ದಕ್ಷಣ ಭಾರತದ ಬಿಜೆಪಿಯ ಮೊದಲ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ.. ಯಾರು ತುಳಿಯದ ಹಾದಿ…!

ಶಿವಮೊಗ್ಗ: ಬಿ.ಎಸ್ ಯಡಿಯೂರಪ್ಪ ಎಂದರೇ ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ ಎಂದೇ ಹೆಸರು ರಾಷ್ಟ್ರ ಮಟ್ಟದಲ್ಲೂ ಅವರ ಹೆಸರು ರಾಜಕೀಯವಾಗಿ ಗುರುತಿಸಿಕೊಂಡಿರುವ ವ್ಯಕ್ತಿ ಪ್ರಸ್ತುಕ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ರಾಜ್ಯ ಬಿಜೆಪಿಯ ಪೈರ್ ಬ್ರಾಂಡ್ ಮಾಸ್ ಲೀಡರ್ ರಾಜಾಹುಲಿ ಎಂದು ಹೆಸರಾಗಿರುವ ಬಿ.ಎಸ್ ಯಡಿಯೂರಪ್ಪನವರು ಫೆ.27 ರಂದು 79 ನೇ ವರ್ಷಕ್ಕೆ ಕಾಲಿಡುತ್ತಿದ್ದು ರಾಜಕೀಯ ಜೀವನದಲ್ಲಿ ಅನೇಕ ಏಳುಬಿಳುಗನ್ನು ದಾಟಿ ಎಲ್ಲಾವನ್ನು ಗೆದ್ದು ಮತ್ತೆ ಮುಖ್ಯಮಂತ್ರಿಗಳಾಗಿದ್ದಾರೆ .
ಬಿ.ಎಸ್ ಯಡಿಯೂರಪ್ಪ ಕರ್ಮ ಭೂಮಿ ಶಿಕಾರಿಪುರ ಆಗಿದ್ದು ಅದರೆ ಅವರ ಜನ್ಮ ಭೂಮಿ ಮಂಡ್ಯ ಜಿಲ್ಲೆಯ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಿದ್ದಲಿಂಗಪ್ಪ ಮತ್ತು ಪುಟ್ಟತಾಯಮ್ಮ ಅವರ ಪುತ್ರನಾಗಿ ಜನಿಸಿದರು ಅವರ ಮನೆಯ ದೇವರು ಯಡಿಯೂರು ಸಿದ್ದಲಿಂಗೇಶ್ವರ ಅದ್ದರಿಂದ ಅವರಿಗೆ ಯಡಿಯೂರಪ್ಪ ಎಂದು ನಾಮಕಣ ಮಾಡಲಿಗಿತ್ತು ಪದವಿಯ ವರೆಗೆ ಮಂಡ್ಯ ಜಿಲ್ಲೆಯಲ್ಲಿ ವ್ಯಾಸಂಗ ಮಾಡಿದ ಅವರು ಗುಮಸ್ತರಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಕಾರಣಾಂತರಗಳಿಂದ ಆ ಕೆಸಲಕ್ಕೆ ರಾಜಿನಾಮೆ ನೀಡಿ ಶಿಕಾರಿಪುರ ತಾಲೂಕಿಗೆ ಆಗಮಿಸುತ್ತಾರೆ.

ಜೀವನದ ದಿಕ್ಕನೆ ಬದಲಾಯಿಸಿದ ಶಿಕಾರಿಪುರ:
ಸರ್ಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ ಶಿಕಾರಿಪುರ ತಾಲೂಕಿಗೆ ಆಗಮಿಸಿದ ಬಿ.ಎಸ್ ಯಡಿಯೂರಪ್ಪನವರು ಶಂಕರ ಅಕ್ಕಿ ರೈಸ್ ಮೀಲ್ ನಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ ನಂತರ ಆರ್ ಎಸ್ ಎಸ್ ನ ಕಾರ್ಯಕರ್ತರಾಗಿ ಸೇವೆ ಮಾಡುತ್ತಾ ಇದ್ದು ಉತ್ತಮ ಹೆಸರು ಮಾಡಿದ ಅವರು ವೀರಭದ್ರಶಾಸ್ತ್ರಿ ಅವರ ಪುತ್ರಿ ಮೈತ್ರಾದೇವಿ ಅವರೊಂದಿಗೆ ಮಾರ್ಚ್ 5 ರಂದು ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.
