ಕೊರೋನಾ ಸೋಂಕಿನ ಎಚ್ಚರಿಕೆಯ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ..!

ಕೊರೋನಾ ಸೋಂಕಿನ ಎಚ್ಚರಿಕೆಯ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:

ಕೊರೋನಾ ಸೋಂಕಿನ ಎಚ್ಚರಿಕೆಯ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ

3️⃣ಮೂರನೇ ಹಂತ:
ಎರಡನೇ ಹಂತದಲ್ಲಿ ಸೋಂಕಿತರಿಂದ ಆರೋಗ್ಯವಂತರಿಗೆ ರೋಗ ಹರಡುವ ಸಾಧ್ಯತೆ ಹೆಚ್ಚು. ಅದೇ ಮೂರನೇ ಹಂತದಲ್ಲಿ ಇನ್ನೊಬ್ಬರಿಗೆ ಹರಡುವ ಸಾಧ್ಯತೆಯ ಜೊತೆಗೆ ರೋಗಿಯನ್ನು ಎಲ್ಲಾ ಹಂತಗಳಿಂದ ಮೆತ್ತಗೆ ಮಾಡುತ್ತದೆ.

ಪುಪ್ಪುಸಗಳು ಸೋಂಕಿನಿಂದ ನ್ಯೂಮೋನಿಯಕ್ಕೆ ತುತ್ತಾಗುವ ಸಾಧ್ಯತೆ ಅತೀ ಹೆಚ್ಚು. ಇದರಿಂದಾಗಿ, ಆಮ್ಲಜನಕದ ಕೊರತೆ ಉಂಟಾಗುವುದಾದರೂ ತಕ್ಷಣ ಮಾರಣಾಂತಿಕವಲ್ಲ. ಇಲ್ಲಿ ವೈದ್ಯಕೀಯ ನಿಗಾದ ಅವಶ್ಯಕತೆ ತೀವ್ರವಾಗಿ ಕಾಣದಿದ್ದರೂ ಆಗಾಗ ರಕ್ತದ ಆಕ್ಸಿಜನ್ ಸಾಂದ್ರತೆಯನ್ನು, ಜ್ವರವನ್ನು ಪರೀಕ್ಷೆ ಮಾಡುತ್ತಿರಬೇಕು. ಇವುಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಾಗುವುದು ಒಳಿತು.

ನ್ಯೂಮೋನಿಯಕ್ಕಿಂತಲೂ ಅಪಾಯಕಾರಿಯಾಗಿ ಕಾಡುವುದು ರಕ್ತದ ಸಾಂದ್ರತೆ. ಇಲ್ಲಿ ಪುಪ್ಪುಸಗಳ ಸೂಕ್ಷ್ಮ ರಕ್ತನಾಳಗಳಲ್ಲಿ ಸಾಂದ್ರೀಕೃತಗೊಳ್ಳುವ ರಕ್ತವು ಅಮ್ಲಜನಕವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ. ರಕ್ತದಲ್ಲಿ ನಾರಿನಂತಹ ಅಂಶ ಹೆಚ್ಚುವುದನ್ನು ಕಾಣುತ್ತೇವೆ. ಇದನ್ನು, D-Dimer ಎಂಬ ರಕ್ತ ಪರೀಕ್ಷೆಯ ಮೂಲಕ ಕಂಡುಕೊಳ್ಳಬಹುದು. ESR ಹೆಚ್ಚುವುದಕ್ಕೆ ಎರಡನೇ ಹಂತದ ಸೋಂಕು ಅಷ್ಟೇ ಅಲ್ಲದೇ ಈ ನಾರಿನಂತಹ ಅಂಶವೂ ಸಹ ಕಾರಣವಾಗುತ್ತದೆ.

ವಾಸ್ತವದಲ್ಲಿ ಇದು ಅಪಾಯಕಾರಿ ಹಂತ. ಇಲ್ಲಿ ಸರ್ವರೀತಿಯ ಪ್ರಯತ್ನಗಳು ಅತ್ಯಗತ್ಯ. ಅಂದರೆ, ಆಮ್ಲಜನಕದ ಪೂರೈಕೆ, ರಕ್ತವನ್ನು ತೆಳುವಾಗಿಸುವ ಔಷಧಗಳು, ಎರಡನೇ ಹಂತದ ಸೋಂಕು ನಿವಾರಕಗಳು ಮತ್ತು ಬಹುಮುಖ್ಯವಾಗಿ ಆಂತರಿಕ ವಾತಾವರಣವನ್ನು ಮರಳಿ ತರಲು ಸಹಾಯಕವಾಗುವ ಹಾಗೆಯೇ ಸರ್ವಧಾತುಗಳಿಗೂ ರೋಗನಿರೋಧಕ ಶಕ್ತಿಯನ್ನು, ಬಲವನ್ನೂ ವರ್ಧಿಸುವ ಆಯುರ್ವೇದಿಯ ಔಷಧಿಗಳು, ಆಹಾರಕ್ರಮವೂ ಬೇಕೇ ಬೇಕು.

ಆಯುರ್ವೇದೀಯ ಚಿಕಿತ್ಸಾ ವಿಧಿ ವಿಧಾನಗಳನ್ನು ಅನುಸರಿಸುತ್ತಾ ಜೊತೆಗೆ ಸ್ವಲ್ಪ ಮಟ್ಟಿನ (ಆದರೆ,ಅತ್ಯಾವಶ್ಯಕವಾಗಿ ಬೇಕಾದ) ಆಧುನಿಕ ಪದ್ಧತಿಯ ಸಹಕಾರವನ್ನು ಕೊಡುವುದಾದರೆ ರೋಗಿಯನ್ನು ಅತ್ಯಂತ ಸರಳವಾಗಿ ಸಹಜ ಸ್ಥಿತಿಗೆ ತರಬಹುದು.

ಕೇವಲ ಒಂದು ಪದ್ಧತಿಯಿಂದಲೇ ಪರಿಹಾರವನ್ನು ಹುಡುಕ ಹೊರಟು ರೋಗಿಯನ್ನು ದುಃಸ್ಥಿತಿಗೆ ತಳ್ಳುವ ಬದಲು ಈ ಎರಡೂ ಪದ್ಧತಿಗಳನ್ನು ಸಮನ್ವಯಿಸಿದಲ್ಲಿ , ಇಂದಿನ ತುರ್ತು ಪರಿಸ್ಥಿತಿಗೆ ಅದೊಂದು ಶ್ರೇಷ್ಠ ಉತ್ತರವಾಗಬಲ್ಲದು.

ಆತ್ಮೀಯರೇ,
ಧೈರ್ಯದಿಂದ ಮತ್ತು ಚಿಕಿತ್ಸಾ ಸಮನ್ವಯದಿಂದ ಎದುರಿಸಿದಲ್ಲಿ ಕೊರೋನಾ ಒಂದು ಸಣ್ಣ ನೆಗಡಿಯಷ್ಟೇ….
ಎಲ್ಲರೂ ಗೆಲ್ಲುತ್ತೇವೆ 💯

ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!