ಅಧಾರಣೀಯ ವೇಗಗಳು. ಭಾಗ-3

ಅಧಾರಣೀಯ ವೇಗಗಳು. ಭಾಗ-3

✍️: ಇಂದಿನ ವಿಷಯ:
ಅಧಾರಣೀಯ ವೇಗಗಳು.
ಭಾಗ-3

ಅಧೋವಾಯು(ಗುದದಿಂದ ಹೊರಬರುವ ಕಲ್ಮಶ ಗಾಳಿ)ವನ್ನು ತಡೆಯುವ ಅಭ್ಯಾಸ ಉಳ್ಳವರಿಗೆ, ಹೃದ್ರೋಗದಂತಹ ದೊಡ್ಡ ಕಾಯಿಲೆಗಳು ಬರುತ್ತವೆ…!!

📜 ಅಧೋವಾತಸ್ಯ ರೋಧೇನ……………ಹೃದ್ಗದಾಃ ||
-ಅಷ್ಟಾಂಗ ಹೃದಯ, ಸೂತ್ರ ಸ್ಥಾನ, ‌ಅಧ್ಯಾಯ-4/2

▫️ ಅಧೋವಾಯುವನ್ನು ತಡೆಯುವುದರಿಂದ ಬರಬಹುದಾದ ರೋಗಗಳು:

ಗುಲ್ಮ(ಕರುಳಿನ ಕ್ರಿಯಾತ್ಮಕ ಗ್ರಂಥಿ)
★ ಉದಾವರ್ತ(ಹೊಟ್ಟೆ ಉಬ್ಬರ)
★ ಉದರಶೂಲೆ
★ ಕ್ಲಮ( ಸರ್ವಾಂಗ ಆಲಸ್ಯ, ಜಡತ್ವ, ಉತ್ಸಾಹ ಹೀನತೆ)
★ ವಾತ ತಡೆ(ಅಧೋವಾಯು ತಡೆ)
★ ಮೂತ್ರ ತಡೆ
★ ಮಲ ತಡೆ
★ ದೃಷ್ಟಿ ನಾಶ
★ ಅಗ್ನಿ ನಾಶ
★ ಹೃದ್ರೋಗಗಳು ಬರುತ್ತವೆ!!

👁‍🗨ಆಯುರ್ ವೈಜ್ಞಾನಿಕ ವಿವರಣೆ ನೋಡೋಣ:

ಕ್ಲಮ:
ಅತಿಯಾಗಿ ಊಟಮಾಡಿದಾಗ ಶರೀರಕ್ಕೆ ಬರುವ ಜಡತ್ವದ ಸ್ಥಿತಿಯನ್ನೇ ಕ್ಲಮ‌ ಎನ್ನುತ್ತಾರೆ.
ಇದು ರಕ್ತದಲ್ಲಿ ಜೀರ್ಣವಾಗದೇ ಉಳಿದ ಆಹಾರದ ಲಕ್ಷಣ. ಅಧೋವಾಯುವನ್ನು ತಡೆದರೆ, ಉದರದಲ್ಲಿ ಅನ್ನ ಜೀರ್ಣವಾಗುವ ಮೊದಲೇ ರಕ್ತವನ್ನು ಸೇರಿ ಮೈಭಾರವಾಗುತ್ತದೆ. ಕೆಲಕಾಲದ ನಂತರ ಹಗುರವಾಗಬಹುದು, ಮತ್ತೆ ಮತ್ತೆ ಇದೇ ಮುಂದುವರಿದರೆ, ಆಮವಾತದಂತಹ ರೋಗಗಳ ಸಾಧ್ಯತೆ ಹೆಚ್ಚು.

ವಾತಗ್ರಹ:
ಸಹಜವಾಗಿ ಬಂದ ಅಧೋವಾಯುವನ್ನು ತಡೆಯುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ, ಅದು ಸಂಚಯವಾಗಿ, ಇನ್ನಷ್ಟು ವಾತವನ್ನುಂಟುಮಾಡುತ್ತದೆ. ಆಗ ದೊಡ್ಡಕರುಳಿನ ಒತ್ತಡ ಹೆಚ್ಚುವ ಕಾರಣ‌ ಗುದವಲಿಗಳಲ್ಲಿ ಊತ ಉಂಟಾಗಿ ಅಧೋವಾಯುವನ್ನು ತಡೆದುಬಿಡುತ್ತದೆ. ಕ್ರಮೇಣ ಇದು ಒಣ ಮೂಲವ್ಯಾಧಿ (ಶುಷ್ಕಾರ್ಶಸ್ಸು)ಯನ್ನು ತರುತ್ತದೆ.