ಸಾರ್ವಜನಿಕ ಕ್ಷೇತ್ರದಲ್ಲಿ ಸ್ವಯಂ ಸೇವ ಸಂಘದಿಂದಲ್ಲೂ ಗುರುತಿಸಿಕೊಂಡಿದ ಬಿ.ಎಸ್ ವೈ 1975 ರಲ್ಲಿ ಮೊದಲ ಬಾರಿಗೆ ಪುರಸಭೆಗೆ ಆಯ್ಕೆಯಾಗುತ್ತಾರೆ ನಂತರ ರಾಜಕೀಯ ಜೀವನದ ಪತವೆ ಬದಲಾಗಿಹೊಯ್ತು 1977 ರಲ್ಲಿ ಮೊದಲ ಬಾರಿಗೆ ಪುರಸಭಾ ಅಧ್ಯಕ್ಷರಾಗುತ್ತಾರೆ ಶಿಕಾರಿಪುರ ತಾಲೂಕ್ ಜನ ಸಂಘದ ಅಧ್ಯಕ್ಷರಾಗಿ ತಾಲೂಕಿನಲ್ಲಿ ಪಕ್ಷ ಸಂಘಟನೆಯನ್ನು ಬಲವರ್ದನೆ ಮಾಡುತ್ತಾರೆ ಜಿಲ್ಲಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಾರೆ 1983 ರಲ್ಲಿ ಮೊದಲ ಭಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗುತ್ತಾರೆ ನಂತರ ಬಿಜೆಪಿಯ ರಾಜ್ಯಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ವಿಪಕ್ಷನಾಯಕರಾಗಿಗೂ ಕಾರ್ಯನಿರ್ವಹಿಸುತ್ತಾರೆ.
1999 ರ ವಿಧಾನಸಭೆ ಚುನಾವಣೆಯಲ್ಲಿ ಸೋಲು:
ಛಲದಂಕ ಮಲ್ಲ ಸೋಲಿಲ್ಲದ ಸರದಾರ ಓಡುವ ಕುದುರೆಯನ್ನು ಒಂದು ಬಾರಿ ಕಟ್ಟುಹಾಕುವ ಪ್ರಯತ್ನ ಶಿಕಾರಿಪುರದಲ್ಲಿ 1999 ರ ಚುನಾವಣೆ ಕಟ್ಟಿ ಹಾಕುವ ಪ್ರಯತ್ನದಲ್ಲಿ ವಿರೋಧ ಪಕ್ಷಗಳು ಯಶಸ್ವಿಯಾದರು ಕಾಂಗ್ರೇಸ್ ನ ಅಭ್ಯರ್ಥಿ ಮಹಾಲಿಂಗಪ್ಪನವರ ವಿರುದ್ದ ಬಿ.ಎಸ್ ವೈ ಸೋಲನ್ನು ಅನುಭವಿಸಬೇಕಾಯ್ತು ಅದರೆ ಆ ಸೋಲು ಬಿಎಸ್ ವೈ ಪಾಲಿಗೆ ದೊಡ್ಡ ಅನುಭವವನ್ನೆ ಕೊಟ್ಟಿತ್ತು ಯಡಿಯೂರಪ್ಪನವರ ರಾಜಕೀಯ ಜೀವನ ಮುಗಿಯಿತು ಎಂದು ಹೇಳುತ್ತಿದ್ದ ಸಮಯದಲ್ಲಿ ಮತ್ತೆ ಗಾಯಗೊಂಡ ಸಿಂಹದಂತೆ ಘರ್ಜಿಸಲಾರಂಭಿಸಿದರು ಅದೆ ಚುನಾವಣೆ ಅವರ ಜೀವನದಲ್ಲಿ ಕೊನೆಯ ಸೋಲಾಗಿ ಪರಿಣಮಿಸಿತು ಜೀವನದಲ್ಲಿ ಮತ್ತೆ ಯಾವ ಚುನಾವಣೆಯಲ್ಲೂ ಸೋಲನ್ನು ಕಣದೇ ಛಲದಂಕಮಲ್ಲ ನಾಗಿ ರಾಜಾಹುಲಿಯಾಗಿ ಇಲ್ಲಿಯ ವರೆಗೂ ತಮ್ಮ ಆಡಳಿತವನ್ನು ನಡೆಸಿಕೊಂಡು ಬಂದಿದ್ದಾರೆ.

