ಶಿವಮೊಗ್ಗ :ಮುಖ್ಯಮಂತ್ರಿ ಬಿ.ಎಸ್ ವೈ ಸ್ವಕ್ಷೇತ್ರ ಆಗಮನ ಹುಟ್ಟುಹಬ್ಬ ಆಚರಣೆ ವಿವಿಧ ಕಾಮಗಾರಿ ಚಾಲನೆ‌ ಉದ್ಘಾಟನೆ..!

ಶಿವಮೊಗ್ಗ :ಮುಖ್ಯಮಂತ್ರಿ ಬಿ.ಎಸ್ ವೈ ಸ್ವಕ್ಷೇತ್ರ ಆಗಮನ ಹುಟ್ಟುಹಬ್ಬ ಆಚರಣೆ ವಿವಿಧ ಕಾಮಗಾರಿ ಚಾಲನೆ‌ ಉದ್ಘಾಟನೆ..!

ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪರವರು ಫೆಬ್ರವರಿ 28 ಮತ್ತು ಮಾರ್ಚ್ 01 ರಂದು ಶಿವಮೊಗ್ಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಫೆ. 28 ರ ಭಾನುವಾರ ಬೆ. 09.30 ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಬೆ. 10.55ಕ್ಕೆ ಸೊರಬಕ್ಕೆ ಆಗಮಿಸಲಿದ್ದಾರೆ.

ನಂತರ ಬೆ. 11. ಕ್ಕೆ ಆನವಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸೊರಬ ತಾಲೂಕಿನ ಮೂಗೂರು ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮ.1.15ಕ್ಕೆ ಸೊರಬದಿಂದ ಹೆಲಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸುವರು.

ಸಂಜೆ 5.30ಕ್ಕೆ ನಗರದ ಆಲ್ಕೊಳ ಸರ್ಕಲ್ ಹತ್ತಿರದ ಗೋಪಾಲಗೌಡ ಬಡಾವಣೆಯಲ್ಲಿರು ಮೆಡಿಕಲ್ ಶಾಪ್ ಅಸೋಸಿಯೇಷನ್ಸ್ ಔಷಧ ಭವನ ಉದ್ಘಾಟನೆ ನೆರವೇರಿಸುವರು.

ಸಂ. 6.00ಕ್ಕೆ ನಗರದ ಹಳೇ ಜೈಲು ಆವರಣದಲ್ಲಿ ಜಿಲ್ಲಾಡಳಿತ ಮತ್ತು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿ. ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಸ್ಮಾರ್ಟ್‍ಸಿಟಿ ವತಿಯಿಂದ ಕೈಗೊಂಡ ಬಹು ಉಪಯುಕ್ತತಾ ಸ್ಥಳದ ಅಭಿವೃದ್ಧಿಯ ಭಾಗಶಃ ಅನುಷ್ಠಾನ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಸಂ. 6.30ಕ್ಕೆ ಹಳೇ ಜೈಲು ಆವರಣದಲ್ಲಿ ಬಿ.ಎಸ್. ಯಡಿಯೂರಪ್ಪನವರ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿರುವ ಮುಖ್ಯಮಂತ್ರಿಯವರಿಗೆ “ನಮ್ಮೊಲುಮೆ” ಅಭಿಮಾನದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಹಾಗೂ ಅಂದು ಶಿವಮೊಗ್ಗದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಮಾ.01 ರಂದು ಸೋಮವಾರ ಬೆಳಗ್ಗೆ 9.00ಕ್ಕೆ ನಗರದ ವಿನೋಬನಗರ ಗೆಜ್ಜೆನಹಳ್ಳಿ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಬೆ. 9.15 ಶಿವಮೊಗ್ಗ ಮಹಾನಗರ ಪಾಲಿಕೆಯ ಹತ್ತಿರ ಎನ್.ಡಿ.ವಿ.ಹಾಸ್ಟೆಲ್ ಕಟ್ಟಡ ನಿರ್ಮಣಕ್ಕೆ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆ. 9.30ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!