ಮೂತ್ರನಾಳದ ಸೋಂಕು‌ ಅಥವಾ UTI(Urinary tract infection).

ಮೂತ್ರನಾಳದ ಸೋಂಕು‌ ಅಥವಾ UTI(Urinary tract infection).

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಮೂತ್ರನಾಳದ ಸೋಂಕು‌ ಅಥವಾ UTI(Urinary tract infection).

ಹೆಚ್ಚಿನ ಮಹಿಳೆಯರನ್ನು,‌ ಅನೇಕ ಪುರುಷರನ್ನು ಕಾಡುವ ಮೂತ್ರನಾಳದ ಉರಿಗೆ ಸೋಂಕು ಕಾರಣ ಎಂದು ನಂಬಿದ್ದೇವೆ, ಆದರೆ ಎಲ್ಲಾ ಉರಿಗೆ ಕಾರಣ ಸೋಂಕು ಅಲ್ಲ ಮತ್ತು ಪದೇ ಪದೇ ಸೇವಿಸುವ ಆ್ಯಂಟಿಬಯೋಟಿಕ್ ಇನ್ನಷ್ಟು ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ! ಮತ್ತೆ ಸೋಂಕು ತಗುಲಲು ಮತ್ತಷ್ಟು ಸಹಾಯ ಮಾಡುತ್ತದೆ!!

ರಸಧಾತು ಎಂಬ ಶಕ್ತಿಯುತ ಸಾಂದ್ರ ದ್ರವ್ಯ ಶ್ಲೇಷ್ಮ ಎಂಬ ಹೆಸರಿನಿಂದ ಮೂತ್ರನಾಳದಲ್ಲಿಯೂ ಇರುತ್ತದೆ. ಇದು ಮೂತ್ರದ ಕ್ಷಾರೀಯ ಅಂಶದಿಂದ ನಾಳವನ್ನು ರಕ್ಷಿಸುತ್ತದೆ.
ಈ ರಸಧಾತುವಿನ ದುರ್ಬಲತೆಯೇ ಸಹಜವಾಗಿ ಮೂತ್ರದ ಉರಿಗೆ ಕಾರಣ. ಇಲ್ಲಿ ಯಾವ ಆ್ಯಂಟಿಬಯೋಟಿಕ್ ಬೇಕು? ಹೊರಗಿನ ಕಾರಣವನ್ನೇ ಹುಡುಕುವುದು ಏಕಮುಖ ದೃಷ್ಟಿ.

ಇದು ಒಂದು ಕಾರಣ, ಮತ್ತೊಂದು ಕಾರಣ ಇನ್ನೂ ವಿಶೇಷವಾಗಿದೆ.

❄️ಮೂತ್ರಸ್ಯ ಕ್ಲೇದ ವಹನಂ…..

★ ಕ್ಲೇದ ಎನ್ನುವುದು, ಮೇದ(ಕೊಬ್ಬು)ಧಾತುವಿನ ಮಲ.
ನಾವು ಸೇವಿಸಿದ ಆಹಾರದಲ್ಲಿರುವ ಜಿಡ್ಡಿನ ಅಂಶವು ಜೀರ್ಣವಾಗುವಾಗ ಎರಡು ಭಾಗವಾಗಿ ಒಂದು ಪ್ರಾಕೃತ ಸ್ನೇಹ ವಾಗುತ್ತದೆ ಅದೇ ಮೇದಧಾತು, ಹಾಗೆಯೇ ಸ್ವಲ್ಪ ಭಾಗ ಮಲ ಉಂಟಾಗುತ್ತದೆ ಅದೇ ಕ್ಲೇದ.

ಈ ಸಾರ ಮತ್ತು ಮಲವು ನಮ್ಮ ಶರೀರದಲ್ಲಿ ನಿರಂತರ ಉಂಟಾಗುವ ಪ್ರಕ್ರಿಯೆ.
ಸಾರವು ಶರೀರದೊಳಗೇ ಉಳಿದುಕೊಂಡು ಅಗತ್ಯಾನುಸಾರ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಮಲವು ವಿವಿಧ ಮಾರ್ಗಗಳಿಂದ ಹೊರಹೋಗುತ್ತಿರುತ್ತದೆ.

