅಲೆದಾಡಿಸುವ ಮತ್ತು ಎಷ್ಟೇ ಚಿಕಿತ್ಸೆ ಪಡೆದರೂ ಮತ್ತೆ ಮತ್ತೆ ಬರುವ ಈ ಕಲ್ಲುಗಳ ಉತ್ಪತ್ತಿಯ ಬಲವಾದ ಕಾರಣವೇ- ಮೂತ್ರವನ್ನು ತಡೆಯುವುದು.
★ ಮೂತ್ರದ ಉತ್ಪತ್ತಿ ಹೇಗಾಗುತ್ತದೆ?
ಮೂತ್ರವು ದ್ರವರೂಪದಲ್ಲಿದ್ದರೂ ಅದರಲ್ಲಿ ಬಹಳಷ್ಟು ಲವಣಾಂಶಗಳು ಇರುತ್ತವೆ, ನಿತ್ಯವೂ ದೇಹದಲ್ಲಿ ಧಾತುಗಳು ಸವೆದು ತುಂಬುತ್ತಿರುವಾಗ ಒಂದಷ್ಟು ಕಶ್ಮಲಗಳು ಉಂಟಾಗುತ್ತವೆ ಅವುಗಳನ್ನು ಕ್ಲೇದವೆಂದು ಕರೆಯುತ್ತೇವೆ. ಈ ಕ್ಲೇದ ಮೃದುವಾಗಿದ್ದು ಹಲವು ಕಾರಣಗಳಿಂದ ಗಟ್ಟಿಯಾಗುತ್ತದೆ. ಅವುಗಳೆಂದರೆ ಕೇವಲ ಖಾರ-ಉಪ್ಪು-ಮಸಾಲೆಗಳ ಅತಿಯಾದ ಸೇವನೆ,
ನಿದ್ದೆಗೆಡುವುದು, ಆಹಾರ ತಯಾರಿಕೆಯಲ್ಲಿ ಕಡಿಮೆ ನೀರನ್ನು ಬಳಸುವುದು ಮತ್ತು ಮೂತ್ರವನ್ನು ತಡೆಯುವುದು.
★ ಮೂತ್ರವನ್ನು ತಡೆದರೆ ಏನಾಗುತ್ತದೆ?

  1. ಶರೀರದ ಮಲ ‘ಕ್ಲೇದ’ ಎಂಬ ಸಾಂದ್ರ ದ್ರವ್ಯವು ಹೊರಹೋಗಲು ‘ಸ್ನಾಯುಗಳ ಒತ್ತಡ ಇರುತ್ತದೆ’, ‘ಒಳಗಡೆ ಬಿಸಿ ಇರುತ್ತದೆ’ ಹಾಗೆಯೇ ‘ಜಲಾಂಶವನ್ನು ಶರೀರವು ಮರಳಿ ಹೀರುತ್ತಿರುತ್ತದೆ’- ಈ ಸಂದರ್ಭದಲ್ಲಿ ಮೂತ್ರವನ್ನು ತಡೆಯುವ ಅಭ್ಯಾಸವನ್ನು ರೂಢಿಸಿಕೊಂಡರೆ ಕ್ಲೇದವು ಗಟ್ಟಿಯಾಗುತ್ತಾ ಸಾಗುತ್ತದೆ. ಇದೇ ಮುಂದೆ ಮೂತ್ರದ ಕಲ್ಲುಗಳಾಗಿ ಬದಲಾಗುತ್ತವೆ.
  2. ಕೇವಲ ಕಲ್ಲಾಗುವುದು ಒಂದು ಹಂತವಾದರೆ, ಈ ಕಶ್ಮಲವು ನಮ್ಮ ಮಾಂಸಖಂಡಗಳಲ್ಲಿ, ರಕ್ತನಾಳಗಳಲ್ಲಿ, ಲಿಗಮೆಂಟ್ ಗಳಲ್ಲಿ ಯೂರಿಕ್ ಆಮ್ಲದ ರೂಪದಲ್ಲಿ ಶೇಖರಣೆಯಾಗಿ ಅವುಗಳನ್ನು ಒಣಗಿಸುತ್ತದೆ, ಇದನ್ನು ಮರಳಿ ಸರಿಮಾಡಲು ಕಷ್ಟ ಅಥವಾ ಅಸಾಧ್ಯ, ಇದು ಜೀವಧಾರಣ ಅವಯವಗಳಾದ ರಕ್ತನಾಳಗಳು, ಹೃದಯ, ಮೆದುಳು, ನರಗಳು ಮತ್ತು ಕಿಡ್ನಿಗಳ ದೀರ್ಘಕಾಲೀನ ರೋಗಗಳನ್ನು ತಂದು ದೇಹನಾಶಕ್ಕೆ ಕಾರಣವಾಗುತ್ತದೆ ಹಾಗಾಗಿ ಮೂತ್ರವನ್ನು ತಡೆಯುವ ರೂಢಿ ಇದ್ದರೆ ಇಂದೇ ಸರಿಪಡಿಸಿಕೊಳ್ಳಿ.

