ಸ್ಥೌಲ್ಯತೆಯ ಕಾರಣದಿಂದ ಸದಾ ಸೆಖೆಯಾಗುವುದನ್ನು ತಡೆಯುವುದು ಹೇಗೆ..?

ಸ್ಥೌಲ್ಯತೆಯ ಕಾರಣದಿಂದ ಸದಾ ಸೆಖೆಯಾಗುವುದನ್ನು ತಡೆಯುವುದು ಹೇಗೆ..?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಸ್ಥೌಲ್ಯತೆಯ ಕಾರಣದಿಂದ ಸದಾ ಸೆಖೆಯಾಗುವುದನ್ನು ತಡೆಯುವುದು ಹೇಗೆ?

ಆಯುರ್ವೇದ ಆಚಾರ್ಯರು ಇದನ್ನು “ಸ್ವೇದಾಬಾಧಃ” ಎಂದಿರುವರು. ಸೆಖೆ ಮತ್ತು ಅತಿಯಾದ ಬೆವರು ಸ್ಥೂಲರನ್ನು(ದಪ್ಪ ಇರುವವರು) ಅತಿಯಾಗಿ ಹಿಂಸಿಸುತ್ತದೆ.
ಇಂಥವರು, ಸೆಖೆ ತಡೆಯಲು ಫ್ಯಾನ್ ಬದಲು ಏರ್ ಕೂಲರ್ ಬಳಸಬಹುದು ಮತ್ತು ಗೋಡೆ ಫ್ಯಾನ್ ಕಿಟಕಿಗೆ ಕಟ್ಟಿಯೂ ಬಳಸಬಹುದು. ಆದರೆ ಇದು ತಾತ್ಕಾಲಿಕ ಪರಿಹಾರ ಮಾತ್ರ.

ನಿಜವಾದ ಕಾರಣ ಕಂಡುಹಿಡಿದು ಶಾಶ್ವತವಾಗಿ ನಿವಾರಿಸುವುದೇ ವೈದ್ಯನ ಕರ್ತವ್ಯ.

ಕೆಲವರು ತೆಳ್ಳನೆ ದೇಹ ಹೊಂದಿದ್ದರೂ ಸಹ ಸೆಖೆಯಿಂದ ಬಾಧೆ ಪಡುತ್ತಿರುತ್ತಾರೆ. ವಾಸ್ತವದಲ್ಲಿ ಇದಕ್ಕೆ ಕಾಣ ರಕ್ತದಲ್ಲಿರುವ “ಸಂಕ್ಲೇದ” ಎಂಬ ಹೆಸರಿನ ವಿಕೃತ ಬೆವರು. ಅದು ಉತ್ಪತ್ತಿಯಾಗುವುದನ್ನು ನಿಲ್ಲಿಸಿದರೆ ಶಾಶ್ವತ ಪರಿಹಾರವಾಗುವುದು, ಇದು ಒಂದೇ ದಿನಕ್ಕೆ ಮಾಡಿಕೊಳ್ಳುವ ಪರಿಹಾರವಂತೂ ಖಂಡಿತಾ ಅಲ್ಲ.

🔻 “ಸಂಕ್ಲೇದ” ನಿವಾರಕ ಉಪಾಯಗಳು👇

ಗಂಡಿಗೆ 25 ವರ್ಷದವರೆಗೆ ಸೆಖೆಯಾಗುವುದು, ಚೆನ್ನಾಗಿ ಬೆವರುವುದು, ಸಾಮಾನ್ಯ.
ಹೆಣ್ಣಿಗೆ 12ವರ್ಷದ ವರೆಗೆ ಈ ಲಕ್ಷಣ ಸಾಮಾನ್ಯ.

