ಮೈಗ್ರೇನ್ ತಲೆನೋವು ಮತ್ತು ಶಾಶ್ವತ ಪರಿಹಾರ…!

ಮೈಗ್ರೇನ್ ತಲೆನೋವು ಮತ್ತು ಶಾಶ್ವತ ಪರಿಹಾರ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಮೈಗ್ರೇನ್ ತಲೆನೋವು ಮತ್ತು ಶಾಶ್ವತ ಪರಿಹಾರ

ಅರೆ ತಲೆಶೂಲೆ ಎಂದು ಕರೆಸಿಕೊಳ್ಳುವ ಮೈಗ್ರೇನ್‌ ತಲೆನೋವು ಕುಟುಂಬದವರೆಲ್ಲರ ಆರೋಗ್ಯ ಕಾಪಾಡುವ ಗೃಹಿಣಿಯರನ್ನೇ ಹೆಚ್ಚು ಕಾಡುತ್ತದೆ. ಇದು ಬರುವುದು ಒಬ್ಬರಿಗೆ ಆದರೆ ಮಾನಸಿಕ ನೋವು ಕುಟುಂಬದ ಸರ್ವ ಸದಸ್ಯರನ್ನೂ ಬಾಧಿಸುತ್ತದೆ.

ದುರಾದೃಷ್ಟಕ್ಕೆ ಇದಕ್ಕೆ Brain MRI scan ಮಾಡಿಸುವ ವ್ಯಾವಹಾರಿಕ ಪದ್ಧತಿ ರೂಢಿಗೆ ಬಂದಿದೆ. ಲಕ್ಷದಲ್ಲೊಬ್ಬರಿಗೆ ಮೆದುಳಿನ ಸಮಸ್ಯೆ ಇರಬಹುದು ಆದರೆ ಬಹುತೇಕ MRI ಗಳು ಅನಗತ್ಯ ಎಂದೆನಿಸುತ್ತದೆ.
ಕ್ಲಿನಿಕಲ್ ಪರೀಕ್ಷೆಯಲ್ಲಿಯೇ ಇದು ಏನೆಂದು ತಿಳಿದುಹೋಗುತ್ತದೆ.

ಇರಲಿ,
ಇದನ್ನು ಮೆದುಳಿನ ರಕ್ತನಾಳಗಳ ಸಮಸ್ಯೆ ಎಂದು ಹೇಳುವ ಆಧುನಿಕ ವಿಜ್ಞಾನ‌ ಅದನ್ನು ತಾತ್ಕಾಲಿಕವಾಗಿ ಸರಿಪಡಿಸುವತ್ತ ಮಾತ್ರ ಗಮನಹರಿಸಿದೆ.
ಆದರೆ, ಈ ಮೈಗ್ರೇನ್ ಕಾರಣ ಇರುವುದು ಉದರ-ಕರುಳುಗಳಲ್ಲಿ!!
“ನೋವು ತಲೆಯಲ್ಲಿ ಕಾರಣ ಉದರದಲ್ಲಿ”

ಬಹುತೇಕರಿಗೆ ಹುಳಿ ಪಿತ್ತ ವಾಂತಿಯಾದ ತಕ್ಷಣ ತಲೆನೋವು ನಿವಾರಣೆಯಾಗುತ್ತದೆ. ಅಂದರೆ ಉದರದಲ್ಲಿ ಉಂಟಾಗುವ ಹುಳಿ ತಲೆನೋವಿಗೆ ಕಾರಣವಾಗುತ್ತದೆ ಎಂದರ್ಥವಲ್ಲವೇ?

ಆಹಾರ ವಿದಗ್ಧವಾಗಿ ಅಂದರೆ ಅರ್ಧ ಬೆಂದು ಹುಳಿಭಾವ ಪಡೆದು, ರಕ್ತನಾಳಗಳಿಂದ ಸ್ವಲ್ಪ ಹೀರಿಕೊಂಡಿರುತ್ತದೆ. ಅದು ಹುಳಿ ಇರುವ ಕಾರಣ ರಕ್ತ ತ್ಯಾಗಮಾಡಲು ನಿರ್ಧರಿಸಿ ತನ್ನ ನಾಳಗಳನ್ನು ವಿಸ್ಫಾರಗೊಳಿಸಿಕೊಳ್ಳುತ್ತದೆ. ಶರೀರ ಹೀರಿಕೊಂಡರೆ ಮುಂದೆ ಬಹುದೊಡ್ಡ ತೊಂದರೆ ಬರುತ್ತದೆ ಎಂದು ಯಕೃತ್ ತ್ಯಾಗಮಾಡುತ್ತದೆ, ಈ ಹಂತದಲ್ಲಿ ಬರುವ ರಕ್ತನಾಳಗಳ ವಿಸ್ಫಾರತೆಯಿಂದ ಶಿರಶೂಲ ಪ್ರಾರಂಭವಾಗುತ್ತದೆ.

