ಶಿಕಾರಿಪುರ : ಭೂಸುಧಾರಣಾ ಕಾಯ್ದೆ ಮೂಲಕ ಜಮೀನು ಪಡೆದ ಬಿ.ಎಸ್ ವೈ ಅದೇ ಕಾಯ್ದೆಯನ್ನು ನಿರ್ಮೂಲನೆ‌ ಮಾಡುತ್ತಿದ್ದಾರೆ: ಉಮೇಶ್ ಮಾರವಳ್ಳಿ..!

ಶಿಕಾರಿಪುರ : ಭೂಸುಧಾರಣಾ ಕಾಯ್ದೆ ಮೂಲಕ ಜಮೀನು ಪಡೆದ ಬಿ.ಎಸ್ ವೈ ಅದೇ ಕಾಯ್ದೆಯನ್ನು ನಿರ್ಮೂಲನೆ‌ ಮಾಡುತ್ತಿದ್ದಾರೆ: ಉಮೇಶ್ ಮಾರವಳ್ಳಿ..!

ಶಿಕಾರಿಪುರ:ರಾಜ್ಯದಲ್ಲಿ ಪ್ರಥಮ ಬಾರಿಗೆ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಅನೇಕ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ‌ಮಾಡಿ ರೈತರ ಬದುಕಿಗೆ ಗೋರಿ ತೋಡಿ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಉಮೇಶ್ ಮಾರವಳ್ಳಿ ಆರೋಪಿಸಿದರು.

ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು 60 ರ ದಶಕದ ಪೂರ್ವದಲ್ಲಿ ಅನೇಕ ಭೂಮಾಲೀಕರು, ಇನಾಂದಾರರ ಒಡೆತನದಲ್ಲಿ ಭೂಮಿ ಇತ್ತಲ್ಲದೇ, ಹಣ ಉಳ್ಳವರಿಂದಲೇ ಭೂಮಿಯನ್ನು ಖರೀದಿಸಲಾಗುತ್ತಿತ್ತು.

ಬಿ.ಎಸ್ ಯಡಿಯೂರಪ್ಪನವರು 1974-75 ರಲ್ಲಿ ಶಿಕಾರಿಪುರ ತಾಲೂಕಿನ ಹೊಸುರು ಹೋಬಳಿ ಚೆನ್ನಹಳ್ಳಿ ಗ್ರಾಮದ 74/1 ಮತ್ತು 75/2 ಭೂಸುಧಾರಣಾ ಕಾಯ್ದೆ ಮೂಲಕ ಬ್ರಮಾದೇವಿ ಎನ್ನುವವರ ಜಮೀನನ್ನು ಸರ್ಕಾರಕ್ಕೆ ಅರ್ಜಿ ಹಾಕಿ 8 ಎಕ್ಕರೆ 17 ಗುಂಟೆ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ. ಅದರೆ ಅದೇ ಕಾಯ್ದೆಯಿಂದ ಜಮೀನ ಪಡೆದು ಅದೇ ಕಾಯ್ದೆಯನ್ನು ನಿರ್ಮೂಲನೆ ಮಾಡಲು ಮುಂದಾಗಿರುವುದು ವಿಪರ್ಯಸ.

ಒಂದು ಇಂಚು ಭೂಮಿಹೊಂದಿಲ್ಲದ ಹಲವಾರು ಗೇಣಿದಾರರು ನಿಜವಾದ ರೈತರು ಅನೇಕ ಚಳುವಳಿ ನಡೆಸಿ ಗೇಣಿದಾರ ಪದ್ಧತಿ ವಿರುದ್ಧ ಚಳುವಳಿ ನಡೆಸಿದರ ಫಲವಾಗಿ 1974-75 ರಲ್ಲಿ ಕೇಂದ್ರದ ಇಂದಿರಾಗಾಂಧಿ ಹಾಗೂ ರಾಜ್ಯದ ದೇವರಾಜ್ ಅರಸು ರವರ ಸರ್ಕಾರ ಭೂ ಸುಧಾರಣಾ ಕಾಯಿದೆಯ ತಿದ್ದುಪಡಿ ವಿಧೇಯಕ ಮಂಡನೆ ಮಾಡಿ ಉಳುವವನೇ ಭೂಮಿ ಒಡೆಯ ಎಂಬ ಕ್ರಾಂತಿಕಾರಿ ಕಾಯಿದೆಯನ್ನು ಜಾರಿಗೆ ತಂದರು.

