ಶಿಕಾರಿಪುರ :ವ್ಯಾಲೆಂಟೈನ್ ಡೇ ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಿರಿ – ಹಿಂದೂ ಜನ ಜಾಗೃತಿ ಸಮಿತಿ…!

ಶಿಕಾರಿಪುರ :ವ್ಯಾಲೆಂಟೈನ್ ಡೇ ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಿರಿ – ಹಿಂದೂ ಜನ ಜಾಗೃತಿ ಸಮಿತಿ…!

ಶಿಕಾರಿಪುರ :ಕಳೆದ ಅನೇಕ ವರ್ಷಗಳಿಂದ ಭಾರತದಂತಹ ಸಾಂಸ್ಕೃತಿಕ ದೇಶದಲ್ಲಿ ಫೆ.14 ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿ ಹೆಚ್ಚಾಗಿದೆ ದೇಶದಲ್ಲಿ ಈ ಮೂಲಕ ವ್ಯಾವಹಾರಿಕ ಲಾಭ ಗಳಿಸುವ ಉದ್ದೇಶದಿಂದ ಪಾಶ್ಚಾತ್ಯ ಅನುಕರಣೆ ಯುವಕ-ಯುವತಿಯರ ಅನೈತಿಕತೆ ಮತ್ತು ಸ್ವೇಚ್ಛಾಚಾರಕ್ಕೆ ಕಾರಣವಾಗುತ್ತಿದ್ದು ಹೀಗಾಗಿ ವ್ಯಾಲೆಂಟೈನ್ ಡೇ ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯುವಂತೆ ಒತ್ತಾಯಿಸಿ ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಶಿಕಾರಿಪುರದ ತಹಶೀಲ್ದಾರ್ ಕಚೇರಿಯಲ್ಲಿ ಮತ್ತು ಡಿ.ವೈ. ಎಸ್. ಪಿ ಯವರಿಗೆ ಹಿಂದು ಜನ ಜಾಗೃತಿ ಸಮಿತಿ ಮನವಿ ಸಲ್ಲಿಸಿದರು.

ಪಾಶ್ಚಾತ್ಯರ ವ್ಯಾಲೆಂಟೈನ್ಸ್ ಡೇ ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವನ್ನಾಗಿ ಆಚರಿಸುತ್ತಿರುವುದು ಖೇದಕರ ಸಂಗತಿಯಾಗಿದೆ ಈ ದಿನ ಪಾರ್ಟಿಯ ಹೆಸರಿನಲ್ಲಿ ಯುವಕ-ಯುವತಿಯರು ಮದ್ಯಪಾನ ಧೂಮಪಾನ ಮಾಡುವುದು ಡ್ರಗ್ ಮಾಫಿಯಾ ದಂತಹ ಕೃತ್ಯಗಳಿಗೆ ಬಲಿಯಾಗುವುದು ಮುಂತಾದ ಅನುಚಿತ ಘಟನೆಗಳ ಪ್ರಮಾಣವು ಹೆಚ್ಚಾಗುತ್ತಿದೆ ಅಷ್ಟೇ ಅಲ್ಲದೆ ಈ ದಿನ ಸಮೀಕ್ಷೆಯ ಪ್ರಕಾರ ಗರ್ಭನಿರೋಧಕಗಳ ಮಾರಾಟ ಅಧಿಕವಾಗುತ್ತಿರುವುದು ಎಂದರೆ ಅನೈತಿಕತೆ ಹೆಚ್ಚಾಗುತ್ತಿರುವ ದ್ಯೋತಕವಾಗಿದೆ.

ವ್ಯಾಲೆಂಟೈನ್ಸ್ ಡೇ ಕಾರಣದಿಂದ ಶಾಲಾ ಕಾಲೇಜುಗಳಲ್ಲಿನ ವಾತಾವರಣವು ಹಾಳಾಗುವುದರ ಜೊತೆಗೆ ಭೋಗವಾದಿ ವೃತ್ತಿಯು ಹೆಚ್ಚಾಗುತ್ತಿದೆ.

