ಮಲಬದ್ಧತೆಗೆ ಔಷಧ ರಹಿತ ಶಾಶ್ವತ ಪರಿಹಾರ…!

ಮಲಬದ್ಧತೆಗೆ ಔಷಧ ರಹಿತ ಶಾಶ್ವತ ಪರಿಹಾರ…!

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಮಲಬದ್ಧತೆಗೆ ಔಷಧ ರಹಿತ ಶಾಶ್ವತ ಪರಿಹಾರ.

👉 ಮಲಬದ್ಧತೆಯ ಮೂಲ ಕಾರಣ ತಿಳಿದರೆ ಪರಿಹಾರ ಸುಲಭ.

📜 ಅಪಕ್ವಂ ಧಾರಯತಿ, ಪಕ್ವಂ ಸೃಜತಿ ಪಾರ್ಶ್ವತಃ||

🔅 ನಮ್ಮ ಕರುಳಿನ ಸಹಜ ಗುಣ:
• ಇನ್ನೂ ಪೂರ್ಣ ಜೀರ್ಣಗೊಂಡಿರದ ಆಹಾರವನ್ನು ಹಿಡಿದಿಟ್ಟುಕೊಳ್ಳುತ್ತದೆ.
• ಸಂಪೂರ್ಣ ಜೀರ್ಣಗೊಂಡ ಆಹಾರವನ್ನು ಹೊರಕ್ಕೆ ತಳ್ಳುತ್ತದೆ.

🔅 ಮಲ ನಿಷ್ಕ್ರಮಣ, ಪ್ರಕ್ರಿಯೆ:
ಆಹಾರ ಪೂರ್ಣ ಜೀರ್ಣಗೊಂಡರೆ ನಿಷ್ಕ್ರಮಣ, ಇಲ್ಲದಿದ್ದರೆ
ಮಲಬದ್ಧತೆ.

ಜೀವಕೋಶಗಳ ಹಂತದಲ್ಲಿಯೂ ಇದೇ ವ್ಯವಸ್ಥೆ ಇದೆ-
ನಮ್ಮ ಶರೀರದ ಯಾವುದೇ ಜೀವಕೋಶವೂ ತನ್ನೆದುರು ಬಂದ ಆಹಾರದ ಕಣವು ಪಾಚಕಾಗ್ನಿ, ಧಾತ್ವಾಗ್ನಿಗಳ ಸಂಪರ್ಕದಿಂದ ಸಂಪೂರ್ಣ ವಿಭಜನೆಗೊಂಡಿದ್ದರೆ ಸಮಾನವಾಯು ಪ್ರಭಾವದಿಂದ ಸಾರವನ್ನು ತಕ್ಷಣ ಹೀರಿಕೊಂಡು ಮಲವನ್ನು ಬಿಟ್ಟುಬಿಡುತ್ತದೆ.
ಹೀಗೆ ತ್ಯಾಜ್ಯವಾಗಿ ಬಂದ ಮಲವನ್ನು ಪ್ರಾಣವಾಯುವಿನ ಸಂಜ್ಞೆಯಿಂದ ಮತ್ತು ಉದಾನ ವಾತ ದ ಬಲದಿಂದ ಅಪಾನವಾಯುವು ಹೊರ ತಳ್ಳುತ್ತದೆ, ಒಂದೇ ಒಂದು ಕ್ಷಣವೂ ಒಳಗೆ ಇಟ್ಟುಕೊಳ್ಳುವುದಿಲ್ಲ.