ಆ ವಯಸ್ಸಿನ ನಂತರ ಫ್ಯಾನ್ ಇಲ್ಲದೇ ಮಲಗಲು ಸಾಧ್ಯವಿಲ್ಲ ಎಂದರೆ ಶರೀರದಲ್ಲಿ “ಸಂಕ್ಲೇದ” ಎಂಬ ವಿಕೃತ ಬೆವರು ಇದೆ ಎಂದೇ ಅರ್ಥ. ನಾವು ಹಿಂದಿನ ಸಂಚಿಕೆಗಳಲ್ಲಿ ನೋಡಿದಂತೆ “ಕ್ಲೇದ” ಎಂಬ ಜಿಡ್ಡಿನ ಅಂಶ ಶರೀರದಿಂದ ಮೂತ್ರ ಮತ್ತು ಬೆವರಿನ ಮೂಲಕ ಹೊರಹೋಗುತ್ತಿರುತ್ತದೆ.
ಈ ಜಿಡ್ಡಿನ ಕಣಗಳ ಗಾತ್ರ ದೊಡ್ಡದಾದಲ್ಲಿ ಅದನ್ನು “ಸಂಕ್ಲೇದ” ಎಂದು ಕರೆಯುತ್ತೇವೆ. ಇದು ಸುಲಭವಾಗಿ ಬೆವರಿನಿಂದಾಗಲೀ ಮೂತ್ರದಿಂದಾಗಲೀ ಹೊರಹೋಗುವುದಿಲ್ಲ.

ರಕ್ತದಲ್ಲೇ ಉಳಿಯುವ ಈ ದೊಡ್ಡ ಗಾತ್ರದ ಜಿಡ್ಡಿನ ಕಣಗಳು (ಕೊಬ್ಬಿನಂಶವು ಜೀರ್ಣವಾದ ನಂತರ ಉಳಿಯುವ ಮಲರೂಪೀ ಜಿಡ್ಡು) ಬಿಸಿಯನ್ನು ಹೊರಹಾಕುತ್ತವೆ. ಆಗ ಮನುಷ್ಯನಿಗೆ ಹೆಚ್ಚು ಬಾಯಾರಿಕೆ ಮತ್ತು ತಣ್ಣನೆಯ ಜಾಗ ದೇಹಕ್ಕೆ ಹಿತ ಎನಿಸುತ್ತದೆ.
ಉದಾಹರಣೆಗೆ: ಪೂರಿ, ದೋಸೆ, ಕರಿದ ಪದಾರ್ಥ, ಚಿತ್ರಾನ್ನ ಮುಂತಾದವುಗಳ ಸೇವನೆಯ ನಂತರ ಪ್ರತಿಯೊಬ್ಬರೂ ಬಾಯಾರಿಕೆಯಿಂದ ಬಳಲುವುದು ಇದೇ ಕಾರಣಕ್ಕಾಗಿ.

ಇದನ್ನು ಹಾಗೆಯೇ ಬಿಟ್ಟರೆ, ಕೆಲ ವರ್ಷಗಳ ನಂತರ ಮಧುಮೇಹವು ಬರುತ್ತದೆ. ಇನ್ನೂ ನಿಯಂತ್ರಣ ಮಾಡದಿದ್ದರೆ ಮೂತ್ರಪಿಂಡಗಳ ಮೂಲಕ ಹೊರಹೋಗಲು ಸಫಲವಾಗುವ ಈ ಸಂಕ್ಲೇದವು ಅವುಗಳ ಸೋಸುವ ಪೊರೆಯಲ್ಲಿ ದೊಡ್ಡ ರಂಧ್ರಗಳನ್ನು ಮಾಡಿ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ. ಹೀಗೆ ಶರೀರದ ಸಂಕ್ಲೇದ ಖಾಲಿಯಾಗುತ್ತದೆ. ಮೂತ್ರಪಿಂಡಗಳು ಹಾಳಾದವರಿಗೆ ಅದುವರೆಗೆ ಇದ್ದ ಸೆಖೆ ಹೋಗಿ ತೀವ್ರ ಸ್ವರೂಪದ ಚಳಿಯನ್ನು ಅನುಭವಿಸುತ್ತಾರೆ.

👉ಪರಿಹಾರವೇನು?
ಒಂದೆರಡು ದಿನಗಳಲ್ಲೇ ಸೆಖೆಯಿಂದ ಮುಕ್ತಿ ಹೊಂದುವುದು ಅಸಾಧ್ಯ. ಈ ಸಂಕ್ಲೇದದ ಕಣಗಳು ಕೇವಲ ರಕ್ತದಲ್ಲಿ ಮಾತ್ರ ಉಳಿಯದೇ ಧಾತುಗಳಲ್ಲಿ ಲೀನವಾಗಿರುತ್ತವೆ. ಹಾಗಾಗಿ, ಮನುಷ್ಯ ತೀವ್ರ ಸೆಖೆಯಿಂದ ಬಳಲುತ್ತಿರುತ್ತಾನೆ. ಇದಕ್ಕೆ ವ್ಯಕ್ತಿಯು ಸ್ಥೂಲಕಾಯನಾಗಿರಲೇಬೇಕೆಂಬ ನಿಯಮವೇನಿಲ್ಲ.

