ಶಿಕಾರಿಪುರ: ಒಂದು ವರ್ಷದಲ್ಲಿ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿ ಕಾರ್ಯ ಯಶಸ್ವಿಯಾಗಲಿದೆ: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ: ಒಂದು ವರ್ಷದಲ್ಲಿ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿ ಕಾರ್ಯ ಯಶಸ್ವಿಯಾಗಲಿದೆ: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ:ಮೂಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಸಂಕಲ್ಪದತೆ ತಾಲ್ಲೂಕಿನ ನೀರಾವರಿ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮ ಭರದಿಂದ ಸಾಗುತ್ತಿದ್ದು, ಮುಂದಿನ ಆಗಸ್ಟ್ ತಿಂಗಳ ಅಂತ್ಯದೊಳಗೆ ತಾಲ್ಲೂಕಿನ ಸರ್ವಾಂಗಿಣ ಅಭಿವೃದ್ಧಿ ಕಾರ್ಯ ಯಶಸ್ವಿಯಾಗಲಿದೆ ಎಂದು ಜಿಲ್ಲೆಯ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಶಿಕಾರಿಪುರ: ತಾಲ್ಲೂಕಿನ ಕೊಪ್ಪದಕೆರೆಯ (ಶೀಲವಂತನಕೊಪ್ಪ) ಏತ ನೀರಾವರಿ ಕಾಮಗಾರಿಯ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಐದು ಹೋಬಳಿಗೆಗಳಿಗೆ ಏತ ನೀರಾವರಿ ಯೋಜನೆಯ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಗುಡ್ಡದತುಮ್ಮಿನಕಟ್ಟೆ ಮೂಲಕ ಕೊಪ್ಪದ ಕೆರೆಗೆ ನೀರು ಹಾಯಿಸುವ ಕೆಲಸ ಈಗಾಗಲೇ ನಡೆಯುತ್ತಿದ್ದು

ಇದಕ್ಕೆ ಸುಮಾರು 3 ಕೋಟಿ ವೆಚ್ಚದಲ್ಲಿ 500 ಹೆಕ್ಟೆರಗಿಂತ ಹೆಚ್ಚು ಜಮೀನುಗಳಿಗೆ ನೀರಾವರಿಯಾಗುವಂತಹ ಕೊಪ್ಪದ ಕೆರೆಗೆ ನೀರಿನ ಸಮಸ್ಯೆ ಇದ್ದಂತಹಾ ಸಂದರ್ಭದಲ್ಲಿ, ಸುಮಾರು 350 ಹೆಚ್.ಪಿ ಯ 3 ಮೋಟಾರ್ ಮುಖಾಂತರ ಏತ ನೀರಾವರಿಯನ್ನು ಮಾಡಿಸಿ ಸುಮಾರು 3.6 ಕಿ.ಲೋ ಮೀಟರ್ ಪೈಪ್ ಲೈನ್ ಮಾಡಿ ನೀರು ತುಂಬಿಸುವ ಯೋಜನೆ ಹಿಂದಿನ ಸರ್ಕಾರವಿದ್ದಾಗ ಅನುಧಾನ ಬಿಡುಗಡೆ ಮಾಡಿಸಲಾಯಿತು

ನೀರಾವರಿ ಯೋಜನೆಗೆ ಹಣ ಸಕಾಗಾದ ಕಾರಣ ಸನ್ಮಾನ್ಯ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಇನ್ನೂ ಹೆಚ್ಚಿನ ಅನುಧಾನವನ್ನು ಬಿಡುಗಡೆ ಮಾಡಿಸಲಾಯಿತು ನೀರು ಎಲ್ಲೂ ಸೋರಿಕೆಯಾದಂತೆ ಪೈಪ್ ಲೈನ್ ಮೂಲಕ ನೇರವಾಗಿ ಕೊಪ್ಪದ ಕೆರೆಗೆ ನೀರು ತುಂಬಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.

ಪೈಪ್ ಲೈನಿಗೆ 1 ಕೋಟಿ, ಪಂಪ್ ಹೌಸ್ ನಿರ್ಮಾಣಕ್ಕೆ 1 ಕೋಟಿ, ವಿಧ್ಯುತ್ ಕಾಮಗಾರಿಗೆ 1 ಕೋಟಿ ಅವಶ್ಯಕತೆ ಇದ್ದು, ಅತೀ ಶೀಘ್ರದಲ್ಲಿ ಮುಖ್ಯ ಮಂತ್ರಿಯವರಿಂದ ಹಣ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಈಗಾಗಲೇ 1 ಕೋಟಿ ಅನುಧಾನದಲ್ಲಿ ಕೆರೆಯ ಹೂಳನ್ನು ತೆಗೆಯುವ ಕೆಲಸ ಮಾಡಲಾಗಿದೆ. ಇದರಿಂದ ಕಸಬಾ ಹೋಬಳಿಯ ಅಂಬಾರಗೊಪ್ಪ, ಮುಡುಬ ಸಿದ್ದಾಪುರ, ತುಮರಿ ಹೊಸೂರು, ಸುರಗೀಹಳ್ಳಿ, ಗುಡ್ಡದ ತುಮ್ಮಿನಕಟ್ಟೆ ಸೇರಿದಂತೆ ಅನೇಕ ಗ್ರಾಮೀಣದ ರೈತರಿಗೆ 2 ಬೆಳೆ ಬೆಳೆಯಲು ನೆರವಾಗುವಂತೆ ಮಾಡಲಾಗುತ್ತಿದೆ.

ಕಸಬಾ ಹೋಬಳಿಯ ಇನ್ನುಳಿದ ಏತ ನೀರಾವರಿ ಯೋಜನೆಗೆ ಸುಮಾರು 120 ಕೋಟಿ ಅವಶ್ಯಕತೆ ಇದ್ದು, ಅಲ್ಲಿಯೂ ಸಹಾ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು, ಮುಂದಿನ ಅಧಿವೇಶನದ ನಂತರ ಮುಖ್ಯ ಮಂತ್ರಿಯವರನ್ನು ಕರೆಸಿ ನಮ್ಮ ಕಸಬಾ ಹೋಬಳಿಯ ಕಪ್ಪನಹಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸಂಪೂರ್ಣ ನೀರಾವರಿ ಯೋಜನೆ ಮಾಡಿಸಲಾಗುವುದು. ಇದರಿಂದ ನಮ್ಮ ಶಿಕಾರಿಪುರ ತಾಲ್ಲೂಕಿನ 5 ಹೋಬಳಿಗಳ ನೀರಾವರಿ ಯೋಜನೆ ಮಾಡಿಸುವುದರ ಮೂಲಕ ತಾಲ್ಲೂಕಿನ ರೈತರ ಹಿತ ಕಾಪಾಡುವ ಯಡಿಯೂರಪ್ಪರವರು ಕಂಡ ಕನಸು ನನಸಾಗುತ್ತದೆ ಎಂದು ತಿಳಿಸಿದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!