💠 ಬಸ್ತಿ ವೇದನಾಃ :
ಮೂತ್ರಕೋಶವನ್ನು ಸಂಸ್ಕೃತದಲ್ಲಿ ಬಸ್ತಿ ಎನ್ನುತ್ತಾರೆ, ಮೂತ್ರವನ್ನು ತಡೆದರೆ ಆರಂಭಿಕ ಬಸ್ತಿನೋವು ಬರುತ್ತದೆ, ಆದರೆ ದಿನಕಳೆದಂತೆ ಬ್ಲಾಡರ್ ನ ಒಳಪದರದ ಊತ ಬರುತ್ತದೆ ಇದನ್ನು cystitis ಎಂದು ಕರೆಯುತ್ತಾರೆ, ಬಹಳ ಕಾಲ ಹೀಗೇ ಮುಂದುವರಿದರೆ ಒಳಗೆ ಗಂಟುಗಳಾಗಿ, ಅರ್ಬುದಗಳೂ ಆಗುವ ಸಾಧ್ಯತೆ ಇರುತ್ತದೆ.

💠 ಮೇಢ್ರ ವೇದನ:
ಶಿಶ್ನವನ್ನು ಸಂಸ್ಕೃತದಲ್ಲಿ ಮೇಢ್ರ ಎನ್ನುತ್ತಾರೆ, ಇದು ಸುತ್ತಲಿನ ಒತ್ತಡದ ಕಾರಣದಿಂದ ಆಗುತ್ತದೆ.

💠 ವಂಕ್ಷಣ ವೇದನ:
ತೊಡೆ ಸಂದುಗಳನ್ನು ಸಂಸ್ಕೃತದಲ್ಲಿ ವಂಕ್ಷಣ ಎನ್ನುತ್ತಾರೆ, ತೀವ್ರತರವಾದ ನೋವು ಇದಾಗಿದ್ದು ಇದೂ ಸಹ ಸುತ್ತಲಿನ ಒತ್ತಡದ ಕಾರಣದಿಂದ ಆಗುತ್ತದೆ.

*
ಮೂತ್ರ ವಿಕಾರವನ್ನು ಚಿಕಿತ್ಸಿಸೋಣ, ಆದರೆ ಸಹಜವಾಗಿ, ತಾನಾಗಿ ಬಂದ ಮೂತ್ರದ ಪ್ರವೃತ್ತಿಯನ್ನು ನೀವಾಗೀ ತಡೆದು ಅಪಾಯವನ್ನು ತಂದುಕೊಳ್ಳದಿರಿ.


♻️ಆರೋಗ್ಯಕ್ಕಾಗಿ ಆಯುರ್ವೇದ ಅನುಸರಿಸಿ♻️

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!