ಆರೋಗ್ಯದ ವಿಷಯದಲ್ಲಿ ಅತ್ಯಂತ ಪ್ರಮುಖ ವಿಷಯಗಳ ಗುಚ್ಚಕ್ಕೆ ಮುನ್ನುಡಿ ಇಡೋಣ…!

ಆರೋಗ್ಯದ ವಿಷಯದಲ್ಲಿ ಅತ್ಯಂತ ಪ್ರಮುಖ ವಿಷಯಗಳ ಗುಚ್ಚಕ್ಕೆ ಮುನ್ನುಡಿ ಇಡೋಣ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✍️: ಇಂದಿನ ವಿಷಯ:
ಇಂದಿನಿಂದ
ಆರೋಗ್ಯದ ವಿಷಯದಲ್ಲಿ ಅತ್ಯಂತ ಪ್ರಮುಖ ವಿಷಯಗಳ ಗುಚ್ಚಕ್ಕೆ ಮುನ್ನುಡಿ ಇಡೋಣ.

ಸಧ್ಯ ನಾವು ತಿನ್ನುವ ಬಹುತೇಕ ಆಹಾರವನ್ನು “ವಿಷ” ದಂತೆ ಪರಿವರ್ತಿಸಿ ತಿನ್ನುತ್ತಿದ್ದೇವೆ! ಅಚ್ಚರಿಯೇ?! 😳

ಅತ್ಯಂತ ಶುದ್ಧ ಸಾತ್ವಿಕ ವ್ಯಕ್ತಿಗೂ ಲಿವರ್ ಫೇಲ್ಯೂರ್? ಕ್ಯಾನ್ಸರ್? ರೋಗವೇ?!!! ಎಂದು ಅಚ್ಚರಿ ಪಡುತ್ತಿರುವ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಇಂತಹ ಕಾಯಿಲೆಗಳಿಗೆ ಅತ್ಯಂತ ಪ್ರಮುಖ ಕಾರಣವೇ “ಆಹಾರವಿಷ”.

ಅನ್ನ ರಕ್ಷಣೆ ಹೇಗೆ ಮಾಡಬೇಕು ಮತ್ತು ಯಾವ ರೀತಿಯಾಗಿ ಸೇವಿಸಿದರೆ “ವಿಷದಂತೆ”, “ಗರವಿಷದಂತೆ” ರೋಗ ಅಥವಾ ಮರಣ ತರುತ್ತದೆ ಎಂದು ಹೇಳವ ಚರಕಾದಿ ಎಲ್ಲಾ, ಆಚಾರ್ಯರು ಅನ್ನ ರಕ್ಷಣೆ ಗೆ ಗ್ರಂಥದಲ್ಲಿ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ!! ಅವರ ಕಳಕಳಿಗೆ ನಾವೆಲ್ಲಾ ಋಣಿಗಳಾಗಿರಬೇಕು.🙏

▪️ಸೂಚನೆ: ನಾವು ತಿನ್ನುವ ಯಾವುದೇ ಆಹಾರ ಪದಾರ್ಥವನ್ನು ಅನ್ನ ಎಂದೇ ಕರೆಯಲಾಗುತ್ತದೆ, ಈ ಶಬ್ದವನ್ನು ಅಕ್ಕಿಯಿಂದ ತಯಾರಿಸಿದ ಖಾದ್ಯ ಎಂದು ಗ್ರಹಿಸಬಾರದು.

✍ ವಿರುದ್ಧಂ ಅಪಿ ಚ ಆಹಾರಂ ವಿದ್ಯಾತ್ ವಿಷ, ಗರೋಪಮಮ್|……..||

  • ಅಷ್ಟಾಂಗ ಹೃದಯ ಸೂತ್ರಸ್ಥಾನ,‌ ಅನ್ನರಕ್ಷ ಅಧ್ಯಾಯ-7/29

ಆಹಾರವನ್ನು ಅತ್ಯಂತ ಆಳದಲ್ಲಿ ಕೆಡಿಸಿದಾಗ ಅದು ವಿಷ ಅಥವಾ ಗರವಿಷವಾಗಿ ಕೆಲಸಮಾಡುವುದು.

ಇಂದು, ನಾಲಿಗೆ ರುಚಿ ಮತ್ತು ವಿಜ್ಞಾನದ ಹೆಸರಿನ ಆಹಾರದ ಅನಾಲಿಸಿಸ್!(ರಾಸಾಯನಿಕ ಆಧಾರದಲ್ಲಿ ಆಹಾರವನ್ನು ಅಳೆವ ರೀತಿ)ಗಳಿಂದ ನಾವು ತಿನ್ನುವ ಅನ್ನವನ್ನು ವಿಷವನ್ನಾಗಿಸಿಕೊಂಡಿದ್ದೇವೆ.