ಹೋರಾಟಕ್ಕೆ ಇನ್ನೊಂದು ಹೆಸರು ಬಿ.ಎಸ್ ವೈ:
ಜೀತಮುಕ್ತರ ಪರಿಹಾರಕಕ್ಕಾಗಿ ಶಿಕಾರಿಪುರ ಬಿಡಿಎ ಕಚೇರಿ ಮುಂದೆ ಐದು ತಿಂಗಳ ಕಾಲ ನಿರಂತರ ಹಗಲು/ರಾತ್ರಿ ಧರಣಿ. ಸರ್ಕಾರ ಸ್ಪಂದಿಸುವ ಕಾರಣ ಶಿವಮೊಗ್ಗಕ್ಕೆ ಸಾವಿರಾರು ರೈತರೊಂದಿಗೆ ಪಾದ ಯಾತ್ರೆ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ. ಗುಂಡುರಾಯರ ಅಧಿಕಾರಿ ಅವಧಿಯಲ್ಲಿ ಕೂಲಿಗಾಗಿ ಕಾಲು ಯೋಜನೆ ದುರುಪಯೋಗದ ವಿರುದ್ಧ ತೀವ್ರ ಪ್ರತಿಭಟನೆ ಮಾಡಿದರು.
ಸಿ ಮತ್ತು ಡಿ ವರ್ಗದ ಜಮೀನನ್ನು ರೈತರಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲು ಮುಂದಾದಾಗ ರೈತರ ಪರ ಕಟ್ಟಿನಿಂತ ಧೀಮಂತ. ಜಾಥಾ, ಚಳುವಳಿ, ಧರಣಿ ಮೂಲಕ ಪ್ರತಿಭಟನೆ.
1988ರಲ್ಲಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ವಿರೋಧಿಸಿ ತೀವ್ರ ಏಕಾಂಗಿ ಹೋರಾಟ 1974ರಲ್ಲಿ ಗ್ರಾಮ ರಾಜ್ಯ ಉಳಿಸಿ ರೈತರನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ 1988ರಲ್ಲಿ ರೈತರ ಸಮಸ್ಯೆಗಳನ್ನು ತೆಗೆದುಕೊಂಡು ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ರೈತ ಜಾಥಾ. ಬಸವಕಲ್ಯಾಣದಿಂದ ರೈತ ಜಾಗೃತಿಯನ್ನು ಮೂಡಿಸಲು ಇನ್ನೊಂದು ಬಾರಿ ರೈತ ಜಾಥಾ. ಲಕ್ಷಾಂತರ ರೈತರ ಪಾಲ್ಗೊಳ್ಳುವಿಕೆಯಿಂದ ಐದು ಐತಿಹಾಸಿಕ ದಾಖಲೆ.
ಮೂರನೇ ಬಾರಿಗೆ ಬನವಾಸಿಯಿಂದ ಬೆಂಗಳೂರಿಗೆ ರೈತ ಜಾಥಾ. ಕೃಷ್ಣರಾಜಸಾಗರಕ್ಕೆ ಮತ್ತೊಂದು ಬಾರಿ ರೈತ ಜಾಥಾ. 2002 ರಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರನ್ನು ಸರ್ಕಾರ ದಕ್ಕಲೆಬ್ಬಿಸಲು ಮುಂದಾದಾಗ ಬಗರ್ ಹುಕುಂ ಸಾಗುವಾಲಿದಾರರ ಪರವಾಗಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ.ಬೆಂಗಳೂರಿನಲ್ಲಿ ನಿರಂತರ 9 ದಿನಗಳ ಕಾಲ ಹಗಲು/ರಾತ್ರಿ ಧರಣಿ. ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹ.2002 ಮತ್ತು 2004 ಆಗಷ್ಟ್ ನಲ್ಲಿ ಬೆಂಗಳೂರಿನಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ. ಸಿಇಟಿ ಗೊಂದಲ ನಿವಾರಣೆಗೆ ಆಗ್ರಹ, ನಕಲಿ ಛಾಪಾ ಕಾಗದ ಹಗರಣದ ತನಿಖೆಗೆ ಆಗ್ರಹ, ಹಗಲು/ರಾತ್ರಿ ಧರಣಿ.
ಯಡಿಯೂರಪ್ಪ ಯಾರು ತುಳಿಯದ ಹಾದಿ:
27/02/1943- ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನನ
1965- ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರವೇಶ.ಕರ್ಮಭೂಮಿ ಶಿಕಾರಿಪುರಕ್ಕೆ ಆಗಮನ
1967 – ಮೈತ್ರಾ ದೇವಿಯವರೊಂದಿಗೆ ವೈವಾಹಿಕ ಜೀವನಕ್ಕೆ ಪದಾರ್ಪಣೆ
1975- ರಾಜಕೀಯ ಪ್ರವೇಶ, ಶಿಕಾರಿಪುರ ಪುರಸಭಾ ಸದಸ್ಯರಾಗಿ ಆಯ್ಕೆ
1975- ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ. 45 ದಿನಗಳ ಜೈಲುವಾಸ.
