ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-6

ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-6

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-6

“ಪಿತ್ತಜ ಕಾಲದ”ದ ಪರಿಚಯ (25 ವರ್ಷಗಳಿಂದ 50ವರ್ಷಗಳ ವರೆಗೆ)
••••••••••••••••••••••••••••••

ದಿನದ ಮಧ್ಯದಲ್ಲಿ,
ರಾತ್ರಿಯ ಮಧ್ಯದಲ್ಲಿ,
ವಯಸ್ಸಿನ ಮಧ್ಯದಲ್ಲಿ,
ಭೋಜನದ ಮಧ್ಯದಲ್ಲಿ ಪಿತ್ತ ದೋಷವು ಪ್ರಧಾನವಾಗಿರುತ್ತದೆ.

ಮಧ್ಯ ವಯಸ್ಸಿನ ಬಲ, ಉತ್ಸಾಹ ಅತ್ಯಂತ ಹೆಚ್ಚು. “ಮಧ್ಯಮ ಆಯು” ಎಂದು ಕರೆಸಿಕೊಳ್ಳುವ ಈ ಅವಸ್ಥೆಯನ್ನು “ಪ್ರೌಢ” ಮತ್ತು “ತಾರುಣ್ಯ” ಎಂದು ವಿಭಾಗಿಸಿದ್ದಾರೆ.

💬 ಸ್ತ್ರೀ ಯರಿಗೆ-
▪️ಪ್ರೌಢಾವಸ್ಥೆ-
12 ವರ್ಷದಿಂದ 21ವರ್ಷಗಳ ವರೆಗೆ
▪️ತಾರುಣ್ಯಾವಸ್ಥೆ-
21 ರಿಂದ 55ವರ್ಷಗಳ ವರೆಗೆ
(‘ದ್ವಾದಶಂ’ ಊರ್ಧ್ವಂ ಯಾತಿ ‘ಪಂಚಾಶತಂ’ ಕ್ಷಯಮ್)

💬 ಪುರುಷರಿಗೆ-
▪️ಪ್ರೌಢಾವಸ್ಥೆ-
16 ವರ್ಷದಿಂದ 25ವರ್ಷಗಳ ವರೆಗೆ
▪️ತಾರುಣ್ಯಾವಸ್ಥೆ-
26 ರಿಂದ 60ವರ್ಷಗಳ ವರೆಗೆ

💬 ಪ್ರೌಢಾವಸ್ಥೆಯಲ್ಲಿ ಆಗುವ ಬದಲಾವಣೆಗಳು:

• ಪ್ರೌಢ ಅವಸ್ಥೆಯ ಆರಂಭದಲ್ಲಿ ವಯಸ್ಸಿನಲ್ಲಿ ತಾರುಣ್ಯಕ್ಕೆ ಬೇಕಾದ ಅಂಶಗಳು ಶರೀರದಲ್ಲಿ ರಚನೆಗೊಳ್ಳಲು ಆರಂಭಿಸುತ್ತವೆ. ಮಾನವ ಜೀವ ಸಂತತಿ ಬೆಳೆಯಲು ಶರೀರದಲ್ಲಿ ಈ ರಚನೆ ಅತ್ಯಗತ್ಯವಾಗಿ ಬೇಕು.
• ಪ್ರೌಢಾವಸ್ಥೆ ಅಂತ್ಯದಲ್ಲಿ ಮುಂದಿನ ಸಂತಾನೋತ್ಪತ್ತಿಗೆ ಬೇಕಾಗುವ ಆ ಧಾತುಗಳು ಪೂರ್ಣ ಬೆಳವಣಿಗೆಯಾಗಿರುತ್ತವೆ. ಅದಕ್ಕೆ ಕನಿಷ್ಠ 9 ವರ್ಷ ಬೇಕಾಗುತ್ತದೆ.

ಹಾಗಾಗಿ ಆಚಾರ್ಯರು
• ಸ್ತ್ರೀಯರಿಗೆ- ಮದುವೆ ವಯಸ್ಸನ್ನು 21 ವರ್ಷಕ್ಕೆ ಎಂದು ಹೇಳಿದ್ದಾರೆ.
• ಪುರುಷನಿಗೆ- ಮದುವೆ ವಯಸ್ಸನ್ನು 25 ವರ್ಷದಲ್ಲಿ ಮಾಡಲು ಹೇಳುತ್ತಾರೆ.
• ಅಲ್ಲಿಗೆ ಇಬ್ಬರಲ್ಲೂ ಶರೀರದ ಸರ್ವ ಧಾತುಗಳೂ ಪುಷ್ಠಿಯನ್ನು ಹೊಂದಿರುತ್ತವೆ ಎಂದಿದ್ದಾರೆ.