ಈ ಕಾಯ್ದೆಯಿಂದ ಕೋಟ್ಯಂತರ ರೈತರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಯಿತಲ್ಲದೇ,ಅವರ ಬದುಕಿಗೆ ಆಶಾದಾಯಕ ಬೆಳವಣಿಗೆ ನೀಡಲಾಯಿತು.

ಉಳ್ಳವರೇ ಭೂಮಿಯನ್ನು ಖರೀದಸುತ್ತಾ ಹೋದರೆ ದೇಶದ ಆಹಾರ ಭದ್ರತೆಗೆ ತೊಂದರೆಯುಂಟಾಗುತ್ತದೆ ಎಂಬುದನ್ನು ಅರಿತು ಈ ಕಾಯ್ದೆ ಜಾರಿಗೆ ತರಲಾಗಿತ್ತು. ಈಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಭೂ ಸುಧಾರಣಾ ಕಾಯಿದೆ ತಿದ್ದುಪಡಿ ಮಾಡುತ್ತಿದ್ದಾರೆ.

ಇದರಿಂದ ದೇಶದಲ್ಲಿ ಸ್ವಾವಲಂಬಿಯಾಗಿ ಬದುಕುವ ಹಾಗೂ ದೇಶದ ಜನತೆಗೆ ಆಹಾರವನ್ನು ಬೆಳೆಯುವ ರೈತರಿಗೆ ಗೋರಿ ತೋಡಿ ಮರಣ ಶಾಸನ ಜಾರಿಗೆ ತಂದು ದೇಶದಲ್ಲಿ ಆಹಾರವನ್ನು ಬೆಳೆಯುವ ರೈತರಿಗೆ ಪುನಃ ಗೇಣಿದಾರರ ಪದ್ಧತಿ ಜಾರಿಗೆ ತರಲು ಮುಂದಾಗಿದ್ದಾರೆ ಎಂದ ಅವರು, ಆಗ ಅನೇಕ ಉಳ್ಳವರು ಭೂಮಿಯನ್ನು ಖರೀದಿಸಲಾಗುತ್ತಿದ್ದರಿಂದ 79/ಎ,ಬಿ,ಸಿ ಹೀಗೆ ನಿಯಮಾವಳಿಗಳನ್ನು ಜಾರಿಗೆ ತರಲಾಯಿತು.

79/ಎ ಕಾಯ್ದೆಯ ಪ್ರಕಾರ ಭೂಮಿಯ ಖರೀದಿಗೆ ಆದಾಯ ಪ್ರಮಾಣ ಪತ್ರ ನೀಡುವಂತೆ, 79/ಬಿ ರೈತರಲ್ಲದವರಿಗೆ ಭೂಮಿಯನ್ನು ಖರೀದಿಸಿದಂತೆ, 79/ಸಿ ತಪ್ಪು ಮಾಹಿತಿ ನೀಡಿ ರೈತರ ಜಮೀನುಗಳ ಖರೀದಿಸದಂತೆ, ಈರೀತಿ ವಿವಿಧ ಕಾಯ್ದೆಯಿಂದ ಅಕ್ರಮವಾಗಿ ರೈತರ ಜಮೀನುಗಳ ಖರೀದಿಸುವವರಿಗೆ ಕಡಿವಾಣ ಹಾಕಲಾಗಿತ್ತು.

ಆದರೀಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಭೂ ಸುಧಾರಣಾ ಕಾಯಿದೆಯನ್ನು ತಿದ್ದುಪಡಿ ಮಾಡಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ, ಭೂಮಾಫಿಯಾಗಳಿಗೆ, ಕಾರ್ಪೋರೇಟರ್ ಗಳಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೆರವಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಉಳ್ಳಿ ಪಕ್ಷದ ಮುಖಂಡರಾದ ರೇಣುಕಯ್ಯ, ಧಾರವಾಡ ಸುರೇಶ್ ಇದ್ದರು.

Admin

Leave a Reply

Your email address will not be published. Required fields are marked *

error: Content is protected !!