🔅 ಈ ಪ್ರಕ್ರಿಯೆ ಹೇಗೆ ನಡೆದಿರುತ್ತದೆ?:
ನಮ್ಮ ದೊಡ್ಡಕರುಳು, ಆಹಾರದೊಳಗಿನ ನೀರಿನ ಅಂಶವನ್ನೂ ಮತ್ತು ಕಟು, ಕಹಿ, ಒಗರಿನ ರಸವನ್ನು ಹೀರಿಕೊಂಡು ಅತ್ಯಂತ ಉಪಯುಕ್ತ ಪೋಷಕವಾಯು ವನ್ನು ಉತ್ಪತ್ತಿ ಮಾಡುತ್ತದೆ. ಈ ವಾಯುವೇ ವಿಭಿನ್ನ ಹೆಸರಿನಿಂದ ಕರೆಯಲ್ಪಟ್ಟು ಶರೀರದಲ್ಲಿ ಆಹಾರ, ನೀರು, ಗಾಳಿ ಮತ್ತು ಮಲ ಸಂಚರಿಸುವ, ಹೀರಿಕೊಳ್ಳು ಮತ್ತು ಆಹಾರವು ಯಾವ ಯಾವಸ್ಥಾನದಲ್ಲಿ ನೆಲೆಗೊಳ್ಳಬೇಕೆಂದು ನಿರ್ಧರಿಸುವ, ಹೊರಹಾಕುವ ಕಾರ್ಯ ನಿರ್ವಹಿಸುತ್ತದೆ.

ಒಟ್ಟಾರೆ, ಅಗ್ನಿ(ಜೀರ್ಣಶಕ್ತಿ)ಯನ್ನೂ, ವಾತವನ್ನೂ ಆರೋಗ್ಯದಿಂದ ಇಟ್ಟುಕೊಂಡರೆ ಹೊರಗಿನ ಯಾವ ನೆರವೂ ಇಲ್ಲದೆ ಸಹಜವಾಗಿ ಮಲಪ್ರವೃತ್ತಿಯಾಗುತ್ತದೆ.

🔅 ಮಲಬದ್ಧತೆಯ ಕಾರಣ?
• ಅಗ್ನಿ ಅಥವಾ ಜೀರ್ಣಶಕ್ತಿಗಿಂತ ಅಧಿಕ ಆಹಾರ ಸೇವನೆ.
• ಜೀರ್ಣಕ್ಕೆ ಕಠಿಣವಾಗುವ ಪದಾರ್ಥ ಸೇವನೆ.
• ವ್ಯಾಯಾಮದ ಕೊರತೆ.
• ವಿಶೇಷವಾಗಿ ರಾತ್ರಿ ಹೊಟ್ಟೆಬಿರಿಯುವ ಹಾಗೆ ತಿನ್ನುವುದು.
• ಒಂದೆಡೆ ರುಚಿಗಾಗಿ ಒಣಪದಾರ್ಥ ಸೇವಿಸುವುದು-ಇನ್ನೊಂದೆಡೆ ಲೀಟರ್ ಗಟ್ಟಲೆ ನೀರು ಸೇವಿಸುವುದು.
• ಆಹಾರ ಸೇವನೆಯ ತಕ್ಷಣ, ಶರೀರ ಬೆವರುವಷ್ಟು ಕೆಲಸ ವ್ಯಾಯಾಮ ಮಾಡುವುದು.