ನಮ್ಮ ದೇಶದಲ್ಲಿ ಮಾತಾ-ಪಿತಾ ಗುರು ಮತ್ತು ಮಾತೃಭೂಮಿಯನ್ನು ಗೌರವಿಸಿ ಅವರ ಅವರನ್ನು ನಿಸ್ವಾರ್ಥವಾಗಿ ಪ್ರೇಮಿ ಸಬೇಕೆಂದು ಶಿಕ್ಷಣ ಇರುವಾಗ 14 ಫೆಬ್ರವರಿಯಂದು ವ್ಯಾಲೆಂಟೈನ್ ಡೇ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವುದು ದುಃಖದ ಸಂಗತಿಯಾಗಿದೆ.

ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿಯೂ ಈ ದಿನಾಚರಣೆಯ ರೂಢಿಯನ್ನು ತಡೆಗಟ್ಟುವ ಪ್ರಯತ್ನಗಳು ಆರಂಭವಾಗಿದ್ದು ರೋಮನ್ ಕ್ಯಾಥೋಲಿಕ್ ಕ್ಯಾಲೆಂಡರ್ ನಿಂದ ವ್ಯಾಲೆಂಟೈನ್ ಡೇ ಹೆಸರನ್ನು ತೆಗೆದು ಹಾಕಲಾಗಿದೆ ಛತ್ತೀಸ್ ಗಡ ಸರ್ಕಾರ ವ್ಯಾಲೆಂಟೈನ್ಸ್ ಡೇಗೆ ನಿರ್ಬಂಧ ಹೇರಿ ಮಾತೃ-ಪಿತೃ ಪೂಜನ ದಿನವನ್ನು ಆರಂಭಿಸಿದೆ.

ಹಿಂದೂ ಜನಜಾಗೃತಿ ಸಮಿತಿಯು ಅನೇಕ ವರ್ಷಗಳಿಂದ ಜನಜಾಗೃತಿ ಮಾಡಿ ವ್ಯಾಲೆಂಟೈನ್ ನಿಮಿತ್ತ ನಡೆಯುವ ಅಯೋಗ್ಯ ಕೃತಿಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ ಪೊಲೀಸ್ ಇಲಾಖೆಗೆ ಮನವಿ ನೀಡುವುದು ಆನ್ಲೈನ್ ಮೂಲಕ ಜಾಗೃತಿ ಮೂಡಿಸುವುದು ಇತ್ಯಾದಿ ಮಾಧ್ಯಮಗಳಿಂದ ಜನಜಾಗೃತಿ ಮೂಡಿಸಿ ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ರಕ್ಷಣೆ ಮಾಡಲು ಪ್ರಯತ್ನಿಸುತ್ತಿದೆ.

ಸರ್ಕಾರವು ವ್ಯಾಲೆಂಟೈನ್ ಡೇ ಯಂದು ವಿಶೇಷ ಪೊಲೀಸ್ ದಳವನ್ನು ರಚಿಸಿ ಶಾಲಾ-ಕಾಲೇಜುಗಳಲ್ಲಿ ಅಯೋಗ್ಯ ಕೃತ್ಯಗಳನ್ನು ಮಾಡುವವರ ವಿರುದ್ಧ ಕ್ರಮ ಜರುಗಿಸುವುದು ಪ್ರೇಮಿಗಳ ದಿನದಂದು ನಡೆಯುವ ತಪ್ಪು ಆಚರಣೆಗಳನ್ನು ಗಮನದಲ್ಲಿರಿಸಿ ಫಾರ್ಕ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವಂತಹ ಅಯೋಗ್ಯ ಕೃತಿಗಳನ್ನು ತಡೆಯಬೇಕಾಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಪರಶುರಾಮ್, ಪುಷ್ಪ, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಪ್ರಕಾಶ್ ಎಂ. ಎಸ್. ಗಿರೀಶ್ ಘೋರ್ಪಡೆ, ಪ್ರಕಾಶ್ ನಳ್ಳಿನಕೊಪ್ಪ, ಶಿವಮೂರ್ತಿ, ಪ್ರಕಾಶ್ ದಾಮೋದರ್, ಪುರಸಭಾ ಸದಸ್ಯರಾದ ವಿಶ್ವನಾಥ್, ಆನಂದ್, ಸವಿತ ಸಮಾಜದ ವಿ. ರಘು, ಶ್ರೀನಿವಾಸ್ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!