ಕ್ಲೇದ ಹೊರಹೋಗುವ ಮಾರ್ಗ ಮೂತ್ರ ಮತ್ತು ಸ್ವೇದ.
ಈ ಕ್ಲೇದವು ಅಸಂಪೂರ್ಣ ಜೀರ್ಣಕ್ರಿಯೆಯಿಂದ ಉಂಟಾಗಿದ್ದರೆ ಸ್ವಲ್ಪ ಭಾಗ ಶಕ್ತಿಯನ್ನು ಉಳಿಸಿಕೊಂಡಿರುವ ಕಾರಣ ಮೂತ್ರ ಉತ್ಪತ್ತಿಯಿಂದ ವಿಸರ್ಜನೆಯವರೆಗೆ ತಡೆತಡೆದು ಚಲಿಸುತ್ತದೆ(ಅಪಕ್ವಂ ಧಾರಯತಿ… ಸಿದ್ಧಾಂತದಂತೆ), ಕ್ಲೇದ ಚಲಿಸಿ ಹೊರನಡೆಯುವಾಗ ಅದರ ಮಾರ್ಗದ ಯಾವುದೇ ಭಾಗವಾದರೂ ಅದರಲ್ಲಿರುವ ಶಕ್ತಿಯನ್ನು ಮತ್ತೆ ಹೀರಿ ಶರೀರದ ಮೇದಧಾತುವಿಗೆ ಕೊಡುವ ಸಾಧ್ಯತೆ ಇರುವ ಕಾರಣ ಚಲನೆ ನಿಧಾನವಾಗುತ್ತದೆ. ಸ್ವಲ್ಪ ಪೋಷಣೆ ಅಂಶ ಹೊಂದಿರುವ ಕ್ಲೇದ ಸಹಜವಾಗಿ ಉಷ್ಣತೆಯನ್ನು ಬಿಡುಗಡೆ ಮಾಡುತ್ತದೆ. ಅದು ಮೂತ್ರನಾಳದಲ್ಲಿರುವ ರಸಧಾತುವನ್ನು ಮೀರುವಂತಿದ್ದರೆ ಉರಿಯನ್ನು ತರುತ್ತದೆ, ಇಲ್ಲದಿದ್ದರೆ ಸರಳವಾಗಿ ಹರಿದುಹೋಗುತ್ತದೆ. ಇಲ್ಲಿ ಯಾವ ಸೋಂಕೂ ಇರುವುದಿಲ್ಲ, ಯಾವುದೇ ಆ್ಯಂಟಿಬಯೋಟಿಕ್ ಬೇಕಿರುವುದಿಲ್ಲ. ಇಲ್ಲಿ ಬೇಕಾಗಿರುವುದು ಕ್ಲೇದ ಪಾಚನ ದ್ರವ್ಯ ಅಷ್ಟೆ. ಆಯುರ್ವೇದದಲ್ಲಿ ಅತ್ಯಂತ ಶ್ರೇಷ್ಠ ಕ್ಲೇದ ಪಾಚಕ ದ್ರವ್ಯಗಳಿವೆ. ಅಲೋಪತಿಗೆ ಹಾಗೆಂದರೇನೆಂಬುದೇ ತಿಳಿದಿಲ್ಲ!!

👉 ಆತ್ಮೀಯರೇ,
ನಮ್ಮ ಶರೀರ ಎಲ್ಲಾ ಆಹಾರವನ್ನೂ ನಿಶ್ಯೇಷವಾಗಿ ಜೀರ್ಣಿಸಲು ಸದಾ ಸಿದ್ಧ, ಇದಕ್ಕೆ ನಮ್ಮ ಸಹಕಾರ ಎಂದರೆ ಶಾರೀರಿಕ ಶ್ರಮ.
ಇದರಿಂದ ಬೆವರಿನ ಮುಖಾಂತರ ಹೆಚ್ಚಿನ ಕ್ಲೇದವು ಹೊರಹೋದರೆ ಕಿಡ್ನಿ, ಮೂತ್ರಕೋಶ ಮತ್ತು ಮೂತ್ರಮಾರ್ಗ ಸುರಕ್ಷಿತ.
ಆಯ್ಕೆ ನಮ್ಮದು…..

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!