ಶಿಕಾರಿಪುರ: ನಾರಾಯಣ ಗುರುಗಳ ತತ್ವ ಸಿದ್ದಾಂತ ಆದರ್ಶವನ್ನು ಎಲ್ಲಾರೂ ಪಾಲಿಸಬೇಕು: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ: ನಾರಾಯಣ ಗುರುಗಳ ತತ್ವ ಸಿದ್ದಾಂತ ಆದರ್ಶವನ್ನು ಎಲ್ಲಾರೂ ಪಾಲಿಸಬೇಕು: ಸಂಸದ ಬಿ.ವೈ ರಾಘವೇಂದ್ರ..!


ಶಿಕಾರಿಪುರ: ಪಟಣ್ಣದ ತಾ.ಪಂ ಸಭಾಗಂಣದಲ್ಲಿ ಆಯೋಜಿಸಿದ ಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಸಂಸದ ಬಿವೈ ರಾಘವೇಂದ್ರ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ನಾರಾಯಣ ಗುರುಗಳು ಕೇರಳದ ಪ್ರಸಿದ್ಧ ಗುರುಗಳಾಗಿದ್ದು ಕೇರಳದಲ್ಲಿ ನಡೆಯುತ್ತಿದ್ದ ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಮಹಾನ್ ಗುರುಗಳಾಗಿದ್ದಾರೆ ಇವರ ಚಿಂತನೆ ಕೇರಳಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶವೇ ಅವರ ತತ್ವ ಚಿಂತನೆಯನ್ನು ಮೆಚ್ಚಿದೆ.


ಬ್ರಹ್ಮ್ಮ ಶ್ರೀ ನಾರಾಯಣ ಗುರುಗಳು ಭಾರತ ಕಂಧಶ್ರೇಷ್ಠ ಸಮಾಜಸುಧಾರಕರು. ಸರವರಿಗೂ ದೇವಾಲಯ ಪ್ರವೇಶಕ್ಕೆ ಅವಕ್ಕಾಶವಿರುವ ವಿಶ್ವ ಮಾನವ ಆಲಯ ವನ್ನು ಷ್ಠಾಪಿಸುವ ಮೂಲಕ, ಧಾರ್ಮಿಕ ಭಯೋತ್ಪಾದಕ ಮೌಡ್ದ್ಯಾ ವನ್ನು, ಧಾರ್ಮಿಕ, ಸಾಮಾಜಿಕ, ಅಮಾನವೀಯ ತೆಗಳನ್ನು ಬೇರುಸಹಿತ ಕಿತ್ತೆಸೆದು, ಸಮಾನತೆಯನ್ನು ಸಾಧಿಸಿದರು.


ಆ ಮೂಲಕ ಸುಂದರ, ಸ್ವಚಂದವಾದ ನವಭಾರತಕ್ಕೆ ಬುನಾದಿಯನ್ನು ಹಾಕುವ ಮೂಲಕ ಇಂದಿನದಿವ್ಯ ಭಾರತಕ್ಕೆ ನಾರಾಯಣಗುರುಗಳಿಗೆ ಗೌರವಿಸುದೆಂದರೆ, ನಮ್ಮ ತಲೆಮಾರಿನಲ್ಲೂ ಇನ್ನೂ ಉಳಿದುಕೊಂಡ ಅನೇಕ ಸಾಮಾಜಿಕ ಶಾಪಗಳಾದ, ಮಧ್ಯಪಾನ ಸೇವನೆ ಮಧ್ಯ್ಯ ವ್ಯಾಪಾರದಂತ, ಇಂಥ ಪದ್ದತಿಗಳ ವಿರುದ್ಧ ಹೋರಾಡಿ ಹೊಸ ವೈಚಾರಿಕ ಮನೋಭಾವನೆಯನ್ನು ಜನರಲ್ಲಿ ಬಿತ್ತಿದರು.


ಸಮಾನತೆ,ಸ್ವಾವಲಂಭನೆಯ ಬದುಕನ್ನು ನಡೆಸಲು ಜನರಿಗೆ ಸರಳದಾರಿಯನ್ನು ಹಾಕಿಕೊಟ್ಟವರು ಬ್ರಹ್ಮ ಶ್ರೀ ನಾರಾಯಣಗುರುಗಳು ಅವರ ಸಾಮಾಜಿಕ ಕಳಕಳಿ ಮೂಡಿಸುವ ಅವರ ಚಿಂತನೆ ಎಲ್ಲಾವರ್ಗದ ಜನರಿಗೂ ಸ್ಪೂರ್ತಿಯಾಗಿದೆ ಹಿಂದಿನ ಸಮಾಜ ಇಂತಹ ದಾರ್ಶನಿಕರ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ ಜಯಂತಿಗಳು ಕೇವಲ ಜಯಂತಿ ಮಾತ್ರ ಸೀಮಿತವಾಗದೆ ಅವರ ಆದರ್ಶವನ್ನು ಪಾಲಿಸುವ ಒಟ್ಟಿನಲ್ಲಿ ನಾವೆಲ್ಲ ಸಾಗಬೇಕಿದೆ ಎಂದರು.


ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ಸಮಿತಿ ಉಪಧ್ಯಕ್ಷ ಕೆ.ರೇವಣ್ಣಪ್ಪ, ತಾ.ಪಂ ಅಧ್ಯಕ್ಷ ಪ್ರಕಾಶ್, ಜಿ.ಪಂ ಮಮತಸಾಲಿ, ಎಸಿ ನಾಗರಜ್, ತಹಶಿಲ್ದಾರ ಕವಿರಾಜ್, ಈಡಿಗ ಸಮಾಜದ ಅಧ್ಯಕ್ಷ ಮಂಜುನಾಥ್ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!