🔅 ಶಾಶ್ವತ ಪರಿಹಾರ ಏನು?
• ಶಕ್ತಿ ವ್ಯಯಿಸಿದಷ್ಟೇ ತುಂಬುವುದು ಹೇಗೋ ಹಾಗೆ ವ್ಯಾಯಾಮ ಮಾಡಿದಷ್ಟೇ ಆಹಾರ ಸೇವಿಸಿ.
• ಆಹಾರ ತಯಾರಿಕೆಯಲ್ಲೇ ತಕ್ಕಷ್ಟು ಚನ್ನಾಗಿ ನೀರು ಇರಲಿ.‌ ಮೇಲ್ಗಡೆಯಿಂದ ಹೆಚ್ಚು ಜಲಸೇವನೆಯಿಂದ ಜೀರ್ಣಶಕ್ತಿ ಕುಂದುತ್ತದೆ.
• ಅಧಿಕ ಶಕ್ತಿಯುಳ್ಳ ಮತ್ತು ಜೀರ್ಣಕ್ಕೆ ಕಠಿಣವಾಗುವ ಆಹಾರ ಸೇವನೆ ಬೇಡ.
• ಊಟದ ತಕ್ಷಣ ಸ್ನಾನ, ಮೈಬೆವರುವಂತೆ ವ್ಯಾಯಾಮ ಮಾಡಲೇಬಾರದು, ಇದರಿಂದ ಅಗ್ನಿಯ ಶಕ್ತಿ ಹೊರಹೋಗಿ ಮಲ ಸಂಚಯವಾಗುತ್ತದೆ.
• ಮಲಬದ್ಧತೆ ನಿವಾರಣೆಗೆ ತಿಂದ ಅನ್ನವನ್ನೇ ಹೊರತಳ್ಳುವ ಆಹಾರ ಅಥವಾ ಔಷಧಗಳನ್ನು ನಿತ್ಯವೂ ಸೇವಿಸಬಾರಸು.
• ಆಹಾರದ ನಂತರ ಬಾಳೆಹಣ್ಣನ್ನು ತಿನ್ನುವುದು ಅನಾರೋಗ್ಯಕರ ಮಲ ಪ್ರವೃತ್ತಿಗೆ ಕಾರಣ.
• ರಾತ್ರಿ ಆಹಾರ ಬೇಗ ಮತ್ತು ಅರ್ಧ ಹೊಟ್ಟೆ ಮಾತ್ರ ಸೇವಿಸಿ.

🔅 ಸರಳ ಪರಿಹಾರ:
• ರಾತ್ರಿ ಆಹಾರ 6-7 ಗಂಟೆಯ ಒಳಗೆ ಸೇವಿಸಿ.
• ರಾತ್ರಿ ಅರ್ಧ ಹೊಟ್ಟೆ ತುಂಬುವಷ್ಟು ಮಾತ್ರ ಆಹಾರ ಸೇವಿಸಿ.
• ಬೇಗ ನಿದ್ದೆ ಮಾಡಿ.

ಮಲಬದ್ಧತೆ ನಿವಾರಣೆಗೆ, ಈಗ ಮಾಡುತ್ತಿರುವ ಉಪಾಯ ಅಪಾಯವೂ ಹೌದು:

ತಿಂದ ಅನ್ನವನ್ನೇ ಹೊರತಳ್ಳುವ ಆಹಾರ ಅಥವಾ ಔಷಧಗಳನ್ನು ನಿತ್ಯವೂ ಸೇವಿಸಬಾರದು.
ಹೆಚ್ಚು ನಾರಿನ ಅಂಶ ಇರುವ ತರಕಾರಿಗಳು, ಹಿಟ್ಟುಗಳೂ ಹಾಗೆಯೇ ಬಾಳೆಹಣ್ಣು ಅಪಾಯಕರ. ಇವು ಆಹಾರವನ್ನು ಯಾಂತ್ರಿಕವಾಗಿ, ಕೃತ್ರಿಮ ವಿಧಾನದಿಂದ ಅದರ ಜೀರ್ಣಾಜೀರ್ಣತೆಯನ್ನು ಅಳತೆಮಾಡದೇ ಆಹಾರವನ್ನು ಹೊರಕ್ಕೆ ತಳ್ಳುತ್ತವೆ. ಏಕೆಂದರೆ ಜೀರ್ಣಕ್ಕೆ ಮೊದಲೇ ಪೋಷಕಾಂಶಗಳ ಸಮೇತ ಹೊರ ತಳ್ಳುವುದರಿಂದ ಕ್ರಮೇಣ ಶರೀರ ದುರ್ಬಲಗೊಳ್ಳುತ್ತದೆ ಮತ್ತು ನಾನಾ ರೋಗಗಳಿಗೆ ಹಾದಿಯಾಗುತ್ತದೆ.

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ
ಡಾ.ಮಲ್ಲಿಕಾರ್ಜುನ

ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!