*ಎಷ್ಟೇ ನಿಖರವಾಗಿ ಶರೀರದ ಎಲ್ಲಾ ರಾಸಾಯನಿಕಗಳನ್ನು ಬಳಸಿದರೂ ಒಂದು ಜೀವಿಯನ್ನು ಕೃತಕವಾಗಿ ಸೃಷ್ಟಿಸಲು ಅಸಾಧ್ಯ. ಹಾಗೆಯೇ , ಆಹಾರವನ್ನು ತಯಾರಿಸುವುದು ಮತ್ತು ಅದನ್ನು ರಾಸಾಯನಿಕಗಳ ಆಧಾರದಿಂದ ಅಳೆಯುವುದು ಅಸಾಧ್ಯ!

👉 ಆಹಾರ ಕೆಲ ರಾಸಾಯನಿಕಗಳ ಮಿಶ್ರಣ ಎನ್ನುವ ಇಂದಿನ ವಿಜ್ಞಾನ ನಿಖರವಾಗಿದೆ ಎನ್ನುವುದಾದರೆ- ಇಷ್ಟೆಲ್ಲಾ ಯಕೃತ್, ಪ್ಯಾಂಕ್ರಿಯಾಸ್, ರಕ್ತ ಮತ್ತು ಪರಿಚಲನೆಯ ರೋಗಗಳೇಕೆ ಇವೆ?
ಮತ್ತು ಈ ಯಾವ ಮೆಟಬಾಲಿಕ್ ರೋಗಗಳಿಗೂ ಕಾರಣ ಗೊತ್ತಿಲ್ಲ ಎಂದು ಹೇಳುವುದೇಕೆ?
ಇಲ್ಲಿ ವಿರೋಧಾಭಾಸ ಮತ್ತು ಅತ್ಯಂತ ಅಂಧ ನಡೆ ಅಲ್ಲವೇ ಇದು⁉️

◆ ಆಹಾರವನ್ನು ಸಂಗ್ರಹಿಸುವ ವಿಧಾನ,
◆ ಇಡುವ ಪಾತ್ರೆ,
◆ ಶೇಖರಣೆಯ ಕಾಲಾವಧಿ, ಸ್ಥಳ,
◆ ಮಿಶ್ರಮಾಡುವ ಪದಾರ್ಥ,
◆ ಸಂಸ್ಕರಣೆ ಮತ್ತು ತಿನ್ನುವ ಸಮಯ,
◆ ಕಾಲಾವಧಿ,
◆ ತಿನ್ನುವವನ ಜೀರ್ಣಶಕ್ತಿ…… ಆದಿಯಾಗಿ ಎಲ್ಲಿಯೂ ಆಹಾರವು “ವಿಷ” ಅಥವಾ “ಗರವಿಷ”ದ ಭಾವ ಹೊಂದಬಾರದು.
ಹೀಗಾದರೆ ಮಾತ್ರ ಅದು ಶರೀರವನ್ನು ಆರೋಗ್ಯದಿಂದ ಪೋಷಣೆ ಮಾಡುತ್ತದೆ ಇಲ್ಲದಿದ್ದರೆ ರೋಗವನ್ನು ಪೋಷಣೆ ಮಾಡುತ್ತದೆ. ಇದಕ್ಕಾಗಿ “ವಿರುದ್ಧ ಅನ್ನ” ಎಂಬ ಸಿದ್ಧಾಂತ ಆಯುರ್ವೇದದಲ್ಲಿ ಅತ್ಯಂತ ಪ್ರಮುಖ ಅಂಶವಾಗಿ ರೂಪುಗೊಂಡಿದೆ.

ಎಷ್ಟೆಂದರೂ
🔆 ಆಯುರ್ವೇದ ಆರೋಗ್ಯ ರಕ್ಷಣೆಗೆ ಪ್ರಾಮುಖ್ಯತೆ ಕೊಟ್ಟ ವಿಜ್ಞಾನವಾಗಿದೆ. ಇಲ್ಲಿ ಚಿಕಿತ್ಸೆಗೆ ಎರಡನೇ ಸ್ಥಾನ

ನಾಳೆಯಿಂದ,
ನಾವು ಸೇವಿಸುವ ಆಹಾರ,
ಸಂಗ್ರಹಿಸುವ ವಿಧಾನ,
ತಯಾರಿಕಾ ವಿಧಾನ,
ಸಿದ್ಧ ಆಹಾರದ ಪರೀಕ್ಷೆ,
ತಿನ್ನುವ ರೀತಿ
ಇವುಗಳಲ್ಲಿ ಯಾವ ಯಾವ ಹಂತಗಳಲ್ಲಿ ಆಹಾರವೇ ವಿಷವಾಗಿ ಪರಿವರ್ತನೆ ಹೊಂದುತ್ತಿದೆ ಎಂದು ನೋಡೋಣ, ಮತ್ತು
ಅನ್ನರಕ್ಷಣೆಯಿಂದ ನಮ್ಮ ಆರೋಗ್ಯವನ್ನೂ ರಕ್ಷಿಸಿಕೊಳ್ಳೋಣ.

ನಿಮ್ಮ ಸಂಪರ್ಕಕ್ಕೆ:
📞 8792290274
9148702645

ವಿಶ್ವಹೃದಯಾಶೀರ್ವಾದವಂ ಬಯಸಿ

🥗ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍱🍹ಸ್ವಾಸ್ಥ್ಯ ಸರ್ವರದ್ದೂ ಆಗಲಿ🍒

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!