💬 ಅಂದರೆ ಶರೀರ ಸಂರಚನೆ ಮತ್ತು ಬೆಳವಣಿಗೆ ಎರೆಡು ರೀತಿಯಲ್ಲಿರುತ್ತದೆ:
1) ಬಾಲ್ಯ-ಕೌಮಾರ್ಯದಲ್ಲಿ ಶರೀರದ ಆರು ಧಾತುಗಳು ಪುಷ್ಠಿಯನ್ನು ಹೊಂದುತ್ತವೆ.
2) ಏಳನೇ ಧಾತು ಶುಕ್ರವು ಪ್ರೌಢಾವಸ್ಥೆಯಲ್ಲಿ ಆರಂಭವಾಗುತ್ತದೆ.
ಹಾಗು ಈ ಎರಡರ ಬೆಳವಣಿಗೆ ಸಂಪೂರ್ಣವಾಗುವುದನ್ನೇ ತಾರುಣ್ಯ ಎಂದು ಕರೆಯುತ್ತಾರೆ.

ಹಾಗಾಗಿ ಶುಕ್ರಧಾತು ಸಂಪೂರ್ಣ ಬೆಳವಣಿಗೆಯಾಗುವವರೆಗೆ ಮದುವೆ ಅಥವಾ ಸಂಭೋಗ ಕಾರ್ಯದಲ್ಲಿ ತೊಡಗುವುದನ್ನು ಬೇಡ ಎನ್ನುತ್ತದೆ ಆಯುರ್ವೇದ. “ಯಾವ ಶುಕ್ರಧಾತು ಕೌಮಾರ್ಯ ಅವಸ್ಥೆಯಲ್ಲಿ ಓಜಸ್ಸನ್ನು ಸಂವೃದ್ಧವಾಗಿಡುತ್ತಾ ಎಲ್ಲಾ ಧಾತುಗಳನ್ನು ವರ್ಧಿಸುತ್ತಿರುತ್ತದೆಯೋ ಅದು ಪ್ರೌಢ ಅವಸ್ಥೆಯಲ್ಲಿ ಪರಸ್ಪರ ಆಕರ್ಷಣೆಗೆ ಬೇಕಾದ ಎಲ್ಲವನ್ನೂ ಕಾಂತಿಯಿಂದ ಇಡುತ್ತದೆ. ಈ ಕಾಲದಲ್ಲಿ ಶುಕ್ರವನ್ನು ಕಳೆದುಕೊಂಡು ಸಂಭೋಗಾದಿಗಳಲ್ಲಿ ತೊಡಗಿಸಿಕೊಂಡವರು ಮತ್ತು ಸರಿಯಾಗಿ ಆಹಾರ ಸೇವಿಸದವರು ಶಾರೀರಿಕ-ಮಾನಸಿಕ ದುರ್ಬಲತೆಯಿಂದ ಬಳಲುತ್ತಾರೆ.”

💥 ಗಮನಕ್ಕೆ-
ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಹೊರ ಊರಿಗೆ ಕಳಿಸಿ ಪಿ.ಜಿ. ಗಳಲ್ಲಿ ಇಟ್ಟು ಪ್ರೌಢ ಅವಸ್ಥೆಯನ್ನು ದಾಟಿಸುವ ಪೋಷಕರು ತಮ್ಮ ಮಕ್ಕಳ ಶರೀರ ಪೋಷಣೆಗೆ ಸೂಕ್ತ ಆಹಾರವನ್ನು ಒದಗಿಸುವಲ್ಲಿ ಗಮನಕೊಡಬೇಕು.
ನಮ್ಮಲ್ಲಿ ರೋಗಿಗಳ ರೂಪದಲ್ಲಿ ಬರುವ ಶೇ. 80ಕ್ಕಿಂತ ಹೆಚ್ಚು ತರುಣ/ಣೆಯರಲ್ಲಿ ಪ್ರೌಢಾವಸ್ಥೆಯನ್ನು ಹಾಸ್ಟೆಲ್/ಪಿ.ಜಿ ಗಳಲ್ಲಿ ಇದ್ದು ಬಂದವರು ಅಥವಾ ಮನೆಯಲ್ಲಿದ್ದರೂ ಜಂಕ್ ಗೆ ಬಲಿಯಾದವರೇ ಹೆಚ್ಚು.

🔜ಪಿತ್ತಕಾಲದಲ್ಲಿ ಮಾನವರು ಅಗಾಧ ಶಕ್ತಿಯಿಂದ ಕೂಡಿರುತ್ತಾರೆ. ಅದನ್ನು ನಾಳಿನ ಸಂಚಿಕೆಯಲ್ಲಿ ನೋಡೋಣ.

⛅ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌤️ ಹಾಗೆಯೇ 🌞ಸ್ವಾಸ್ಥ್ಯ ಸರ್ವರದ್ದೂ ಆಗಲಿ🌞

ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!