ಕೊನೆಗೆ ಅತಿಯಾದ ಹೋರಾಟ ನಡೆದು, ಕರುಳಿನಲ್ಲಿ ಹುಳಿಯಾಗಿ ಉಳಿದ ಆಹಾರ ರಸ ಅಥವಾ ಅರ್ಧಬೆಂದ ಆಹಾರ ವಾಂತಿಯಿಂದ ಹೊರಬರುತ್ತದೆ.

ರಕ್ತನಾಳದಲ್ಲಿ ಇದ್ದ ಅಲ್ಪ ಹುಳಿಯೂ ಹೊರಬಂದರೆ ವ್ಯಕ್ತಿಗೆ ನಿರಾಳವಾಗುತ್ತದೆ.
ಕೇವಲ ಜಠರದಿಂದ ಮಾತ್ರ ಹೊರಬಂದರೆ ಅಲ್ಪನಿರಾಳತೆ ದೊರೆಯುತ್ತದೆ.
ಅದೂ ಆಗದೇ ಕೇವಲ ತಲೆನೋವಿನ ಮಾತ್ರೆಯಿಂದ💊 ಕಡಿಮೆಯಾದರೆ ಕನಿಷ್ಠ ಒಂದೆರಡು ದಿನವಾದರೂ ಆಯಾಸ ಉಳಿದಿರುತ್ತದೆ.

🛎ವಿಶೇಷ ಗಮನಕ್ಕೆ:
ತಾತ್ಕಾಲಿಕ ಉಪಶಮನ ಮಾಡುತ್ತಾ ಹೋದರೆ, ರಕ್ತದಲ್ಲಿ ಹುಳಿಯ ಅಂಶ ಉಳಿದು ದೇಹ ದುರ್ಬಲವಾಗುತ್ತದೆ, ರಕ್ತಪಿತ್ತ ಎಂಬ ತೊಂದರೆ ಬರುತ್ತದೆ, ಮುಂದೆ ಅದೇ ರಕ್ತನಾಳಗಳ ವಿಕಾರಗಳನ್ನು ತಂದೊಡ್ಡುತ್ತದೆ. ಅಂದರೆ ಬಿ.ಪಿ, ಹೃದಯದ ತೊಂದರೆ, ಪಾರ್ಶ್ವವಾಯು, ಲಿಗಮೆಂಟ್ ತೊಂದರೆ ಬರುವ ಸಾಧ್ಯತೆ ಹೆಚ್ಚು.

🖋 ಉಪಚಾರ ಏನು?
• ತಿಂದ ಆಹಾರ ಹುಳಿಯಾಗದಂತೆ ನೋಡಿಕೊಳ್ಳಿ.
• ಅತಿಯಾದ ಕಾಫೀ, ಟೀ ಗಳಿಂದ ಶಕ್ತಿ ಕ್ಷೀಣವಾಗಿ ಮೈಗ್ರೇನ್‌ ಬರುತ್ತದೆ.
• ಚಪಾತಿ ಮುಂತಾದ ಗೋಧಿ, ಉದ್ದು, ಮೈದಾ ಪದಾರ್ಥಗಳು ಹುಳಿಯನ್ನು ಬಿಡುತ್ತವೆ. ಈ ಹಿಟ್ಟುಗಳನ್ನು ಕಲಸಿ ಇಟ್ಟರೆ ಒಂದೆರಡು ತಾಸುಗಳಲ್ಲಿ ಅದು ಹುಳಿಬಿಡುತ್ತದೆ. ಅಂತವುಗಳನ್ನು ಸೇವಿಸಿದರೆ ಅವು ಉದರದೊಳಗೆ ಹೋದ ನಂತರ ಹುಳಿಯನ್ನು ಬಿಡುತ್ತವೆ.
• ಆಯುರ್ವೇದ ಔಷಧಿಗಳನ್ನು ಮಾತ್ರ ಸೇವಿಸಿ, ನಾಲ್ಕು ತಿಂಗಳಲ್ಲಿ ಮೈಗ್ರೇನ್ ಶಾಶ್ವತವಾಗಿ ದೂರ ಆಗುತ್ತದೆ.

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
♣️♣️♣️♣️♣️
ಸ್ವಾಸ್ಥ್ಯ ಸರ್ವರದ್ದೂ ಆಗಲಿ

ಸಂಪರ್ಕಿಸಿ:📞 9148702645 9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda .

Admin

Leave a Reply

Your email address will not be published. Required fields are marked *

error: Content is protected !!