ಯಾರಿಗೆ ಅಕಾಲದಲ್ಲಿ ಹೆಚ್ಚು ಹೆಚ್ಚು ಸೆಖೆ ಎನ್ನಿಸುತ್ತದೆಯೋ ಅವರೆಲ್ಲಾ ಪಾಲಿಸಲೇಬೇಕಾದ ಸರಳ ನಿಯಮಗಳೆಂದರೆ👇

◆ 21 ದಿನಗಳ ಕಾಲ ಜಿಡ್ಡಿನ ಅಂಶವನ್ನು ಸಂಪೂರ್ಣ ನಿಲ್ಲಿಸಿ.
◆ 6 ರಿಂದ 8 ಇಂಚು ಉದ್ದದ ಅಮೃತಬಳ್ಳಿಯು ಕಾಂಡವನ್ನು ದಿನಕ್ಕೆರಡು ಬಾರಿ ಅಗೆದು ತಿನ್ನಿ.
◆ ಮೊಸರು, ಉದ್ದು, ಸಿಹಿಪದಾರ್ಥ ಇವು ಸಂಕ್ಲೇದವನ್ನು ಹೆಚ್ಚು ಮಾಡುವುದರಿಂದ ಸಂಪೂರ್ಣ ನಿಲ್ಲಿಸಿ.
◆ಸಾಮಾನ್ಯವಾಗಿ 21 ದಿನಗಳಲ್ಲಿ ಸೆಖೆ ನಿಯಂತ್ರಣಕ್ಕೆ ಬರುತ್ತದೆ. ಒಂದೊಮ್ಮೆ, ಇನ್ನೂ ಬಾರದಿದ್ದಲ್ಲಿ 48 ದಿನಗಳ ಕಾಲ ಮುಂದುವರೆಸಿ.
◆ಈ ವಿಧಾನ ಮುಗಿದ ನಂತರ ಸಾಂಬಾರ್-ಪಲ್ಯಗಳಲ್ಲಿ ಮಾತ್ರ ಎಣ್ಣೆಯನ್ನು ಬಳಸಿ, ವಿಶೇಷ ದಿನಗಲ್ಲಿ ಮಾತ್ರ ಸಿಹಿಯನ್ನು ಬಳಸಿ.
Fermented ಆಹಾರವನ್ನು ಸೇವಿಸಬೇಡಿ.

🔻ವಿಶೇಷ ಸೂಚನೆ👇
1️⃣ಮಕ್ಕಳಲ್ಲಿ , 25 ವರ್ಷದ ಒಳಗಿನ ಯುವಕರಲ್ಲಿ ಉಂಟಾಗುವ ಸೆಖೆಯು ಅನಾರೋಗ್ಯಕರವಲ್ಲದ ಕಾರಣ ಮೇಲಿನ ನಿಯಮ ಅನ್ವಯಿಸುವುದಿಲ್ಲ.

2️⃣ಮುಟ್ಟು ನಿಲ್ಲುವ ಕಾಲದಲ್ಲಿ ಮಹಿಳೆಯರಿಗೆ ಉಂಟಾಗುವ ಸೆಖೆಯು ಹಾರ್ಮೋನ್ ಗಳ ವ್ಯತ್ಯಾಸದಿಂದ ಉಂಟಾಗಿರುತ್ತದೆ. ಆದಾಗ್ಯೂ ಮೇಲಿನ ನಿಯಮಗಳನ್ನು ಪಾಲಿಸಿದರೆ ಶೇಕಡಾ 50 ರಷ್ಟು ಸೆಖೆ ನಿವೃತ್ತಿಯಾಗುತ್ತದೆ. ಉಳಿಯುವ ಸೆಕೆಯು ಅಂಶಕ್ಕೆ ಕೆಲಕಾಲ ಆಯುರ್ವೇದದ ಚಿಕಿತ್ಸೆಯನ್ನು ಮಾಡಿದರೆ ಸಂಪೂರ್ಣ ಗುಣಮುಖರಾಗುತ್ತಾರೆ.

🍀🍀ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍀🍀
ಹಾಗೆಯೇ
🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ

ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!