1977 – ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ ಆಯ್ಕೆ
1980- ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಗಿ ಆಯ್ಕೆ
1981- ಜೀತ ವಿಮುಕ್ತಿ ಹೋರಾಟದ ನಾಯಕತ್ವ, ಪಾದಯಾತ್ರೆ
1983- ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಪ್ರವೇಶ
1985- ಬಿಜೆಪಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ರಾಗಿ ಆಯ್ಕೆ
1988- ಬಿಜೆಪಿಯ ರಾಜ್ಯ ಅಧ್ಯಕ್ಷ.
1992- ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆ
1994- ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆ
1999- ವಿಧಾನಸಭಾ ಚುನಾವಣೆಯಲ್ಲಿ ಪರಾಭವ
2000- ವಿಧಾನ ಪರಿಷತ್‌ಗೆ ಆಯ್ಕೆ
2003- ಬಗರ್‌ಹುಕುಂ ಸಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ
2004- 5ನೇ ಬಾರಿಗೆ ವಿಧಾನಸಭೆ ಪ್ರವೇಶ, ಪ್ರತಿಪಕ್ಷ ದ ನಾಯಕನಾಗಿ ಆಯ್ಕೆ
2006- ಉಪ ಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಹಣೆ
2007- ನವೆಂಬರ್- ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ. ಜೆಡಿಎಸ್ ಕೈಕೊಟ್ಟಿದ್ದರಿಂದ ರಾಜೀನಾಮೆ.
2008- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
2011ಧಿ- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
2012- ಬಿಜೆಪಿ ತೊರೆದು ಕೆಜೆಪಿ ಸ್ಥಾಪನೆ
2013- ಕೆಜೆಪಿಗೆ ಸಿಗದ ಜನತೆಯ ಮನ್ನಣೆ, ಮತ್ತೆ ಬಿಜೆಪಿ ಪ್ರವೇಶ
2014- ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ
2014- ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ
2016- ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಾರಿ ಆಯ್ಕೆ
2018- 3ನೇ ಬಾರಿಗೆ ಸಿಎಂ ಆಗಿ ಪ್ರಮಾಣ, ಬಹುಮತ ಸಾಬೀತುಪಡಿಸಲಾಗದೆ ಅಧಿಕಾರ ತ್ಯಾಗ
2019 ಜುಲೈ 26- ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ.
ರಾಜ್ಯದಲ್ಲಿ ಅತ್ಯಂತ ಬಲಶಾಲಿ ರಾಜರಾಣಿ ಧೀಮಂತ ನಾಯಕ ಬಡವರ,ದೀನ ದಲಿತರ ಉದ್ದರಕ್ಕಾಗಿ ಶ್ರಮಿಸಿದ ಅದೇಷ್ಟೋ ಹೋರಾಟಗಾರಲ್ಲಿ ಬಿ.ಎಸ್ ಯಡಿಯೂರಪ್ಪ ಕೂಡ ಒಬ್ಬರು ಬಿ.ಎಸ್ ವೈ ಯಾರು ತುಳಿಯಾದ ಹಾದಿ ಸ್ವಾಮಿ ವಿವೇಕಾನಂದರು ಹೇಳುವಂತೆ ಜೀವನ ಎಂದರೇ ಹೋರಾಟ ಅದೆ ರೀತಿ ಯಡಿಯೂರಪ್ಪ ಎಂದರೇ ಹೋರಾಟ ಅವರ ಜೀವನವೇ ಒಂದು ಮಹಾ ಹೋರಾಟಗಳಲ್ಲಿ ಕಳೆದಿದ್ದು ಇಂದು ರಾಜ್ಯದಲ್ಲಿ ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿರುವುದು ಶಿವಮೊಗ್ಗ ಜಿಲ್ಲೆಯ ಜನರ ಸೌಭಾಗ್ಯ ಅವರ ಚಿಂತನೆ ಯೋಜನೆಗಳು ಜನರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯಾಗಿ ಉಳಿದಿದೆ ಎಂದರು ತಪ್ಪಗಲಾರದ್ದು.
Story By: Raghu Shikari-7411515737