ಮೂತ್ರಗ್ರಹ (ಮೂತ್ರದ ತಡೆ):
ಹೆಚ್ಚಿನ ವೈದ್ಯರು ಇದು ಕೇವಲ ದೊಡ್ಡಕರುಳಿನಲ್ಲಿ ವಾಯು ಸಂಚಯವಾದಾಗ ಆಗುವ ತಾತ್ಕಾಲಿಕ ಮತ್ತು ಯಾಂತ್ರಿಕ ಮೂತ್ರದ ತಡೆ ಎನ್ನುತ್ತಾರೆ. ಹೌದು ಮೊದ ಮೊದಲಿಗೆ ಅದು ಯಾಂತ್ರಿಕ ತಡೆ.
ಆದರೆ ಮತ್ತೆ ಮತ್ತೆ ಮೂತ್ರದ ವೇಗವನ್ನು ತಡೆಯುವುದರಿಂದ, ಅಧೋಮುಖವಾಗಿ ಚಲನೆಯಲ್ಲಿರಬೇಕಾದ ಈ ವಾಯುವು ಸಂಚಯವಾಗಿ ಊರ್ಧ್ವಮುಖಿಯಾಗಿ, ಧಾತುಗಳನ್ನು (ಶರೀರವನ್ನು) ಒಣಗಿಸುವ ಕಾರಣ, ಮೂತ್ರ ಉತ್ಪತ್ತಿ ಆದರೂ ಒಣಗಿದ ಶರೀರವನ್ನು ತುಂಬಲು ನೆಫ್ರಾನ್(ಗ್ಲೊಮರುಲ)ಗಳಲ್ಲಿನ ದ್ರವದ ಮರುಹೀರುವಿಕೆ ಹೆಚ್ಚಾಗುವುದು, ಆಗಲೂ ಮೂತ್ರದ ತಡೆ ಆಗುತ್ತದೆ. ಮುಂದೆ ಮಾಂಸಾದಿ ಧಾತುಗಳ ಪ್ರೋಟೀನ್ ಕರಗುವಷ್ಟು ವಾತ ಪ್ರಕೋಪಗೊಂಡರೆ, ಹೊಟ್ಟೆ ಸದಾ ಗುಡುಗುಡು ಎನ್ನುತ್ತಾ, ಮೂತ್ರದಲ್ಲಿ ತಡೆಯುಂಟುಮಾಡಿದರೆ ಆಗ ಇದು ತಾತ್ಕಾಲಿಕವಲ್ಲ ಮತ್ತು ಗಂಭೀರ ಸಮಸ್ಯೆಯಾಗಲು ಬಹಳ ಕಾಲ ಬೇಕಿಲ್ಲ.

ಶಕೃತ್ ಗ್ರಹ (ಮಲಗ್ರಹ):
ಮಲವು ದೊಡ್ಡಕರುಳಿನ ಆರಂಭ ಭಾಗವಾದ ಉಂಡುಕ(ಪುರೀಷವಹ/ಮಲವಹ ಸ್ರೋತಸ್ಸಿನ‌ ಮೂಲ ಸ್ಥಾನ)ದಿಂದ ಇಡೀ ದೊಡ್ಡ ಕರುಳು ಅಧೋವಾಯುವಿನಿಂದ ಆವೃತವಾಗುತ್ತದೆ. ಆಗ ಮಲವು ಒಣಗಿ ಹಿಕ್ಕೆಯಂತೆ ಆಗುತ್ತಾ ಅಲ್ಪ ಮತ್ತು ಕಷ್ಟದಿಂದ ಪ್ರವೃತ್ತಿಯಾಗುತ್ತದೆ. ನಿರಂತರ ಇದೇ ಪ್ರಕ್ರಿಯೆ ಇದ್ದರೆ ಮಲದ ಉತ್ಪತ್ತಿ ಸರಿಯಾಗಿ ಆಗುವುದಿಲ್ಲ ಮತ್ತು ಗುದದ ಸ್ನಾಯುಗಳು ದುರ್ಬಲಗೊಳ್ಳುತ್ತವೆ.

ಮಲೋತ್ಪತ್ತಿ ಸರಿಯಾಗಿ ಆಗದಿದ್ದರೆ ದೇಹ ನೆಟ್ಟಗೆ ನಿಲ್ಲಲು‌ ಮತ್ತು ಸಶಕ್ತವಾಗಿ ಕೆಲಸ ಮಾಡಲು ತುಂಬಾ ಕಷ್ಟ!!! ಅಚ್ಚರಿ ಆದರೂ ಸತ್ಯ, ಪ್ರಾಕೃತ ಮಲವು ನಮ್ಮ ಜೀರ್ಣಶಕ್ತಿಯನ್ನೂ ಸರಿಯಾಗಿಡುತ್ತದೆ ಮತ್ತು ದೇಹ ನೆಟ್ಟಗೆ ಇರುವಂತೆ ನೋಡಿಕೊಳ್ಳುತ್ತದೆ.

💥 ಅವಷ್ಟಂಭ ಪುರೀಷಸ್ಯ….|
-ಅಷ್ಟಾಂಗ ಸಂಗ್ರಹ ‌ಸೂತ್ರ ಸ್ಥಾನ.

ಹೊಟ್ಟೆಯುಬ್ಬರದಿಂದ
👇
ಮಲ ಪ್ರವೃತ್ತಿಯು ಸರಿಯಾಗಿ ಆಗದು
👇
ಆಗ ಅಗ್ನಿ ವಿಷಮಗೊಳ್ಳುತ್ತದೆ
👇
ಮತ್ತೆ ಮಲೋತ್ಪತ್ತಿ ವ್ಯತ್ಯಯ
👇
ಪುನಃ ಮಲಬದ್ಧತೆ‌
👇
ಹೊಟ್ಟೆಯುಬ್ಬರ🤷‍♂

ಹೀಗೆ ಮತ್ತೆ ಮತ್ತೆ ಅದೇ ಚಕ್ರ ಸುತ್ತುತ್ತದೆ.
ಹಾಗಾಗಿ ಬಹಳ ಕಾಲದಿಂದ ಇರುವ ಹೊಟ್ಟೆಯುಬ್ಬರವು ಪಥ್ಯ ಮತ್ತು ಔಷಧಗಳಿಂದಲೂ ಸಹ ನಿಧಾನವಾಗಿ ಗುಣವಾಗುತ್ತದೆ.

ಉಳಿದವುಗಳನ್ನು ನಾಳೆ ನೋಡೋಣ…..

♻️ಆರೋಗ್ಯಕ್ಕಾಗಿ ಆಯುರ್ವೇದ ಅನುಸರಿಸಿ♻️

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!